ಕಲಬುರಗಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಲ್ಲೇ ಬಂದು ಠಿಕಾಣಿ ಹೂಡಲಿ. ಆದರೆ ಕಾಂಗ್ರೆಸ್‍ಗೆ ಏನೂ ನಷ್ಟವಾಗಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಅಮಿತ್ ಶಾ ರಾಜ್ಯ ಭೇಟಿ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಕತ್ತರಿ ಇಟ್ಕೊಂಡು ಸಮಾಜ ಒಡೆಯುತ್ತಿದ್ದಾರೆ. ಆದ್ರೆ ಕಾಂಗ್ರೆಸ್ ಬಳಿ ಸೂಜಿಯಿದೆ. ಅದರಿಂದ ನಾವು ಜೋಡಿಸುವ ಕೆಲಸ ಮಾಡುತ್ತೇವೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
Advertisement
ಇತ್ತ ಬೆಂಗಳೂರಲ್ಲಿ ಮಾತಾಡಿದ ದಿನೇಶ್ ಗುಂಡೂರಾವ್, ಲಿಂಗಾಯಿತ ಮತ್ತು ವೀರಶೈವ ಎರಡೂ ಧರ್ಮಗಳನ್ನು ನೋಡಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವುದು. ಆ ಧರ್ಮದಲ್ಲಿ ಹಲವು ಜನ ಸ್ವಾಮೀಜಿಗಳಿದ್ದಾರೆ. ಅವರೇ ಸಮಾಜವನ್ನು ಒಗೂಡಿಸುತ್ತಾರೆ. ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಿಸುವುದಾಗಿ ಅವರು ಹೇಳಿದ್ರು.
Advertisement
ಎರಡು ಗುಂಪಿನವರು ಕೂಡಿ ಬಂದ್ರೆ ಒಳ್ಳೆಯದು. ಇಲ್ಲ ಅಂದ್ರೆ ಅವರವರ ಮನವಿ ಪತ್ರ ಪಡೆದು ಕಾನೂನು ಪ್ರಕಾರ ಕ್ರಮ ಕೈಗೋಳ್ಳುತ್ತೆನೆ. ಈ ವಿಷಯದಿಂದ ಲಿಂಗಾಯತರ ಒಡಕು ನಾವು ಮಾಡಿಲ್ಲ ಅಂತ ಅಂದ್ರು.
Advertisement
ಇದನ್ನೂ ಓದಿ: ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿದ್ದ ಬಿಜೆಪಿಗೆ 80 ಸೀಟಿನ ಶಾಕ್!