– ಬಾಲರಾಮ ಪ್ರತಿಷ್ಠಾಪನೆಯು ರಾಮ ರಾಜ್ಯದ ಗುರುತು ಎಂದ ಸಿಎಂ
ಅಯೋಧ್ಯೆ: ಇಲ್ಲಿನ ಬೀದಿಗಳಲ್ಲಿ ಇನ್ಮುಂದೆ ಬಂದೂಕು ಸದ್ದು ಮಾಡುವುದಿಲ್ಲ, ಕರ್ಫ್ಯೂ ಇರುವುದಿಲ್ಲ. ಇಲ್ಲಿ ಯಾವಾಗಲೂ ದೀಪೋತ್ಸವ ಮತ್ತು ರಾಮೋತ್ಸವ ನಡೆಯುತ್ತದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ.
Advertisement
…क्योंकि अवधपुरी में श्री रामलला का विराजना, ‘रामराज्य’ की स्थापना की उद्घोषणा भी है। pic.twitter.com/t2QNxA3wVG
— Yogi Adityanath (@myogiadityanath) January 22, 2024
Advertisement
ಅಯೋಧ್ಯೆಯಲ್ಲಿ (Ayodhya) ಶ್ರೀರಾಮನ ಪ್ರಾಣಪ್ರತಿಷ್ಠಾಪನೆ (Pran Pratishtha) ಬಳಿಕ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಎಲ್ಲಿ ನಾವು ಮಂದಿರ ನಿರ್ಮಿಸಲು ಪಣ ತೊಟ್ಟಿದ್ದೆವೋ, ಅಲ್ಲಿಯೇ ಅದನ್ನು ನಿರ್ಮಿಸಲಾಗಿದೆ. ಇಲ್ಲಿ ಬಾಲರಾಮ ಪ್ರತಿಷ್ಠಾಪನೆಯು ರಾಮ ರಾಜ್ಯದ ಗುರುತಾಗಿದ್ದು, ಶ್ರೀರಾಮನ ನಾಮಸ್ಮರಣೆಯೇ ಸದಾ ಇಲ್ಲಿ ಮೊಳಗಲಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ
Advertisement
Advertisement
ಇದೇ ವೇಳೆ ಅವರು ಬಾಬ್ರಿ ಮಸೀದಿ ಇದ್ದ ವಿವಾದಿತ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಲು ಈ ಹಿಂದೆ ನಡೆದ ಹೋರಾಟಗಳಲ್ಲಿ ಬಳಕೆಯಾದ ಮಂದಿರ್ ವಹಿ ಬನಾಯೇಂಗೆ ಘೋಷಣೆಯನ್ನು ಸ್ಮರಿಸಿಕೊಂಡಿದ್ದಾರೆ.
ಇಡೀ ದೇಶದೆಲ್ಲೆಡೆ ರಾಮನ ಮಾಯೆ ಆವರಿಸಿದೆ. ನಾವು ತ್ರೇತಾ ಯುಗಕ್ಕೆ ಕಾಲಿಟ್ಟಂತೆ ಭಾಸವಾಗುತ್ತಿದೆ. ಮಂದಿರದ ಕನಸು ನನಸಾಗಲು ಕಾರಣರಾದ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ಅವರು ಅರ್ಪಿಸಿದ್ದಾರೆ. ಇದನ್ನೂ ಓದಿ: ಮಂದಸ್ಮಿತ, ಮುಗ್ಧಮುಖದ ಬಾಲರಾಮನ ಕಣ್ತುಂಬಿಕೊಂಡು ಪುನೀತರಾದ ರಾಮಭಕ್ತರು