ಕೊಪ್ಪಳ: ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್ (Congress) ಸರ್ಕಾರ ಸಂಪೂರ್ಣ ದಿವಾಳಿ ಆಗಿದ್ದು, ಕುರಿ ಸತ್ತರೆ ಪರಿಹಾರ ನೀಡುತ್ತಿಲ್ಲ. ಕಾರವಾರ ಡಿಸಿ ಕಾರಿಗೆ ಡೀಸೆಲ್ ಹಾಕಲು ಹಣ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ವಾಗ್ದಾಳಿ ನಡೆಸಿದರು.
ಕೊಪ್ಪಳದಲ್ಲಿ (Koppala) ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರಿಗೆ ನೀಡಲು ಸರ್ಕಾರದ ಬಳಿ ಅನುದಾನ ಇಲ್ಲ. ಶಾಸಕರಿಗೆ ಅನುದಾನ ನೀಡಿದರೆ ಮಾತ್ರ, ಅವರು ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯ. ಇದರಿಂದ ಶಾಸಕರಿಗೆ ಗ್ರಾಮೀಣ ಪ್ರದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಆಗುತ್ತಿಲ್ಲ. ಇದರಿಂದ ಶಾಸಕರಿಗೆ ಅಸಮಾಧಾನ ಹೆಚ್ಚಾಗಿದೆ. ನಮ್ಮ ಪಾರ್ಟಿ ಒಡೆಯಬೇಕು ಎನ್ನುವ ಇವರದ್ದೇ ಪಾರ್ಟಿ ಒಡೆದು ಹೋಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: 2018ರಲ್ಲಿ ಯಾವ ಅನ್ನ ಹಳಸಿತ್ತು?: ದಿನೇಶ್ ಗುಂಡೂರಾವ್ ವಿರುದ್ಧ ಹೆಚ್‌ಡಿಕೆ ಕಿಡಿ
Advertisement
Advertisement
ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪರೋಕ್ಷ ವಾಗ್ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನಲ್ಲಿ ಅತೃಪ್ತ ಆತ್ಮ ಹೆಚ್ಚಾಗಿವೆ. ಕೆಲವರಿಗೆ ಮಂತ್ರಿ ಮಾಡಿಲ್ಲ ಅಂತ ಅಸಮಾಧಾನ ಇದೆ. ಹಲವರಿಗೆ ಅನುದಾನ ನೀಡಿಲ್ಲ ಎಂದು ಬೇಸರಗೊಂಡಿದ್ದಾರೆ. ಇವೆಲ್ಲ ಅವರ ಪಕ್ಷದ ಅತೃಪ್ತ ಆತ್ಮಗಳಾಗಿವೆ. ಇಂಥ ಅತೃಪ್ತ ಆತ್ಮ ಕೊಪ್ಪಳದಲ್ಲಿಯೂ ಒಂದಿದೆ. ವಿನಯ ಕುಲಕರ್ಣಿ, ಬಸವರಾಜ ರಾಯರಡ್ಡಿ ಅಂತಹ ಅತೃಪ್ತ ಆತ್ಮಗಳಿಂದ ಸರ್ಕಾರ ಏನಾಗುತ್ತೋ ಗೊತ್ತಿಲ್ಲ ಎಂದರು.
Advertisement
ಸರ್ಕಾರ ಬೀಳಬಹುದು ಎಂಬ ಬಗ್ಗೆ ಕಾಂಗ್ರೆಸ್‌ನವರಿಗೆ ಭಯ ಇದೆ. ಅದಕ್ಕೆ ಅವರು ಬಿಜೆಪಿಗರು ಪಕ್ಷ ಬಿಡುತ್ತಾರೆ ಎಂದು ಹೇಳುತ್ತಿದ್ದಾರೆ. ಬಿಜೆಪಿಗರು ಹೋಗಿ ಅಲ್ಲಿ ಏನು ಮಾಡುವವರಿದ್ದಾರೆ? ಬಾಗಿಲು ಕಾಯಬೇಕು. ಅದು ಬಿಟ್ಟು ಮತ್ತೇನೂ ಸಾಧ್ಯವಿಲ್ಲ. ಮುಂದೆ ಈ ಸರ್ಕಾರ ಬಿದ್ದು ಹೋದರೆ, ಬಿಜೆಪಿ ಬಿಟ್ಟವರು ಏನು ಮಾಡುತ್ತಾರೆ? ಅದಕ್ಕೆ ಯಾರೂ ಬಿಜೆಪಿ ಬಿಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ಮುಂದಿನ ವಾರ ಬರಗಾಲ ಘೋಷಣೆ ಮಾಡ್ತೀವಿ – ಕೇಂದ್ರದ ಸಹಾಯ ಕೇಳ್ತೀವಿ: ಸಿದ್ದರಾಮಯ್ಯ
Advertisement
ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿ, 2018ರಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿತ್ತು. ಆದರೂ ಕುಮಾರಸ್ವಾಮಿ ಅವರ ಮನೆ ಮುಂದೆ ನಿಂತು ಅವರನ್ನು ಸಿಎಂ ಮಾಡಿದರು. ಆಗ ಅನ್ನ ಹಳಸಿತ್ತೋ, ನಾಯಿ ಹಸಿದಿತ್ತೋ ಎಂಬುದನ್ನು ಅವರು ಹೇಳಲಿ. ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ಮೂರನೇ ಬಾರಿಗೆ ಮೋದಿ ಪಿಎಂ ಆಗುತ್ತಾರೆ. ದೇಶಕ್ಕೆ ಒಳ್ಳಯದಾಗಬೇಕಿದೆ. ಅದಕ್ಕೆ ಪಕ್ಷದ ನಿರ್ಣಯಕ್ಕೆ ನಾವು ಬದ್ಧವಾಗಿ ಕೆಲಸ ಮಾಡುತ್ತೇವೆ. ಲೋಕಸಭೆಗೆ ತಯಾರಿ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಎಂಪಿ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Web Stories