ಬೆಂಗಳೂರು: ಮೇಕೆದಾಟು (Makedatu) ಅಂದ್ರು, ಈಗ ಮೇಕೆನೂ ಇಲ್ಲ, ದಾಟು ಇಲ್ಲ. ಅಧಿಕಾರ ಬಂದ ಮೇಲೆ ಕಾವೇರಿನೂ (Kaveri) ಇಲ್ಲ, ಮೇಕೆದಾಟು ಇಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ (R Ashok) ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನೀರು ಬಿಟ್ಟು ಕರ್ನಾಟಕದ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ. ಈಗ ನೀರು ಬಿಟ್ಟ ಮೇಲೆ ಕೊನೆಗೂ ಸರ್ವಪಕ್ಷ ಸಭೆ ಕರೆದಿದ್ದಾರೆ. ಸ್ಟಾಲಿನ್ ಜೊತೆಗೆ ಒಳ ಒಪ್ಪಂದ ಇದು ಎಂದು ಆರೋಪಿಸಿದರು. ಇದನ್ನೂ ಓದಿ: ನಟ ಪ್ರಕಾಶ್ ರೈ ವಿರುದ್ಧ ಸಚಿವ ಪರಮೇಶ್ವರ್, ಮಾಜಿ ಸಚಿವ ಅಶೋಕ್ ಗರಂ
ಇದೇ ವೇಳೆ ಎಸ್‌ಟಿ ಸೋಮಶೇಖರ್ ಜೊತೆ ಸಭೆ ಕರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಆರ್ ಅಶೋಕ್, ಸೋಮಶೇಖರ್ ಜೊತೆಗೆ ಮೊನ್ನೆಯಿಂದ ಮಾತನಾಡುತ್ತಿದ್ದೇನೆ. ಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ. ಹೆಬ್ಬಾರ್ ಹಾಗೂ ಸೋಮಶೇಖರ್ ಹೋಗಲ್ಲ ಎಂದು ಹೇಳಿದ್ದಾರೆ. ಯಾರು ಸಹ ಕಾಂಗ್ರೆಸ್‌ಗೆ ಹೋಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆ ಶಿವಕುಮಾರ್ ಲೂಟಿ ಹೊಡೆಯೋದು ಬಿಟ್ಟರೆ ತಮ್ಮನಾಗಿ ಸ್ವೀಕಾರ ಮಾಡ್ತೀನಿ: ಕುಮಾರಸ್ವಾಮಿ ಷರತ್ತು
Web Stories