ಬೆಂಗಳೂರು: ಕೋಲಾರ (Kolar) ದ ಪಿಚ್ ಟೆಸ್ಟ್ ಮಾಡಿ ಸ್ಪರ್ಧೆ ಘೋಷಣೆ ಮಾಡಿದ ಸಿದ್ದರಾಮಯ್ಯಗೆ ಖೆಡ್ಡಾ ತೋಡಲು ಉರುವಾದಂತಿದೆ. ಸಿದ್ದರಾಮಯ್ಯ (Siddaramaiah) ಎಲ್ಲೇ ನಿಂತ್ರು ನಾನು ಬಿಡೊಲ್ಲ ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಘೊಷಣೆ ಮಾಡಿದ್ರಾ ಅನ್ನೋ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
Advertisement
ಹೌದು. ಸಮ್ಮಿಶ್ರ ಸರ್ಕಾರ ಬೀಳಿಸಿದ ಹಾಗೂ ತುಮಕೂರಿನಲ್ಲಿ ತಂದೆ ಸೋಲಿನ ಸೇಡು ತೀರಿಸಿಕೊಳ್ಳೊಕೆ ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ನಿಂತ್ರೆ ಜೆಡಿಎಸ್ (JDS) ನಿಂದ ಕುಮಾರಸ್ವಾಮಿಯೇ ನೇರವಾಗಿ ಪ್ರಚಾರ ಕಣಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಇನ್ಮುಂದೆ ಗುಂಬಜ್ ಮಾದರಿಯಲ್ಲಿ ಬಸ್ ನಿಲ್ದಾಣ ನಿರ್ಮಿಸುವಂತಿಲ್ಲ: ಪ್ರತಾಪ್ ಸಿಂಹ
Advertisement
Advertisement
ಈಗಾಗಲೇ ಅಭ್ಯರ್ಥಿ ಫೈನಲ್ ಆಗಿದ್ದಾರೆ ಅಂತ ಘೋಷಣೆ ಮಾಡಿರೋ ಕುಮಾರಸ್ವಾಮಿ, ಯಾರೇ ಬಂದರೂ ಅದೇ ಅಭ್ಯರ್ಥಿ ಫಿಕ್ಸ್ ಎಂದಿದ್ದಾರೆ. ಈ ಬಾರಿ ಕೋಲಾರದಲ್ಲಿ ಗೆಲುವು ನಮ್ಮದೇ ಅಂತ ಘೋಷಣೆ ಮಾಡಿದ್ದಾರೆ. ಹೀಗಾಗಿ ಖುದ್ದು ಹೆಚ್ಚು ಪ್ರಚಾರಕ್ಕೆ ಇಳಿಯೋದು ಪಕ್ಕಾ ಆಗಿದೆ. ಕೋಲಾರದಿಂದ ಚುನಾವಣೆ ಪ್ರಚಾರ ಶುರು ಮಾಡಿದ ಸಿದ್ದರಾಮಯ್ಯಗೆ ಕೋಲಾರದಿಂದಲೇ ಪ್ರಚಾರ ಶುರು ಮಾಡಿ ಟಾಂಗ್ ನೀಡಲಿದ್ದಾರೆ. ಇದನ್ನೂ ಓದಿ: ಮುಂದಿನ ವಾರದಿಂದ ಹಾಸನ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತೇನೆ: ಹೆಚ್.ಡಿ ದೇವೇಗೌಡ
Advertisement
ನವೆಂಬರ್ 18 ಅಥವಾ 20 ರಿಂದ ಮತ್ತೆ ಕೋಲಾರ (Kolar) ದಿಂದ ಪಂಚರತ್ನ ಯಾತ್ರೆ ಪ್ರಾರಂಭದ ಮೂಲಕ ಕುಮಾರಸ್ವಾಮಿ ಕೂಡಾ ಅಖಾಡಕ್ಕೆ ಎಂಟ್ರಿ ಕೊಡಲಿದ್ದಾರೆ. ಸಿದ್ದರಾಮಯ್ಯ ಸೋಲಿಸೋಕೆ ಕೋಲಾರ ಕ್ಷೇತ್ರದಲ್ಲಿ ಹೆಚ್ಚು ದಿನ ಪ್ರಚಾರ ಕೈಗೊಳ್ಳಲಿದ್ದಾರೆ. ಸಿದ್ದರಾಮಯ್ಯ ಸೋಲಿಸೋಕೆ ಕಷ್ಟ ಆದರೆ ಕೊನೆ ಅಸ್ತ್ರವಾಗಿ ಬಿಜೆಪಿ ಜೊತೆ ಒಳಮೈತ್ರಿ ಮಾಡಿಕೊಳ್ಳೋದು. ಬಿಜೆಪಿ (BJP) ಜೊತೆ ಒಳ ಮೈತ್ರಿ ಮಾಡಿಕೊಳ್ಳೋದು. ಅವರ ಬೆಂಬಲವಾದರು ಪಡೆಯೋದು ಅಥವಾ ನಾವೇ ಅವರಿಗೆ ಬೆಂಬಲ ಕೊಡೋ ಮೂಲಕ ಸಿದ್ದರಾಮಯ್ಯ ಸೋಲಿಗೆ ಕೆಲಸ ಮಾಡೋ ತಂತ್ರ ಇದಾಗಿದೆ ಎನ್ನಲಾಗಿದೆ.