ಬೆಂಗಳೂರು: ಆಕ್ಸಿಡೆಂಟ್ ಆದಾಗ ಬೈಕ್ ಸವಾರರು ಐಎಸ್‍ಐ ಮಾರ್ಕಿರುವ ಹೆಲ್ಮೆಟ್ ಧರಿಸಿದ್ದರೆ ಮಾತ್ರ ವಿಮೆ ಸಿಗಲಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೆಲ್ಮೆಟ್ ಧರಿಸುವುದು ಎಂದರೆ ನೆಪ ಮಾತ್ರಕ್ಕೆ ಯಾವುದೋ ಹೆಲ್ಮೆಟ್ ಧರಿಸುವುದು ಎಂದರ್ಥವಲ್ಲ. ರಕ್ಷಣಾತ್ಮಕ ಹೆಲ್ಮೆಟ್‍ನನ್ನೇ ಧರಿಸಬೇಕು. ಐಎಸ್‍ಐ ಸಂಖ್ಯೆ 4151: 1993 ಮುದ್ರೆಯೇ ಇರಬೇಕು. ಹೆಲ್ಮೆಟ್ ತಯಾರಿಕಾ ಕಂಪನಿ ಹೆಸರು, ದಿನಾಂಕ, ವರ್ಷ, ಗಾತ್ರದ ವಿವರ ನಮೂದಾಗಿರಬೇಕು. ನಂಬರ್, ಹೆಸರು ಯಾವುದು ಅಳಿಸಿ ಹೋಗುವಂತಿರಬಾರದು. ಸುಲಭವಾಗಿ ಓದುವಂತಿರಬೇಕು ಎಂದು ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ನೇತೃತ್ವದ ಏಕಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ.
Advertisement
Advertisement
ಐಎಸ್‍ಐ ಮಾರ್ಕಿಲ್ಲದ ಹೆಲ್ಮೆಟ್ ಧರಿಸಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟರೆ ಅಥವಾ ಅಂಗ ಊನವಾದರೆ ವಿಮೆ ಕಂಪನಿ ವಿಮೆ ಪಾವತಿಸಬೇಕಿಲ್ಲ. ಕಾರಿನ ಸೀಟ್ ಬೆಲ್ಟ್ ಹಾಕದೇ ಇದ್ದರೆ ವಿಮೆ ಕೊಡಬೇಕಾಗಿಲ್ಲ ಎಂದು ಓರಿಯಂಟಲ್ ವಿಮಾ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದೆ. ಇದನ್ನೂ ಓದಿ: ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿ ಓದ್ಲೇಬೇಕು