ಇಂದು ರಾತ್ರಿಯಿಂದಲೇ ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ 900ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ, ಚಿಕ್ಕ ಮಗಳೂರಿನಲ್ಲಿ ಮಾತ್ರ ಈ ಸಿನಿಮಾ ಪ್ರದರ್ಶನ ಕಾಣುತ್ತಿಲ್ಲ. ಹೀಗಾಗಿ ಯಶ್ ಅಭಿಮಾನಿಗಳು ನಗರದ ನಾಗಲಕ್ಷ್ಮೀ ಥಿಯೇಟರ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 ಜೊತೆ ನೋಡಬಹುದು ಹೊಂಬಾಳೆ ಫಿಲ್ಮ್ಸ್ ನ ಮತ್ತೆರಡು ಸಿನಿಮಾ ಟೀಸರ್
Advertisement
ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದ್ದರೂ, ಚಿಕ್ಕಮಗಳೂರಿನಲ್ಲಿ ಮಾತ್ರ ಯಾಕೆ ಪ್ರದರ್ಶನ ಕಾಣುತ್ತಿಲ್ಲವೆಂದು ಆಕ್ರೋಶ ವ್ಯಕ್ತ ಪಡಿಸಿದ ಯಶ್ ಅಭಿಮಾನಿಗಳು ನಾಗಲಕ್ಷ್ಮೀ ಥಿಯೇಟರ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಕೆಲ ಕಾಲ ಥಿಯೇಟ್ ಮಾಲೀಕರ ಮತ್ತು ಅಭಿಮಾನಿಗಳ ಮಾತಿನ ಸಮರವೇ ನಡೆದಿದೆ. ಇದನ್ನೂ ಓದಿ : ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ
Advertisement
Advertisement
ಯಶ್ ಅಭಿಮಾನಿಗಳ ಹೋರಾಟದ ಕುರಿತು ತಿಳಿದುಕೊಂಡ ಶಾಸಕ ಸಿ.ಟಿ.ರವಿ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಥಿಯೇಟರ್ ಮಾಲೀಕರು ಮತ್ತು ವಿತರಕ ಬಳಿ ಮಾತನಾಡಿ, ನಾಳೆ ಸಿನಿಮಾ ರಿಲೀಸ್ ಆಗುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2
Advertisement
ಯಶ್ ಮತ್ತು ವಿತರಕರ ಬಳಿ ಶಾಸಕ ಸಿ.ಟಿ. ರವಿ ಮಾತನಾಡಿದ್ದಾರೆ ಎನ್ನಲಾಗುತ್ತಿದ್ದು, ನಾಳೆ ಚಿಕ್ಕಮಗಳೂರಿನ ಎನ್.ಎಮ್.ಸಿ ಸರ್ಕಲ್ ಬಳಿ ಇರುವ ನಾಗಲಕ್ಷ್ಮೀ ಚಿತ್ರಮಂದಿರದಲ್ಲಿ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಲಿದೆ ಎನ್ನುತ್ತಿವೆ ಮೂಲಗಳು.