– ಭಕ್ತರ ವಿತರಣೆಗೆ 7.5 ಲಕ್ಷ ಲಾಡು ತಯಾರಿ
ಚಾಮರಾಜನಗರ: ಜಿಲ್ಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ಸೇವೆ ಅಬಾಧಿತವಾಗಿದೆ. ತಮ್ಮನ್ನೂ ಸಹ ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಕೆಎಸ್ಆರ್‌ಟಿಸಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದು ಕೆಎಸ್ಆರ್‌ಟಿಸಿ ಬಸ್‍ಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.
ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ಇರುವುದರಿಂದ ಜಿಲ್ಲೆಯಲ್ಲಿ ಕೆಎಸ್ಆರ್‌ಟಿಸಿಯ ಯಾವುದೇ ನೌಕರರಿಗೆ ರಜೆ ನೀಡಿಲ್ಲ. ಗೈರು ಹಾಜರಾದರೆ ನೋ ವರ್ಕ್ ನೋ ವೇಜಸ್ ಎಂದು ಎಚ್ಚರಿಕೆ ನೀಡಲಾಗಿದೆ. ಚಾಮರಾಜನಗರ ವಿಭಾಗದಲ್ಲಿ ಒಟ್ಟು ನಾಲ್ಕು ಡಿಪೋಗಳಿದ್ದು 557 ಬಸ್‍ಗಳಿವೆ 1800ಕ್ಕೂ ಹೆಚ್ಚು ಮಂದಿ ನೌಕರರಿದ್ದು ಜಿಲ್ಲೆಯಲ್ಲಿ ಬಸ್ ಸೇವೆ ಅಬಾಧಿತವಾಗಿದೆ.
ಇನ್ನೂ ಮಹಾ ಶಿವರಾತ್ರಿ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ದಂಡೆ ಹರಿದು ಬಂದಿದೆ. ಬರುವ ಭಕ್ತಾಧಿಗಳಿಗೆ ಪ್ರಾಧಿಕಾರದಿಂದ ಲಾಡು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ಮೂರು ದಿನದಲ್ಲಿ 2.10 ಲಕ್ಷ ಲಾಡು ಮಾರಾಟವಾಗಿದ್ದು, ಇನ್ನೂ 3.5 ಲಕ್ಷ ಲಾಡು ಸ್ಟಾಕ್ ಇದೆ. ಇಂದಿನಿಂದ 24ರವರೆಗೆ ಪ್ರತಿದಿನ 40,000 ಲಾಡುಗಳು ತಯಾರಾಗಲಿದ್ದು, 2 ಲಕ್ಷ ಲಾಡು ತಯಾರಾಗಲಿವೆ.
ಅಂದರೆ ಒಟ್ಟಾರೆ ಈ ಬಾರಿ ಶಿವರಾತ್ರಿ ವೇಳೆ 7.5 ಲಕ್ಷ ಲಾಡು ವಿತರಣೆಗೆ ಸಿದ್ಧತೆ ನಡೆದಿದೆ. ಲಾಡುವಿನ ಕೊರತೆ ಉಂಟಾಗಬಾರದೆಂದು ಲಾಡು ತಯಾರಿಕೆ ಇಂದು ಕೂಡ ಮುಂದುವರಿದಿದೆ ಎಂದು ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವ ಸ್ವಾಮಿ ಮಾಹಿತಿ ನೀಡಿದ್ದಾರೆ.