ಉಡುಪಿ: ಜಿಲ್ಲೆ ಕಾರ್ಕಳ ತಾಲೂಕಿನ ನಕ್ರೆಯಲ್ಲಿ ಹಿಂದೂ ಜಾಗರಣ ವೇದಿಕೆ ಮತಾಂತರ ಪ್ರಕ್ರಿಯೆ ನಡೆಯುತ್ತಿದ್ದ ಕೇಂದ್ರದ ಮೇಲೆ ದಾಳಿ ಮಾಡಿದ್ದನ್ನು ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಖಂಡಿಸಿದ್ದಾರೆ. ಕರಾವಳಿಯಲ್ಲಿ ಸರ್ಕಾರ ಕಾನೂನು ಇಲ್ಲ ಎನ್ನುವುದಕ್ಕೆ ಇದು ಉದಾಹರಣೆ ಎಂದು ಚಾಟಿ ಬೀಸಿದ್ದಾರೆ.
ನಕ್ರೆ ಪರಿಸರದಲ್ಲಿ ಮತಾಂತರ ನಡೆಯುತ್ತದೆ ಎಂಬ ಮಾಹಿತಿ ಸಂಘಟನೆಗಳಿಗೆ ಇದ್ದರೆ, ಅವರು ಕಾನೂನು ರೀತಿಯ ಪ್ರಯತ್ನ ಮಾಡಬೇಕಿತ್ತು. ಕಾನೂನು ಉಲ್ಲಂಘನೆ ಕಾರ್ಕಳದಿಂದ ಆರಂಭವಾಗಿದೆ. ಕಾನೂನು ಉಲ್ಲಂಘನೆ ಆಗಿದ್ದರೆ, ಮತಾಂತರ ನಡೆಯುತ್ತಿದ್ದರೆ ಪೊಲೀಸರ ಮೂಲಕ ಕ್ರಮ ಕೈಗೊಳ್ಳಬಹುದಿತ್ತು. ಕೇಂದ್ರದಲ್ಲಿ, ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದೆ. ಕಾರ್ಕಳ ಶಾಸಕರೇ ಉಸ್ತುವಾರಿ ಸಚಿವರಾಗಿದ್ದಾರೆ. ಹಿಂದೂ ಜಾಗರಣ ವೇದಿಕೆ ದಾಂದಲೆ ದೌರ್ಜನ್ಯ ಮಾಡಿದ್ದು ಎಷ್ಟು ಸರಿ? ಎಂದು ಸೊರಕೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಉರುಳಾಡುವ ಶೋಭಾ ಕರಂದ್ಲಾಜೆ ಎಲ್ಲಿ..?: ಸೊರಕೆ
ಕಾನೂನು ಉಲ್ಲಂಘಿಸಿದವರ ಮೇಲೆ ದಾಂಧಲೆಯೇ ಉತ್ತರನಾ..? ಪೊಲೀಸರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಹಿಂದೂ ಜಾಗರಣ ವೇದಿಕೆಗೆ ಗೌರವ ಇಲ್ಲವೆ..? ಕಾರ್ಕಳದಲ್ಲಿ ಧಾರ್ಮಿಕ ಪ್ರವಚನಗಳು ನಡೆಯುತ್ತಿತ್ತು ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಕೂಡ ಸತ್ಯಾಸತ್ಯತೆಯನ್ನು ಪರಾಮರ್ಶಿಸಬೇಕಿದೆ ಎಂದು ಸೊರಕೆ ಒತ್ತಾಯಿಸಿದ್ದಾರೆ.