ತಿರುವನಂತಪುರ: ಗೆಳೆಯರೊಂದಿಗೆ ಮೋಜು-ಮಸ್ತಿ ಮಾಡಲು ಶಾಲೆಗಳಿಗೆ ರಜೆ ಘೋಷಿಸಲಿ ಎಂದು ಮಕ್ಕಳು ಕಾಯುವುದು ಸಾಮಾನ್ಯ. ರಜೆ ಘೋಷಿಸಿದ್ರೆ ಸಾಕು ಇನ್ನಿಲ್ಲದ ಆನಂದ ಹೆಚ್ಚುತ್ತದೆ ಮಕ್ಕಳಲ್ಲಿ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ತಮಗೆ ರಜೆಯೇ ಬೇಡ ಎಂದು ಡಿಸಿಗೆ ಪತ್ರ ಬರೆದು ಅಚ್ಚರಿ ಮೂಡಿಸಿದ್ದಾನೆ.
ಹೌದು, ಕೇರಳದ 6ನೇ ತರಗತಿ ವಿದ್ಯಾರ್ಥಿನಿ ಸಫೂರಾ ನೌಷದ್, ದಯವಿಟ್ಟು ನಮಗೆ ರಜೆ ಬೇಡ ಎಂದು ವಯನಾಡು ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ. ಇದನ್ನೂ ಓದಿ: ಬಿಹಾರದಲ್ಲಿ NDA ಸರ್ಕಾರ ಪತನ – ನಿತೀಶ್ ಬಿಜೆಪಿ ತೊರೆಯಲು ಕಾರಣ ಏನು?
ರಜೆಯಲ್ಲಿ ಎಲ್ಲ ಮಕ್ಕಳೂ ಖುಷಿಯಾಗಿರುವುದಿಲ್ಲ ಎಂಬುದನ್ನು ಒತ್ತಿ ಹೇಳಿರುವ ವಿದ್ಯಾರ್ಥಿನಿ, ವಯನಾಡ್ ಜಿಲ್ಲಾಧಿಕಾರಿ ಎ.ಗೀತಾ ಅವರಿಗೆ ಇ-ಮೇಲ್ ಮೂಲಕ ಬುಧವಾರ ರಜೆ ಘೋಷಿಸದಂತೆ ಮನವಿ ಮಾಡಿದ್ದಾಳೆ.
ಜಿಲ್ಲಾಧಿಕಾರಿ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ, ಇ-ಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಜೊತೆಗೆ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಇದನ್ನೂ ಓದಿ: ಮದುವೆಗೆ ಮುಸ್ಲಿಂ ವಧು ಹಾಜರ್ – ಮಹಲ್ ಸಮಿತಿಯ ಕ್ಷಮೆಗೆ ಆಗ್ರಹ
ʻಸತತ ನಾಲ್ಕು ದಿನ ಮನೆಯಲ್ಲಿರುವುದು ನಿಜಕ್ಕೂ ಕಷ್ಟ. ದಯವಿಟ್ಟು ಬುಧವಾರದಂದು ತರಗತಿ ನಡೆಸಲು ಅನುಮತಿ ನೀಡಿʼ ಎಂದು ಬಾಲಕಿ ಇ-ಮೇಲ್‌ನಲ್ಲಿ ತಿಳಿಸಿದ್ದಾಳೆ.
ವಾರಾಂತ್ಯದ ರಜೆಯ ನಂತರ, ತೀವ್ರ ಮಳೆಯಿಂದಾಗಿ ಜಿಲ್ಲಾಡಳಿತ ಸ್ಥಳೀಯ ರಜೆ ಘೋಷಿಸಿದ್ದರಿಂದ ಸೋಮವಾರವೂ ಈ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ತೆರೆದಿರಲಿಲ್ಲ. ಮೊಹರಂ ನಿಮಿತ್ತ ರಾಜ್ಯ ಸರ್ಕಾರ ಈಗಾಗಲೇ ಮಂಗಳವಾರ ರಜೆ ಘೋಷಿಸಿರುವುದರಿಂದ, ವಯನಾಡಿನಲ್ಲಿ ಸತತ ನಾಲ್ಕು ದಿನಗಳ ಕಾಲ ಶಾಲೆಗಳು ಮುಚ್ಚಿವೆ.
ವಿದ್ಯಾರ್ಥಿನಿಯನ್ನು ಪ್ರಶಂಸಿಸಿರುವ ಜಿಲ್ಲಾಧಿಕಾರಿ, ಈ ದೇಶ ಮತ್ತು ಪ್ರಪಂಚದ ಭವಿಷ್ಯವು ಅವರ ಕೈಯಲ್ಲಿ ಸುರಕ್ಷಿತವಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು, ಶಿಕ್ಷಕರು, ಸರ್ಕಾರ ಮತ್ತು ಸಮಾಜವು ಈ ಪೀಳಿಗೆಯ ಬಗ್ಗೆ ಹೆಮ್ಮೆಪಡಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೂರು ದಿನದಲ್ಲಿ ಯೋಗಿ ಮೇಲೆ ಬಾಂಬ್ ದಾಳಿ – ಕಂಟ್ರೋಲ್ ರೂಂಗೆ ಸಂದೇಶ