ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿ ತರುವಂತೆ ಕೈಗೊಂಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಅತಿ ದೊಡ್ಡ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶ ಎಂದಿನಂತೆ ಕಾರ್ಯ ಚಟುವಟಿಕೆ ನಡೆಸಿದೆ.
ಕೈಗಾರಿಕಾ ಪ್ರದೇಶ ಎಂದಿನಂತೆ ಕಂಡು ಬಂದಿದ್ದು, ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಕಂಪೆನಿಗಳು ಉತ್ತಮ ಕಾರ್ಯ ಚಟುವಟಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಯಾವುದೇ ಬಂದ್ ಬಿಸಿ ಇರಲಿಲ್ಲ.
Advertisement
Advertisement
ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಮೊದಲನೇ ಪಾಳಿ ಕೆಲಸ ಕೈಗೊಂಡಿರುವ ಹಲವಾರು ಕಂಪನಿಗಳು, ಎರಡನೇ ಪಾಳಿ ಕೆಲಸವನ್ನು ಮಧ್ಯಾಹ್ನದ ವೇಳೆಗೆ ಪ್ರಾರಂಭಿಸುವ ಲಕ್ಷಣ ತೋರಿಸಿತ್ತು.
Advertisement
ಕರ್ಲಾನ್, ಟಿಡಿಪಿಎಸ್, ಮಾರುತಿ ಸುಜುಕಿ, ಜಿಂದಾಲ್ ನಂತಹ ಪ್ರತಿಷ್ಟಿತ ಕಂಪನಿಗಳಲ್ಲಿ ಕೆಲಸ ಎಂದಿನಂತೆ ಸಾಗಿದ್ದು, ಬಂದ್ ಸಂಪೂರ್ಣ ವಿಫಲವಾಗಿದೆ. ಬುಧವಾರ ಆಟೋ ಮತ್ತು ಟ್ಯಾಕ್ಸಿ ಮತ್ತು ಚಾಲಕರ ಮಾಲೀಕರ ಸಂಘದವರು ಬಂದ್‍ಗೆ ಪಾಲ್ಗೊಳ್ಳುವುದಿಲ್ಲ. ನಮಗೆ ರಾಜ್ಯ ಸಂಘಟನೆಯಿಂದ ಬಂದ್ ಮಾಹಿತಿ ಯಾವುದು ಬಂದಿಲ್ಲ ಎಂದು ತಿಳಿಸಿದ್ದರು.