ಮೈದಾ ಬೇಡ – 5 ಪದಾರ್ಥಗಳನ್ನು ಬಳಸಿ ಮಾಡಿ ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್

Public TV
1 Min Read
Protein Pancake 1

ಟಾಫಟ್ ಹಾಗೂ ಸುಲಭವಾಗಿ ಮಾಡಬಹುದಾಗ ಉಪಹಾರಗಳಲ್ಲಿ ಪ್ಯಾನ್‌ಕೇಕ್ ಒಂದು. ಆದರೆ ಇದಕ್ಕೆ ಹೆಚ್ಚಿನವರು ಮೈದಾ ಬಳಸಿ ಮಾಡುತ್ತಾರೆ ಎನ್ನೋದು ಬೇಸರದ ವಿಚಾರ. ನಾವಿಂದು ಮೈದಾ ಅಥವಾ ಯಾವುದೇ ಹಿಟ್ಟನ್ನು ಬಳಸದೆಯೇ ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್ ಹೇಗೆ ಮಾಡೋದು ಎಂದು ಹೇಳಿಕೊಡುತ್ತೇವೆ. ಇದನ್ನು ತಯಾರಿಸಲು ಕೇವಲ 5 ಪದಾರ್ಥಗಳಷ್ಟೇ ಸಾಕು. ಮೈದಾ ರಹಿತ, ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್ ರೆಸಿಪಿ ಇಲ್ಲಿದೆ.

Protein Pancake 2

ಬೇಕಾಗುವ ಪದಾರ್ಥಗಳು:
ಓಟ್ಸ್ – 1 ಕಪ್
ಕಾಟೇಜ್ ಚೀಸ್ (ಪನೀರ್)‌ – 1 ಕಪ್
ಪೀನಟ್ ಬಟರ್ – ಅರ್ಧ ಕಪ್
ಹಾಲು – ಅರ್ಧ ಕಪ್
ಮೊಟ್ಟೆ – 2 ಇದನ್ನೂ ಓದಿ: ಟ್ಯಾಂಗಿ ಫ್ಲೇವರ್ – ಮೊಳಕೆ ಕಾಳಿನ ಚಾಟ್ ರೆಸಿಪಿ

Protein Pancake

ಮಾಡುವ ವಿಧಾನ:
* ಮೊದಲಿಗೆ ಒಂದು ಬ್ಲೆಂಡರ್‌ನಲ್ಲಿ ಮೇಲೆ ತಿಳಿಸಲಾದ ಎಲ್ಲ ಪದಾರ್ಥಗಳನ್ನು ಹಾಕಿ ಹಿಟ್ಟಿನಂತೆ ನಯವಾಗುವವರೆಗೆ ಬ್ಲೆಂಡ್ ಮಾಡಿಕೊಳ್ಳಿ.
* ನಾನ್ ಸ್ಟಿಕ್ ಪ್ಯಾನ್ ಅನ್ನು ಬಿಸಿ ಮಾಡಿ, ಎಣ್ಣೆ ಅಥವಾ ಬೆಣ್ಣೆಯನ್ನು ಸ್ವಲ್ಪ ಗ್ರೀಸ್ ಮಾಡಿ, ಬಳಿಕ ಕಾಲು ಕಪ್ ಅಳತೆಯಷ್ಟು ಹಿಟ್ಟನ್ನು ಸುರಿಯಿರಿ.
* ಪ್ಯಾನ್‌ಕೇಕ್‌ನ ಮೇಲ್ಭಾಗದಲ್ಲಿ ಸಣ್ಣ ಸಣ್ಣ ಗುಳ್ಳೆಗಳು ಮೂಡಲು ಪ್ರಾರಂಭವಾಗುತ್ತದೆ. ಪ್ಯಾನ್‌ಕೇಕ್‌ನ ತಳ ಭಾಗ ಬೆಂದ ಬಳಿಕ ಅದನ್ನು ತಿರುವಿ ಹಾಕಿ ಹಾಗೂ ಎರಡೂ ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕಾಯಿಸಿ. ಉಳಿದ ಹಿಟ್ಟನ್ನು ಕೂಡಾ ಇದೇ ರೀತಿ ಮಾಡೋದನ್ನು ಮುಂದುವರಿಸಿ.
* ಇದೀಗ ಪ್ರೊಟೀನ್‌ಯುಕ್ತ ಪ್ಯಾನ್‌ಕೇಕ್ ತಯಾರಾಗಿದ್ದು, ಪೀನಟ್ ಬಟರ್ ಅಥವಾ ಬೆಣ್ಣೆಯೊಂದಿಗೆ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಈರುಳ್ಳಿ, ಮೊಟ್ಟೆಯ ಸಿಂಪಲ್ ಪಕೋಡಾ ರೆಸಿಪಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article