ಚಿತ್ರದುರ್ಗ: ವಿದ್ಯಾರ್ಥಿಗಳು ಬಸ್ ಗಾಗಿ ಪರದಾಡುವ ಪರಿಸ್ಥಿತಿ ಸಾರಿಗೆ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಮೊಳಕಾಲ್ಮೂರು ಕ್ಷೇತ್ರದ ಕಣಕುಪ್ಪೆ ಗ್ರಾಮದಲ್ಲಿ ನಿರ್ಮಾಣವಾಗಿದೆ.
Advertisement
ಕಳೆದ ಹಲವು ವರ್ಷಗಳಿಂದಲೂ ಬಸ್ ಗಳಿಲ್ಲದೆ ಜನರು ನಾಲ್ಕಾರು ಕಿ.ಮೀ. ನಡೆಯುವ ದುಸ್ಥಿತಿ ಇದೆ. ಆದರೆ ಈವರೆಗೆ ಸಾರಿಗೆ ಬಸ್ ಈ ಗ್ರಾಮದತ್ತ ಧಾವಿಸಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳು ನಿತ್ಯ ವಿದ್ಯಾಭ್ಯಾಸಕ್ಕೆ ತೆರಳಲು ಬಸ್ ಗಾಗಿ ಪರದಾಡುತ್ತ, ಸಿಕ್ಕ ಸಿಕ್ಕ ವಾಹನ ಏರಿ ಸಾಗಲು ಹರಸಾಹಸಪಡುವಂತಾಗಿದೆ. ವಿದ್ಯಾರ್ಥಿಗಳು ಆಟೋಗಳ ಟಾಪ್ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ
Advertisement
Advertisement
ಕಳೆದ ವರ್ಷ ಫೆಬ್ರವರಿ 20ರಂದು ಚಿತ್ರದುರ್ಗ ಡಿಸಿ ಕವಿತಾ ಮನ್ನಿಕೇರಿ ಗ್ರಾಮ ವಾಸ್ತವ್ಯ ಹೂಡಿದ್ದರು. ಆಗ ಡಿಸಿ ಸೂಚನೆ ಮೇರೆಗೆ ಕೆಲ ದಿನ ಮಾತ್ರ ಬಸ್ ಸಂಚಾರ ನಡೆಸಿದ್ದು, ಇದೀಗ ಶಾಲಾ, ಕಾಲೇಜು ಆರಂಭವಾದರೂ ಗ್ರಾಮಕ್ಕೆ ಬಸ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ನಗರಪ್ರದೇಶಗಳಿಗೆ ಬರಲು ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ, ಸಾರಿಗೆ ಸಚಿವರು ಹಾಗೂ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.