ಎಲ್ಲ ಗ್ಯಾರಂಟಿ ಕೊಟ್ಟರು, ಪ್ರಾಣದ ಗ್ಯಾರಂಟಿ ಕೊಡ್ತಿಲ್ಲ: ಶೋಭಾ ಕರಂದ್ಲಾಜೆ ಕೆಂಡಾಮಂಡಲ

Public TV
1 Min Read
Shobha Karandlaje 2

– ಮನೆಗೆ ವಾಪಸ್ ಹೋಗುವ ಗ್ಯಾರಂಟಿ ಇಲ್ಲ ಎಂದು ಬೇಸರ

ಬೆಂಗಳೂರು: ದಕ್ಷಿಣ ಕನ್ನಡ ಅಷ್ಟೇ ಅಲ್ಲ.. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಮನೆಗೆ ವಾಪಸ್ ಹೋಗುವ ಗ್ಯಾರಂಟಿ ಇಲ್ಲ. ಎಲ್ಲ ಗ್ಯಾರಂಟಿ ಕೊಟ್ಟರು, ಪ್ರಾಣದ ಗ್ಯಾರಂಟಿ ಕೊಡ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗೃಹ ಸಚಿವರೇ ಮಾಫಿಯಾ ಕೈಯಲ್ಲಿ ಸಿಲುಕಿಕೊಂಡಿದ್ದಾರೆ. ಆಗ ಸಿದ್ದರಾಮಯ್ಯ ಅವರು ಪಿಎಫ್‌ಐ ಮೇಲಿನ ಕೇಸ್ ವಾಪಸ್ ಪಡೆದರು. ಬಳಿಕ ಅವರು ಬಂದು ನಮ್ಮ ಹುಡುಗರನ್ನ ಕೊಂದ್ರು. ಈಗ ಹುಬ್ಬಳ್ಳಿ ಗಲಭೆ ಕೇಸ್ ಆರೋಪಿಗಳ ಕೇಸ್ ವಾಪಸ್ ಪಡೆಯಲು ಹೊರಟಿದ್ರು. ಹೈಕೋರ್ಟ್ ಅದಕ್ಕೆ ತಡೆ ಕೊಟ್ಟಿದೆ ಸ್ವಾಗತ ಮಾಡ್ತೀನಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಬ್ದುಲ್‌ ರಹಿಮಾನ್‌ ಹತ್ಯೆ ಕೇಸ್‌ | ಮತ್ತಿಬ್ಬರು ಆರೋಪಿಗಳು ಅರೆಸ್ಟ್‌ – ಹತ್ಯೆಗೆ ಕಾರಣವೇ ಇನ್ನೂ ಸಸ್ಪೆನ್ಸ್!‌

Abdul Rahim Murder

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹೇಳ್ತಾರೆ ಮುಸ್ಲಿಮರಿಗೆ ರಕ್ಷಣೆ ಇಲ್ಲ ಅಂತಾ. ಏನು ಮಾಡಲು ಹೊರಟಿದ್ದೀರಾ ನೀವು!? ಮೊದಲು ಬಿಹಾರವನ್ನ ಗೂಂಡಾ ರಾಜ್ಯ ಅಂತಿದ್ರು. ಕರ್ನಾಟಕವನ್ನ ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ದಕ್ಷಿಣ ಕನ್ನಡದವರಿಗೆ ಹೊಟ್ಟೆ ಬಟ್ಟೆಗೆ ಕಾಂಗ್ರೆಸ್, ಮತ ಬೇರೆ ಪಕ್ಷಕ್ಕೆ ಹಾಕುತ್ತಾರೆ ಅಂತಾ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರವಾಗಿ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದು, ದಕ್ಷಿಣ ಕನ್ನಡದವರು ಕರ್ನಾಟಕದಲ್ಲಿ ಇಲ್ಲ ಅಂತಾ ಅರ್ಥವೇ? ಏನು ಅಂತಾ ಮಾತಾಡುತ್ತಾರೆ? ಅಂದರೆ ಮತ ಹಾಕಿದವರಿಗೆ ಮಾತ್ರ ಅಂತಾನಾ? ಕಾಂಗ್ರೆಸ್ ನವರಿಗೆ ಮಾತ್ರ ಗ್ಯಾರಂಟಿ ಅಂತಾ ಅವತ್ತೇ ಹೇಳಬೇಕಿತ್ತು. ಅವತ್ತು ನಿನಗೂ ಫ್ರೀ ನನಗೂ ಫ್ರೀ ಅಂತಾ ಹೇಳಿದ್ದರಲ್ವಾ? ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕತೆಯ ಕೂಗು ಇರುವಾಗ ಇವರು ಜವಾಬ್ದಾರಿ ಇಲ್ಲದೇ ಮಾತಾಡುತ್ತಿದ್ದಾರೆ ಎಂದು ಅಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಂಗಳೂರಲ್ಲಿ ಸಾಲು ಸಾಲು ಹತ್ಯೆ ಬೆನ್ನಲ್ಲೇ ಇಬ್ಬರು ಐಪಿಎಸ್‌ ಅಧಿಕಾರಿಗಳ ಎತ್ತಂಗಡಿ

Share This Article