Connect with us

Latest

ಇಂದಿನಿಂದ ವಿಐಪಿ ಸಂಸ್ಕೃತಿಗೆ ಅಧಿಕೃತ ಬ್ರೇಕ್ – ಕೆಂಪೂಗೂಟದ ಕಾರು ಬಳಸಿದ್ರೆ ಬೀಳುತ್ತೆ ದಂಡ

Published

on

ನವದೆಹಲಿ: ವಿವಿಐಪಿ ಸಂಸ್ಕೃತಿಗೆ ಅಂತ್ಯಹಾಡಲು ಕೆಂಪು ಗೂಟದ ಕಾರುಗಳಿಗೆ ತಿಲಾಂಜಲಿ ಇಟ್ಟಿದ್ದ ಪ್ರಧಾನಿ ಮೋದಿ ಸರ್ಕಾರದ ನಿಯಮ ಇಂದಿನಿಂದ ಅಧಿಕೃತವಾಗಿ ಜಾರಿಯಾಗಲಿದೆ.

ಏಪ್ರಿಲ್ 19 ರಂದು ಆಂಬುಲೆನ್ಸ್, ಅಗ್ನಿಶಾಮಕ ವಾಹನ ಹಾಗೂ ಪೊಲೀಸ್ ಕಾರ್‍ಗಳನ್ನು ಹೊರತು ಪಡಿಸಿ, ಯಾರೊಬ್ಬರು ಕೆಂಪುಗೂಟದ ಕಾರುಗಳನ್ನು ಬಳಸಬಾರದು ಅಂತ ಸಾರಿಗೆ ಸಚಿವಾಲಯ ಘೋಷಣೆ ಮಾಡಿತ್ತು. ಪ್ರಧಾನಿ ಮೋದಿ, ಮುಖ್ಯಮಂತ್ರಿಗಳು, ಹಾಗೂ ಮುಖ್ಯನ್ಯಾಯಧೀಶರು ಕೂಡ ಕೆಂಪುಗೂಟದ ಕಾರು ಬಳಸುವಂತಿಲ್ಲ ಎಂದು ಹೇಳಲಾಗಿತ್ತು.

ಅದರಂತೆ ಇಂದಿನಿಂದ ಕೆಂಪುಗೂಟದ ಕಾರು ರಸ್ತೆಗಳಲ್ಲಿ ಓಡಾಡುವಂತಿಲ್ಲ. ಒಂದು ವೇಳೆ ಓಡಾಡಿದರೆ ಮೋಟಾರು ವಾಹನ ಕಾಯ್ದೆ ಪ್ರಕಾರ ದಂಡ ವಿಧಿಸಲಾಗುತ್ತೆ. ಆದ್ರೆ ಆಂಬ್ಯಲೆನ್ಸ್‍ಗಳು, ಅಗ್ನಿಶಾಮಕದಳದವರು ಮಾತ್ರ ಕೆಂಪು ದೀಪದ ಬದಲು ನೀಲಿ ದೀಪ ಬಳಸಬಹುದು.

ಇದನ್ನೂ ಓದಿ: ವಿಐಪಿ ವಾಹನಗಳ ಮೇಲೆ ಕೆಂಪು/ನೀಲಿ ದೀಪ ಬಳಕೆ ನಿಷೇಧಿಸಿದ ಕೇಂದ್ರ ಸರ್ಕಾರ

ನೂತನ ಭಾರತದ ಕನಸಿನಂತೆ ಮುನ್ನುಗ್ಗುತ್ತಿರುವ ಪ್ರಧಾನಿ ಮೋದಿ, ವಿವಿಐಪಿ ಅನ್ನೋದು ಇನ್ಮುಂದೆ ಇಪಿಐ ಆಗಬೇಕು ಎಂದಿದ್ದಾರೆ. ಅಂದ್ರೆ `ಎವ್ರಿ ಪರ್ಸನ್ ಈಸ್ ಇಂಪಾರ್ಟ್‍ಟೆಂಟ್’ ಎಂದು ಭಾನುವಾರದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಾರಿದ್ದರು.

ಇದನ್ನೂ ಓದಿ: ಹೊಸ ಭಾರತಕ್ಕೆ ವಿಐಪಿ ಅಲ್ಲ, Every Person Important: ಮೋದಿ

Click to comment

Leave a Reply

Your email address will not be published. Required fields are marked *