ಗಂಗಾಜಲಕ್ಕೆ 18% ಜಿಎಸ್‌ಟಿ ವಿಧಿಸಲ್ಲ – ಖರ್ಗೆ ಆರೋಪಕ್ಕೆ CBIC ಸ್ಪಷ್ಟನೆ

Public TV
1 Min Read
‘No GST imposed on Ganga water other puja items clarifies CBIC after Congress flays Centre

ನವದೆಹಲಿ: ಗಂಗಾಜಲಕ್ಕೆ (Gangajal) 18% ತೆರಿಗೆ (Tax) ವಿಧಿಸುತ್ತಿಲ್ಲ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಸ್ಪಷ್ಟನೆ ನೀಡಿದೆ.

ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಿಬಿಐಸಿ, ಗಂಗಾಜಲ ಅಥವಾ ಯಾವುದೇ ಇತರ ಪೂಜೆ ವಸ್ತುಗಳ ಮೇಲೆ ಯಾವುದೇ ಜಿಎಸ್‌ಟಿಯನ್ನು ವಿಧಿಸುವುದಿಲ್ಲ ಎಂದು ತಿಳಿಸಿದೆ.

2017ರಲ್ಲಿ ನಡೆದ 14 ಮತ್ತು 15ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಪೂಜಾ ಸಾಮಗ್ರಿಗಳಿಗೆ ಜಿಎಸ್​ಟಿ ವಿಧಿಸುವುದರ ಸಂಬಂಧ ವಿಸ್ತೃತವಾಗಿ ಚರ್ಚೆ ನಡೆದಿದೆ. ಇವುಗಳನ್ನು ಜಿಎಸ್​ಟಿ ವಿನಾಯಿತಿ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ಜಿಎಸ್​ಟಿ ಜಾರಿಗೆ ಬಂದಾಗಿನಿಂದಲೂ ವಸ್ತುಗಳಿಗೆ ಜಿಎಸ್‌ಟಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ರಾಜ್ಯಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾಡಿದ ಟ್ವೀಟ್‌ನಿಂದ ಈ ವಿಚಾರ ಮುನ್ನೆಲೆಗೆ ಬಂದಿತ್ತು. ಇದು ಲೂಟಿಯ ತುತ್ತತುದಿ. ಬೂಟಾಟಿಕೆಯ ಪರಮಾವಧಿ ಎಂದು ಕಾಂಗ್ರೆಸ್‌ ಕಿಡಿಕಾರಿತ್ತು.  ಇದನ್ನೂ ಓದಿ: ಮೈಸೂರಿನಲ್ಲಿ ಮಹಿಷ ದಸರಾಕ್ಕೆ ಅನುಮತಿ

ಭಾರತೀಯರಿಗೆ ಗಂಗೆ ಪರಮಪವಿತ್ರ. ಭಾರತೀಯರ ಜೀವನದಲ್ಲಿ ಹುಟ್ಟಿನಿಂದ ಹಿಡಿದು ಸಾವಿನ ತನಕ ಗಂಗೆ (Ganga River) ಅದರದ್ದೇ ಆದ ಪ್ರಾಮುಖ್ಯತೆ ಪಡೆದಿದೆ. ಅಂತಹ ಪರಮ ಪವಿತ್ರವಾದ ಗಂಗಾ ನದಿ ನೀರಿಗೆ 18% ರಷ್ಟು ಜಿಎಸ್‌ಟಿ ವಿಧಿಸುತ್ತಿದ್ದೀರಿ. ಇದು ಸರಿಯೇ ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಸಿಬಿಐಸಿ ಸ್ಪಷ್ಟನೆ ನೀಡಿದೆ.

 

Web Stories

Share This Article