ಬೆಂಗಳೂರು: ಕನ್ನಡ ಧ್ವಜದ ವಿಚಾರದ ಮುಂದಿಟ್ಟು ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸಿದ್ದ ಸಿಎಂ, ಇದೀಗ ಮತ್ತೊಮ್ಮೆ ಕನ್ನಡ ಪರ ನಿಲುವು ತಳೆದಿದ್ದಾರೆ. ಮೆಟ್ರೋದಲ್ಲಿ ಹಿಂದಿ ಬಳಕೆಗೆ ವಿರೋಧ ವ್ಯಕ್ತಪಡಿಸಿರುವ ಸಿಎಂ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಬಿಜೆಪಿಯನ್ನ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ಹಿಂದಿ ಬಳಕೆ ತೆರವಿಗೆ ನಿರ್ಧರಿಸಿರುವ ಸಿಎಂ, ಬಿಎಂಆರ್‍ಸಿಎಲ್ ಗೆ ಹಿಂದಿ ತೆರವಿಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಪತ್ರ ಬರೆದು, ಮೆಟ್ರೋದಲ್ಲಿ ರಾಜ್ಯ ಸರ್ಕಾರದ ಸಹಭಾಗಿತ್ವ ಹೆಚ್ಚಿದೆ. ಕೇಂದ್ರದ ನೆರವಿದ್ದರೂ ಮೆಟ್ರೋದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಪಾಲು ಹೆಚ್ಚಿದೆ. ಹೀಗಾಗಿ ಇಲ್ಲಿ ತ್ರಿಭಾಷಾ ಸೂತ್ರ ಅನ್ವಯ ಸರಿಯಲ್ಲ ಎಂದು ಬರೆದಿದ್ದಾರೆ.
Advertisement
ರಾಜ್ಯದಲ್ಲಿ ಹಿಂದಿ ಬಳಕೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಜನರ ಭಾವನೆಗಳಿಗೆ ಸರ್ಕಾರ ಸ್ಪಂದಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋದಲ್ಲಿ ಹಿಂದಿ ಬಳಕೆ ನಿಲ್ಲಿಸುವಂತೆ ಬಿಎಂಆರ್‍ಸಿಎಲ್ ಗೆ ಸೂಚನೆ ನೀಡಿದ್ದೇವೆ ಅಂತಾ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್‍ಗೆ ಸಿಎಂ ಪತ್ರ ಬರೆದಿದ್ದಾರೆ.
Advertisement
ನಮ್ಮ ಮೆಟ್ರೋ ನಾಮಫಲಕಗಳಲ್ಲಿ ಹಿಂದಿ ಕೈಬಿಟ್ಟು ಪುನರ್ ವಿನ್ಯಾಸ ಮಾಡುವಂತೆ ಮೆಟ್ರೋ ನಿಗಮಕ್ಕೆ ಸೂಚಿಸಿರುವುದರ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿ ಪತ್ರ ಬರೆದಿದ್ದೇನೆ pic.twitter.com/Y4M4CcffMC
— CM of Karnataka (@CMofKarnataka) July 28, 2017
Advertisement
ಮೆಟ್ರೋ ನಿಲ್ದಾಣಗಳಲ್ಲಿ ತ್ರಿಭಾಷಾ ಸೂತ್ರ ಅನ್ವಯಿಸುವುದು ಅಸಮಂಜಸ. ಮೆಟ್ರೋ ನಿಗಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರಿಸಮನಾದ ಪಾಲು ಹೊಂದಿದ್ದರೂ ರಾಜ್ಯದ ಭಾದ್ಯತೆ ಹೆಚ್ಚು
— CM of Karnataka (@CMofKarnataka) July 28, 2017
Advertisement
ರಾಜ್ಯಭಾಷೆಗೆ ಆದ್ಯತೆಯನ್ನುನೀಡುವುದರ ಜೊತೆಗೆ ರಾಜ್ಯದ ಜನತೆಯ ಸಾಂಸ್ಕೃತಿಕ ಆಶೋತ್ತರಗಳಿಗೆ, ಭಾವನೆಗಳಿಗೆ ಸ್ಪಂದಿಸುವುದು ಮುಖ್ಯ.
— CM of Karnataka (@CMofKarnataka) July 28, 2017
ಮೆಟ್ರೋ ಬಳಸುವ ಪ್ರಯಾಣಿಕರು ಕನ್ನಡ ಅಥವಾ ಇಂಗ್ಲಿಷ್ ಭಾಷೆಯನ್ನು ಓದುವ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವುಳ್ಳವರಾಗಿದ್ದಾರೆ. ಹಾಗಾಗಿ ಹಿಂದಿ ಅಗತ್ಯತೆ ಕಂಡುಬರುವುದಿಲ್ಲ
— CM of Karnataka (@CMofKarnataka) July 28, 2017