ಬೆಂಗಳೂರು: ಶಾಸಕ ಮುನಿರತ್ನ (Muniratna) ಕೇಸ್‌ನಲ್ಲಿ ಯಾವುದೇ ದ್ವೇಷದ ರಾಜಕೀಯ ಮಾಡುತ್ತಿಲ್ಲ. ಕಾನೂನು ಪ್ರಕಾರವೇ ಕ್ರಮ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಶಾಸಕ ಮುನಿರತ್ನ ಕೇಸ್‌ಗೆ ವಿಶೇಷ ತಂಡ ರಚನೆ ಮಾಡುವಂತೆ ಕಾಂಗ್ರೆಸ್ ಒಕ್ಕಲಿಗ ಶಾಸಕರಿಂದ ಮನವಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಒಕ್ಕಲಿಗ ಶಾಸಕರು ನನ್ನನ್ನು ಭೇಟಿ ಆಗಿದ್ದರು. ಮುನಿರತ್ನ ಒಕ್ಕಲಿಗರು, ಎಸ್ಸಿಗಳ ಮೇಲೆ ಮಾತಾಡಿದ್ದಾರೆ. ಕೆಟ್ಟ ಪದ ಬಳಕೆ ಮಾಡಿದ್ದಾರೆ. ಹೆಣ್ಣುಮಕ್ಕಳ ಮೇಲೆ ಮಾತಾಡಿದ್ದಾರೆ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ಎಫ್‌ಎಸ್‌ಎಲ್‌ಗೆ ಧ್ವನಿ ರವಾನೆ ಮಾಡಲಾಗಿದೆ. ವರದಿ ಬಂದ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆಯಿಂದ ಕೋಟ್ಯಂತರ ಹಣ ಉಳಿತಾಯ: ಅಶೋಕ್
ಮುನಿರತ್ನ ಚೆಲುವರಾಜ್ ಮೇಲೆ ಕೂಡ ಮಾತನಾಡಿದ್ದಾರೆ. ಮಾಜಿ ಪಾಲಿಕೆ ಸದಸ್ಯ ವೇಲು ನಾಯಕ್ ಮೇಲೂ ಮಾತಾಡಿದ್ದಾರೆ. ಅದರ ಮೇಲೆ ದೂರು ಕೊಟ್ಟಿದ್ದಾರೆ. ದೂರಿನ ಆಧಾರದಲ್ಲಿ ದೂರು ದಾಖಲು ಆಗಿದೆ. ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾನೂನು ರೀತಿ ಕ್ರಮ ಆಗಿದೆ. ಯಾವುದೇ ದ್ವೇಷದ ರಾಜಕೀಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್
ಮುನಿರತ್ನ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಎರಡೂ ಬೇರೆ ಬೇರೆ ಕೇಸ್. ಚನ್ನಾರೆಡ್ಡಿ ಈ ರೀತಿ ಮಾತಾಡಿರೋದು ಆಡಿಯೋ ಇದೆಯಾ? ಪರಶುರಾಂ ಅವರ ಹೆಂಡತಿ ಹೇಳಿರೋದು ಅಷ್ಟೇ. ಪರಶುರಾಂ ಹೇಳಿದ್ದಾರಾ? ನಾನು ಲಾಯರ್ ಕಣ್ರೀ ಎಂದು ಗರಂ ಆದರು. ಇದನ್ನೂ ಓದಿ: 100 ಚದರ ಅಡಿಯ ನಿವೇಶನ, 3.5 ಲಕ್ಷ ವೆಚ್ಚದ 2 ರೂಮ್‌ಗಳಿರುವ ಮನೆ, 500 ರೂ.ಗೆ ಎಲ್‌ಪಿಜಿ ಸಿಲಿಂಡರ್: ಹರಿಯಾಣಕ್ಕೆ ಸಪ್ತ ಗ್ಯಾರಂಟಿ ಘೋಷಣೆ
ಪರಶುರಾಂ ಕುಟುಂಬ ಆರೋಪ ಮಾಡಿತ್ತು. ಆದರೆ ಆ ಪ್ರಕರಣ ಮತ್ತು ಇದಕ್ಕೂ ಹೋಲಿಸುವುದು ಬೇಡ. ಆತನ ಪತ್ನಿ, ಕುಟುಂಬದವರು ಆರೋಪ ಮಾಡಿದ್ದಾರೆ. ಆದರೆ ಪರಶುರಾಂ ಮಾಡಿಲ್ಲ. ಮುನಿರತ್ನ ಕೇಸ್‌ನಲ್ಲಿ ಒನ್ ಟು ಒನ್ ಆರೋಪ ಇದೆ. ಹಾಗಾಗಿ ಮುನಿರತ್ನ ಪ್ರಕರಣದಲ್ಲಿ ಕೇಸ್ ಆಗಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಿ ಅಂತ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಪೇನ್ ಕಿಲ್ಲರ್ ಮಾತ್ರೆಗಳಿಂದ ಆತಂಕ, ನಿಯಂತ್ರಣಕ್ಕೆ ಕ್ರಮ: ಪರಮೇಶ್ವರ್