ಲಕ್ನೋ: ಇನ್ಮುಂದೆ ಶ್ರೇಷ್ಠ ವ್ಯಕ್ತಿಗಳ ಜಯಂತಿಯಂದು ಉತ್ತರಪ್ರದೇಶದಲ್ಲಿ ಶಾಲೆಗಳಿಗೆ ರಜೆ ನೀಡುವುದಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇಂದು ಡಾ. ಬಿಆರ್ ಅಂಬೇಡ್ಕರ್ ಅವರ 126ನೇ ಜನ್ಮ ದಿನಾಚರಣೆಯ ಅಂಗವಾಗಿ ಪುಷ್ಪ ನಮನ ಸಲ್ಲಿಸಿ ನಂತರ ಮಾತನಾಡಿದ ಯೋಗಿ ಆದಿತ್ಯನಾಥ್, ಶ್ರೇಷ್ಠ ವ್ಯಕ್ತಿಗಳ ಜಯಂತಿಯಂದು ಶಾಲೆಗಳಿಗೆ ರಜೆ ನೀಡುವುದು ಸರಿಯಲ್ಲ ಅಂದ್ರು.
Advertisement
ಅನೇಕ ಸಂದರ್ಭಗಳಲ್ಲಿ ಯಾಕೆ ರಜೆ ಕೊಟ್ಟಿದ್ದಾರೆ ಎನ್ನುವುದೇ ಮಕ್ಕಳಿಗೆ ಗೊತ್ತಿರುವುದಿಲ್ಲ. ಹೀಗಾಗಿ ಅವರನ್ನು ಸ್ಮರಿಸುವ ಸಲುವಾಗಿ ನೀಡುವ ರಜೆ ವ್ಯರ್ಥವಾಗುತ್ತದೆ. ಅದರ ಬದಲು ಈ ದಿನಗಳಂದು 2 ಗಂಟೆಗಳ ಕಾಲ ಮಕ್ಕಳಿಗೆ ಅಂತಹ ನಾಯಕರ ಬಗ್ಗೆ ಪಾಠ ಮಾಡಬೇಕು ಅಂತ ಯೋಗಿ ಆದಿತ್ಯನಾಥ್ ಹೇಳಿದ್ರು
Advertisement
ಇಂತಹ ರಜೆಗಳಿಂದ 220 ದಿನಗಳ ಶೈಕ್ಷಣಿಕ ಅವಧಿ 130 ರಿಂದ 140 ದಿನಗಳಿಗೆ ಇಳಿದಿದ್ದು, ಮಕ್ಕಳಿಗೆ ಕಲಿಯಲು ಇಷ್ಟು ಸಮಯ ಸಾಕಾಗುವುದಿಲ್ಲ ಅಂದ್ರು.
Advertisement
UP CM says there will be no holiday in schools on birth anniversaries of great personalities, instead children would be taught about them. pic.twitter.com/HfpDIIJjap
— ANI UP (@ANINewsUP) April 14, 2017