ನವದೆಹಲಿ: ವಯಸ್ಕರಲ್ಲಿ ಸಂಭವಿಸುತ್ತಿರುವ ದಿಢೀರ್ ಹೃದಯಾಘಾತಕ್ಕೆ ಕೋವಿಡ್ ವ್ಯಾಕ್ಸಿನ್ (COVID Vaccines) ಕಾರಣವಲ್ಲ ಎಂದು ಐಸಿಎಂಆರ್ ಮತ್ತು ಏಮ್ಸ್ ನಡೆಸಿದ ಜಂಟಿ ಅಧ್ಯಯನ ವರದಿ ಸ್ಪಷ್ಟಪಡಿಸಿದೆ. ಹೃದಯಾಘಾತಕ್ಕೆ ಬದಲಾದ ಜೀವನ ಶೈಲಿ, ಆನುವಂಶಿಕ ಹಿನ್ನಲೆಗಳು ಕಾರಣ ಎಂದು ವರದಿ ವಿವರಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (Ministry of Health and Family Welfare) ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಯುವ ಜನರಲ್ಲಿ ಕೋವಿಡ್ -19 ಲಸಿಕೆಗಳು ಮತ್ತು ಹೃದಯಾಘಾತದ (Heart Attack) ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಭಾರತೀಯ ರೈಲ್ವೆ ಇಲಾಖೆಯಿಂದ RailOne ಆಪ್ ಬಿಡುಗಡೆ- ಏನೆಲ್ಲಾ ಸೇವೆ ಲಭ್ಯವಿದೆ?
ಐಸಿಎಂಆರ್ನ ರಾಷ್ಟ್ರೀಯ ಸಾಂಕ್ರಾಮಿಕ ರೋಗ ವಿಜ್ಞಾನ ಸಂಸ್ಥೆ (NIE) ಮೇ-ಆಗಸ್ಟ್ 2023ರ ನಡುವೆ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 47 ಆಸ್ಪತ್ರೆಗಳಲ್ಲಿ ʻFactors associated with unexplained sudden deaths among adults aged 18–45 years in Indiaʼ ಎಂಬ ಶೀರ್ಷಿಕೆಯಡಿಯಲ್ಲಿ ಮೊದಲ ಅಧ್ಯಯನ ನಡೆಸಿತು. ಈ ಅಧ್ಯಯನವು ಅಕ್ಟೋಬರ್ 2021 ರಿಂದ ಮಾರ್ಚ್ 2023ರ ನಡುವೆ ಸಂಭವಿಸಿದ ಹಠಾತ್ ಮರಣಗಳನ್ನು ವಿಶ್ಲೇಷಿಸಿತು. ಕೋವಿಡ್-19 ಲಸಿಕೆಯಿಂದ ಹಠಾತ್ ಮರಣದ ಅಪಾಯ ಹೆಚ್ಚುವುದಿಲ್ಲ ಎಂದು ಈ ಅಧ್ಯಯನ ತೋರಿಸಿದೆ. ಇದನ್ನೂ ಓದಿ: ಓಲಾ, ಊಬರ್ ಬಳಕೆದಾರರಿಗೆ ಶಾಕ್ – ಪೀಕ್ ಅವರ್ನಲ್ಲಿ ದುಪ್ಪಟ್ಟು ದರ ವಿಧಿಸಲು ಕೇಂದ್ರ ಒಪ್ಪಿಗೆ
2ನೇ ಅಧ್ಯಯನದಲ್ಲಿ ಏಮ್ಸ್ ದೆಹಲಿಯಲ್ಲಿ ಐಸಿಎಂಆರ್ನ ಸಹಯೋಗದೊಂದಿಗೆ ʻEstablishing the cause in sudden unexplained deaths in youngʼ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರುವ ಸಂಶೋಧನೆಯು ಯುವಕರಲ್ಲಿ ಹಠಾತ್ ಮರಣದ ಕಾರಣಗಳನ್ನು ಗುರುತಿಸುತ್ತಿದೆ. ಪ್ರಾಥಮಿಕ ಫಲಿತಾಂಶಗಳು ಹೃದಯಾಘಾತ (myocardial infarction), ಆನುವಂಶಿಕ ಕಾರಣಗಳು ಮತ್ತು ಅನಾರೋಗ್ಯಕರ ಜೀವನಶೈಲಿಯನ್ನು ಪ್ರಮುಖ ಕಾರಣಗಳಾಗಿ ಗುರುತಿಸಿವೆ. ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಕೇಂದ್ರದಿಂದ ಅಸ್ತು – ಮಾರ್ಗಸೂಚಿ ಬಿಡುಗಡೆ
ಈ ವರದಿಗಳ ಬೆನ್ನಲೆ ಕೊವಿಡ್-19 ಲಸಿಕೆಯನ್ನು ಹೃದಯಾಘಾತಕ್ಕೆ ಸಂಬಂಧಿಸುವ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದೆ. ಲಸಿಕೆಯ ಬಗ್ಗೆ ಆಧಾರ ರಹಿತ ಆರೋಪಗಳು ಸಾರ್ವಜನಿಕರಲ್ಲಿ ಭಯವನ್ನುಂಟುಮಾಡಿ, ಲಸಿಕೆಯ ವಿರುದ್ಧ ಗೊಂದಲ ಸೃಷ್ಟಿಸಬಹುದು, ಇದು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಎಂದು ಅದು ಹೇಳಿದೆ. ಇದನ್ನೂ ಓದಿ: 30 ವರ್ಷದಿಂದ ತಲೆಮರೆಸಿಕೊಂಡಿದ್ದ ಬೆಂಗಳೂರು ಸ್ಫೋಟದ ಉಗ್ರ ಬಂಧನ
ವರದಿಗಳ ಪ್ರಕಾರ ಹೃದಯಾಘಾತಕ್ಕೆ ಕಾರಣ ಏನು?
* ಆನುವಂಶಿಕ ಕಾರಣಗಳು: ಆನುವಂಶಿಕ ರೋಗಗಳು ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಕುಟುಂಬ ಇತಿಹಾಸ
* ಜೀವನಶೈಲಿ: ಧೂಮಪಾನ, ಮದ್ಯಪಾನ, ಔಷಧಿಗಳ ಬಳಕೆ ಮತ್ತು ತೀವ್ರವಾದ ದೈಹಿಕ ಒತ್ತಡ.
* ಪೂರ್ವ-ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಗಳು: ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು.
* ಕೊವಿಡ್-ನಂತರದ ತೊಡಕುಗಳು: ಕೊವಿಡ್-19 ಸೋಂಕಿನಿಂದ ಉಂಟಾಗುವ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಹೃದಯಾಘಾತ ಸಂಭವಿಸಿರಬಹುದು.