ಬೆಂಗಳೂರು: ಕೇಂದ್ರ ಸಚಿವರೊಬ್ಬರು ಕರ್ನಾಟಕದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಅವರ ಐದು ವರ್ಷದ ಅವಧಿ ಮುಗಿದು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ರಾಜ್ಯಕ್ಕೆ ಸಚಿವರ ಕೊಡುಗೆ ಏನು ಎಂಬ ಮಾಹಿತಿ ಕೋರಿ ಅರ್ಜಿ ಹಾಕಿದ್ರೆ ಮಾಹಿತಿ ಸಿಕ್ಕಿಲ್ಲ. ಬದಲಾಗಿ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿಕೊಳ್ಳಿ ಎಂಬ ಉತ್ತರ ಬಂದಿದೆ.
ಹೌದು. 5 ವರ್ಷ ಮೋದಿ ಸರ್ಕಾರದಲ್ಲಿ ಆರಂಭದಲ್ಲಿ ರೈಲ್ವೇ ಸಚಿವರಾಗಿ ಬಳಿಕ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಚಿವರಾಗಿರುವ ಡಿವಿ ಸದಾನಂದ ಗೌಡರು ಐದು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಮಾಡಿದ ಕೆಲಸಗಳೇನು ಎಂದು ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
Advertisement
Advertisement
ಈ ಪ್ರಶ್ನೆಗೆ ಪಬ್ಲಿಕ್ ಡೊಮೇನ್ ನಲ್ಲಿ ನೋಡಿ ಅಥವಾ ಇಂಟರ್‍ನೆಟ್ ನಲ್ಲಿ ನೋಡಿ ಎನ್ನುವ ಉತ್ತರ ಬಂದಿದೆ ಎಂದು ಆರ್‍ಟಿಯ ಕಾರ್ಯಕರ್ತ ಶಿವ ಮಂಜೇಶ್ ಹೇಳಿದ್ದಾರೆ.
Advertisement
ಡಿ.ವಿ ಸದಾನಂದ ಗೌಡರ ಕ್ಷೇತ್ರದಡಿ 8 ವಿಧಾನಸಭಾ ಕ್ಷೇತ್ರಗಳಿದ್ದು, ಆ ಕ್ಷೇತ್ರಗಳಲ್ಲಿ ಸಂಸದರ ನಿಧಿಯಿಂದ ಏನು ಕೆಲಸ ಮಾಡಿದ್ದಾರೆ ಎಂದರು ಯಾವುದೇ ಮಾಹಿತಿ ಇಲ್ಲ. ಅಲ್ಲದೇ ಎಸ್‍ಸಿ, ಎಸ್ಟಿ ವರ್ಗದವರಿಗೂ ಶೇ.1ರಷ್ಟು ಕೆಲಸ ಕಾರ್ಯಗಳನ್ನ ಮಾಡಿಲ್ಲ ಎಂದು ಶಿವ ಮಂಜೇಶ್ ಆರೋಪಿಸಿದ್ದಾರೆ.
Advertisement
ಒಟ್ಟಾರೆ ಐದು ವರ್ಷದ ಅವಧಿಯಲ್ಲಿ ರಾಜ್ಯಕ್ಕೆ ಸದಾನಂದಗೌಡರ ಕೊಡುಗೆ ಬಗ್ಗೆ ಆರ್‍ಟಿಐನಲ್ಲೂ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇನ್ನಾದರೂ ಮಾಹಿತಿ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ರಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ನಿಧನದ ಬಳಿಕ ಈ ಖಾತೆಯನ್ನು ಡಿವಿಎಸ್ ಅವರಿಗೆ ನೀಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv