ಬೆಂಗಳೂರು: ಅನುದಾನ ಖಾಲಿಯಾಗಿದ್ದಕ್ಕೆ ಮೂರು ವರ್ಷಗಳಿಂದ ಜಾರಿಯಲ್ಲಿದ್ದ ಮಹಿಳಾ ಪರ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ (Siddaramaiah Government) ನಿಲ್ಲಿಸಿದೆ.
ಹೌದು. ಸೇಫ್ ಸಿಟಿ ಪ್ರಾಜೆಕ್ಟ್ (Safe City Project) ಆಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವುಮೆನ್ ಹೆಲ್ಪ್ ಡೆಸ್ಕ್ (Women Help Desk) ಸಿಬ್ಬಂದಿಯ ತೆರವಿಗೆ ಸರ್ಕಾರ ಸೂಚಿಸಿದೆ.
Advertisement
Advertisement
ಮಹಿಳೆಯರಿಗೆ ಆಗುವ ಕಿರಿ ಕಿರಿ ತಪ್ಪಿಸುವ ಉದ್ದೇಶದಿಂದ 2021 ಜನವರಿಯಲ್ಲಿ ಮಹಿಳಾ ಸಹಾಯ ಕೇಂದ್ರ ಆರಂಭವಾಗಿತ್ತು. ಪೋಕ್ಸೋ, ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣದ ಸಂತ್ರಸ್ತರಿಗೆ ಮಹಿಳಾ ಹೆಲ್ಪ್ ಡೆಸ್ಕ್ ಸಹಕಾರಿಯಾಗಿತ್ತು. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್ 2ಗೆ ವಿಶ್ವದ ಸುಂದರ ವಿಮಾನ ನಿಲ್ದಾಣ ಗೌರವ
Advertisement
ಮೂರು ವರ್ಷಗಳಿಗೆ ಮಾತ್ರ ಅನುದಾನ ಮೀಸಲಿಡಲಾಗಿತ್ತು ಎಂದು ಈಗ ಈ ವುಮೆನ್ ಹೆಲ್ಪ್ ಡೆಸ್ಕ್ ನಿಲ್ಲಿಸಿದೆ. ಈಗಾಗಲೇ ಸರ್ಕಾರ ಪೊಲೀಸ್ ಠಾಣೆಗಳಿಗೆ ಹೆಲ್ಪ್ ಡೆಸ್ಕ್ ಸಿಬ್ಬಂದಿಯನ್ನು ಡಿ.31ಕ್ಕೆ ಬಿಡುಗಡೆ ಮಾಡುವಂತೆ ಅದೇಶಿಸಿದೆ.
Advertisement