ಬಾಲಿವುಡ್ ನಟಿ ಅದಿತಿ ರಾವ್ ಹೈದರಿ(Aditi Rao Hydari) ಕಾಲಿವುಡ್ ನಟ ಸಿದ್ಧಾರ್ಥ್ (Siddarth) ಸದ್ದಿಲ್ಲದೇ ಮದುವೆಯಾ ಆಗಿದ್ದಾರೆ ಎಂದು ನಿನ್ನೆಯಷ್ಟೇ ಭರ್ಜರಿ ಸುದ್ದಿ ಆಗಿತ್ತು. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿರುವ ಶ್ರೀರಂಗಪುರಂನಲ್ಲಿರುವ ಶ್ರೀ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ಈ ಜೋಡಿ ಮದುವೆಯಾಗಿದೆ ಎಂದು ಹೇಳಲಾಗಿತ್ತು. ಈ ಮದುವೆಗೆ ಇನ್ನಷ್ಟು ರೆಕ್ಕೆಪುಕ್ಕಗಳು ಬಂದಿದ್ದವು.
Advertisement
ಇರಾ ಖಾನ್ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಅದಿತಿ ಮತ್ತು ಸಿದ್ಧಾರ್ಥ ಅವರ ಫೋಟೋವನ್ನೇ ಮದುವೆ ಫೋಟೋ ಎಂದು ವೈರಲ್ ಮಾಡಲಾಗಿತ್ತು. ಶೂಟಿಂಗ್ ಎಂದು ಸುಳ್ಳು ಹೇಳಿ ಇಬ್ಬರೂ ಮದುವೆ ಆಗಿದ್ದಾರೆ ಎಂದು ಆರೋಪಿಸಲಾಗಿತ್ತು. ಎಲ್ಲದಕ್ಕೂ ಅದಿತಿ ಉತ್ತರ ನೀಡಿದ್ದಾರೆ. ಹಿ ಸೇಡ್ ಎಸ್.. ಎಂಗೇಜ್ಡ್’ (Engaged) ಎಂದು ಸಿದ್ಧಾರ್ಥನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಇದೀಗ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಣೆ ನೀಡಿದ್ದಾರೆ.
Advertisement
Advertisement
ಈ ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿತ್ತು. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಸಿದ್ಧಾರ್ಥ್ ಜೊತೆಗಿನ ಖಾಸಗಿ ಫೋಟೋ ಹಂಚಿಕೊಂಡು ಹೊಸ ವರ್ಷದಂದು ಮದುವೆ (Wedding) ಬಗ್ಗೆ ಸುಳಿವು ನೀಡಿದ್ದರು ಅದಿತಿ ರಾವ್.
Advertisement
ನ್ಯೂ ಇಯರ್ ಸಂಭ್ರಮವನ್ನು ನಟಿ ಅದಿತಿ- ಸಿದ್ಧಾರ್ಥ್ ಜೋಡಿ ವಿದೇಶದಲ್ಲಿ ಸೆಲೆಬ್ರೇಟ್ ಮಾಡಿದ್ದರು. ಈ ಕುರಿತ ಇಬ್ಬರೂ ಕೂಡ ಚೆಂದದ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶುಭಕೋರಿದ್ದರು. ಈ ಮೂಲಕ ಎಂಗೇಜ್ ಆಗಿರೋದು ಖಚಿತವಾಗಿತ್ತು. ಫೋಟೋ ಶೇರ್ ಮಾಡ್ತಿದ್ದಂತೆ ಮದುವೆ ಯಾವಾಗ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದರು.
2021ರಲ್ಲಿ ‘ಮಹಾ ಸಮುದ್ರಂ’ ಸಿನಿಮಾ ವೇಳೆ, ಅದಿತಿ- ಸಿದ್ಧಾರ್ಥ್ ಪರಿಚಿತರಾದರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಸಾಕಷ್ಟು ಪಾರ್ಟಿ ಮತ್ತು ಸೆಲೆಬ್ರಿಟಿ ಮದುವೆ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿಯೇ ಹೋಗುವ ಮೂಲಕ ಹೈಲೆಟ್ ಆದರು.
ಇಬ್ಬರೂ ಪ್ರೀತಿ ಬಗ್ಗೆ ಅಧಿಕೃತವಾಗಿ ಹೇಳದೇ ಇದ್ದರೂ ಹೊಸ ಫೋಟೋ ಶೇರ್ ಮಾಡಿ ಮದುವೆ ಬಗ್ಗೆ ಪರೋಕ್ಷವಾಗಿ ಹೇಳಿದ್ರಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡ್ತಿತ್ತು. ಇದೀಗ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದೆ ಜೋಡಿ.