ಕರ್ನಾಟಕ ಪೊಲೀಸರು ಹೋಗಿ ಉತ್ತರ ಪ್ರದೇಶದಲ್ಲಿ ತಪ್ಪೇನೂ ಮಾಡಿಲ್ಲ: ಗೃಹ ಸಚಿವ ಪರಮೇಶ್ವರ್

Public TV
1 Min Read

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಕರ್ನಾಟಕ ಪೊಲೀಸರು (Karnataka Police) ಪೇಚಿಗೆ ಸಿಲುಕಿದ ವಿಚಾರದಲ್ಲಿ ಸ್ವಲ್ಪ ಗೊಂದಲವಾಗಿದೆ, ಆದ್ರೆ ನಮ್ಮ ಪೊಲೀಸರು ತಪ್ಪೇನು ಮಾಡಿಲ್ಲ ಅಂತಾ ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಮಫ್ತಿಯಲ್ಲಿ ಪೊಲೀಸ್ ಹೋಗಿದ್ದಾರೆ.ಅಲ್ಲಿಯ ಪೊಲೀಸ್ ಗೆ ತಿಳಿಸಬೇಕಿತ್ತು, ತಿಳಿಸದೇ ಹೋಗಿದ್ದಾರೆ. ಅಲ್ಲಿನ ಪೊಲೀಸ್ ಮೊದಲು ನೋಟಿಸ್ ಕೊಡಿ, ನಂತರ ನೋಡೋಣ ಎಂದಿದ್ದಾರೆ ಅಂತಾ ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಅಜಿತ್ ಭಾರತಿ ಎಂಬ ಯುಟ್ಯೂಬರನ್ನು (Youtuber Ajeet Bharti) ಅರೆಸ್ಟ್ ಮಾಡಲು ಹೋಗಿದ್ದರು. ನೋಟಿಸ್ ಕೊಟ್ಟ ಮೇಲೆ ಆ ಯೂಟ್ಯೂಬರ್ ಬಾರದೇ ಹೋದ್ರೆ ವಾರೆಂಟ್ ತೆಗೆದುಕೊಂಡು ಅರೆಸ್ಟ್ ಮಾಡ್ತಾರೆ. ಕೆಲವೊಮ್ಮೆ ಇಂತಹ ಗೊಂದಲ ಆಗುತ್ತೆ. ನಮ್ಮ ಪೊಲೀಸರೇನು ತಪ್ಪು ಮಾಡಿಲ್ಲ ಎಂದು ಕರ್ನಾಟಕ ಪೊಲೀಸರ ನಡೆಯನ್ನು ಪರಮೇಶ್ವರ್‌ ಅವರು ಸಮರ್ಥಿಸಿಕೊಂಡರು. ಇದನ್ನೂ ಓದಿ: ರೇಣುಕಸ್ವಾಮಿ ಕೊಲೆಗೆ ಸಂಚು ರೂಪಿಸಿದ್ದೇ ಪವಿತ್ರಾಗೌಡ – ಹೊಸ ರಿಮ್ಯಾಂಡ್‌ ಕಾಪಿಯಲ್ಲಿ ಏನಿದೆ?

ಸಿಬಿಐ ನಮ್ಮನ್ನು ಏನೂ ಕೇಳಿಲ್ಲ: ಇದೇ ವೇಳೆ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ತನಿಖೆ ನಡೀತಾ ಇದೆ, ಬ್ಯಾಂಕಿಂಗ್ ತನಿಖೆ ಸಿಬಿಐ ಮಾಡ್ತಿದೆ.ಅಧಿಕೃತವಾಗಿ ಸಿಬಿಐ ನಮ್ಮನ್ನ ಏನೂ ಕೇಳಿಲ್ಲ. ನಮ್ಮ ಎಸ್ ಐಟಿ ತನಿಖೆಯೂ ನಡೀತಾ ಇದೆ ಅಂತೇಳಿದ್ರು. ಇನ್ನು ಜೈಲಿನಲ್ಲಿ ಸ್ಪೆಷಲ್ ಟ್ರೀಟ್ಮೆಂಟ್ ವಿಚಾರವಾಗಿ ಮಾತನಾಡಿದ ಪರಮೇಶ್ವರ್‌, ಕೆಲವು ಬಾರಿ ಇದು ಸತ್ಯ ಇರಬಹುದು. ಈ ಹಿಂದೆ ಫೋನ್ ಜೊತೆಗೆ ಒಂದಿಷ್ಟು ವಸ್ತು ಸಿಕ್ಕಿವೆ. ಯಾರು ಜೈಲರ್ ಇರ್ತಾರೆ, ಅವರು ಅದನ್ನು ರೆಗ್ಯುಲೇಟ್ ಮಾಡ್ತಾರೆ ಅಂದ್ರು.

Share This Article