ಮಂಡ್ಯ: ಮಳೆ ಬರಬೇಕು ಬರಲಿ, ಬೆಂಗಳೂರಿನಲ್ಲಿ (Bengaluru) ಯಾವ ಅವಾಂತರವೂ ಇಲ್ಲ. ಎಷ್ಟೇ ಮಳೆ ಬಂದರೂ ಅರ್ಧಗಂಟೆಯಲ್ಲಿ ಸರಿ ಮಾಡುವ ಕೆಲಸ ಮಾಡ್ತೀವಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕೆ ಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಎಷ್ಟೇ ಮಳೆ ಬಂದರೂ ತಡೆದುಕೊಳ್ಳುವ ಶಕ್ತಿ ನಮಗೆ ಇದೆ. ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ವಿರೋಧ ಪಕ್ಷಗಳು ರಾಜ್ಯದ ಮಾನ ತೆಗೆಯುವುದನ್ನು ನಿಲ್ಲಿಸಲಿ: ಡಿಕೆಶಿ
ಮಳೆಯ ಮುಂಜಾಗ್ರತೆ ಬಗ್ಗೆ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ. ಬೆಂಗಳೂರಿಗೆ ಹೋದ ತಕ್ಷಣ ಮತ್ತೆ ಈ ಬಗ್ಗೆ ಸಭೆ ಮಾಡ್ತೀನಿ. ಯಾರು ಗಾಬರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ ಮುಂಜಾಗ್ರತೆಯಾಗಿ ರಜೆ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಪ್ರಭಾವ ಕುಗ್ಗಿಸಲು ಖಲಿಸ್ತಾನಿಗಳಿಗೆ ಪಾಕ್ ಬೆಂಬಲ – ಕೆನಡಾ ಅಧಿಕಾರಿ ಹೇಳಿಕೆ ವಿಡಿಯೋ ವೈರಲ್
ಮಳೆ ವಿಚಾರದಲ್ಲಿ ಟೀಕೆ ಟಿಪ್ಪಣಿಗಳು ಇದ್ದೇ ಇರುತ್ತವೆ. ಟೀಕೆಗಳು ಸತ್ತು ಹೋಗುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ಈ ಹಿಂದೆಯೂ ಟೀಕೆ ಮಾಡುತ್ತಿದ್ದರು, ಅದು ಸತ್ತು ಹೋಯ್ತು, ಈಗ ಕೆಲಸ ಅಷ್ಟೇ ಉಳಿದಿರೋದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಂಗನ ಕಾಯಿಲೆಗೆ ಲಸಿಕೆ: ಐಸಿಎಂಆರ್ ಮಹಾನಿರ್ದೇಶಕರ ಜೊತೆ ದಿನೇಶ್ ಗುಂಡೂರಾವ್ ಚರ್ಚೆ