ಲಕ್ನೋ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಿಎಂ ಆದ ಬಳಿಕ ಅಕ್ರಮ ಕಸಾಯಿಖಾನೆಗಳು ಬಂದ್ ಆಗ್ತಿದೆ. ಇದ್ರಿಂದ ಕಾನ್ಪುರದ ಮೃಗಾಲಯದಲ್ಲಿರೋ ಹುಲಿ, ಸಿಂಹ ಸೇರಿದಂತೆ ಮಾಂಸಹಾರಿ ಪ್ರಾಣಿಗಳು ಉಪವಾಸಕ್ಕೆ ಬಿದ್ದಿವೆ.
ಕಾನ್ಪುರ ಮಹಾನಗರ ಪಾಲಿಕೆ ವ್ಯಾಪ್ತಿಯ 4 ಕಸಾಯಿಖಾನೆಗಳನ್ನ ಮುಚ್ಚಿಸಿರೋದ್ರಿಂದ ಇಲ್ಲಿನ ಮೃಗಾಲಯದಲ್ಲಿರೋ ಹುಲಿ, ಸಿಂಹ ಸೇರಿದಂತೆ 70 ಮಾಂಸಹಾರಿ ಪ್ರಾಣಿಗಳು ಕಳೆದ ಬುಧವಾರದಿಂದ ಆಹಾರವಿಲ್ಲದೆ ಕಂಗಾಲಾಗಿವೆ.
ಇಲ್ಲಿರೋ ಗಂಡು ಮಾಂಸಹಾರಿ ಪ್ರಾಣಿಗಳಿಗೆ ದಿನಕ್ಕೆ 12 ಕೆಜಿ ಹಾಗೂ ಹೆಣ್ಣು ಮಾಂಸಹಾರಿಗಳಿಗೆ ದಿನಕ್ಕೆ 10 ಕೆಜಿ ಮಾಂಸ ಬೇಕು. ಹೀಗೆ ದಿನವೊಂದಕ್ಕೆ ಮೃಗಾಲಯಕ್ಕೆ 150 ಕೆಜಿ ಕೋಣದ ಮಾಂಸ ಬೇಕು. ಕಾಂಟ್ರಾಕ್ಟರ್‍ವೊಬ್ಬರು ಮಾಂಸ ಸರಬರಾಜು ಮಾಡುತ್ತಿದ್ದು, ಮಂಗಳವಾರದಂದು ಸರಬರಾಜು ಮಾಡಿದ್ದರು. ಆದ್ರೆ ಈಗ ಮಾಡ್ತಿಲ್ಲ ಎಂದು ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಗರ್ಭಿಣಿ ಮಾಂಸಹಾರಿ ಪ್ರಾಣಿಗಳಿಗೆ ಕೋಳಿ ಮಾಂಸ ನೀಡಲಾಗುತ್ತಿದೆಯಾದರೂ ಅವು ಅದನ್ನು ತಿನ್ನುತ್ತಿಲ್ಲ. ಅನೇಕ ಪ್ರಾಣಿಗಳು ಆಹಾರವನ್ನು ಮುಟ್ಟಿಲ್ಲ ಎಂದು ತಿಳಿಸಿದ್ದಾರೆ.