ನವದೆಹಲಿ: ಸದ್ಯ ಮಾರುಕಟ್ಟೆಯಲ್ಲಿರುವ 26 ಔಷಧಿಗಳನ್ನು(Medicine) ಕೇಂದ್ರ ಸರ್ಕಾರ ಅಗತ್ಯ ಔಷಧಿಗಳ ಪಟ್ಟಿಯಿಂದ ಹೊರಕ್ಕೆ ಇಟ್ಟಿದೆ. ತುರ್ತು ಬಳಕೆಯ ಔಷಧಿಗಳ ಪಟ್ಟಿಯಿಂದ ಆಸಿಡಿಟಿ ನಿವಾರಣೆಗೆ ಬಳಸುವ ರಾನ್‍ಟ್ಯಾಕ್(Rantac), ಜಿನ್‍ಟ್ಯಾಕ್(Zinetac )ಮಾತ್ರೆಗಳನ್ನು ತೊಲಗಿಸಿದೆ.
ಜಿನ್‍ಟ್ಯಾಕ್, ರಾನ್‍ಟ್ಯಾಕ್ ಮಾತ್ರೆಗಳ ಬಳಕೆ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂಬ ಅನುಮಾನಗಳು ಎದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಇನ್ಮುಂದೆ ಟೋಲ್‌ಗಳಲ್ಲಿ ವಾಹನ ನಿಲ್ಲಿಸುವಂತಿಲ್ಲ- ಟೋಲ್ ಸಂಗ್ರಹಕ್ಕೆ ವಿಶೇಷ ತಂತ್ರಜ್ಞಾನ ಅಳವಡಿಕೆಗೆ ಚಿಂತನೆ
Advertisement
Advertisement
ಈ ಎರಡು ಮಾತ್ರೆಗಳ ಜೊತೆಗೆ ಒಟ್ಟು 26 ಮಾತ್ರೆಗಳನ್ನು ಹೊರಗಿಟ್ಟು ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ನಿಷೇಧಿತ ಔಷಧಿಗಳ ಪಟ್ಟಿಯಲ್ಲಿ ಎಜಿತ್ರೋಮೈಸಿನ್, ಪೆಂಟಾಮಿಡಿನ್( Pentamidine) ಮಾತ್ರೆಗಳು ಕೂಡ ಸೇರಿವೆ. 384 ಅಗತ್ಯ ಔಷಧಿಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.