ಮುಂಬೈ: ಕಳೆದ ಎರಡೂವರೆ ವರ್ಷಗಳಿಂದ ನಿಮ್ಮ ಮನೆಗೆ ನಮಗೆ ಪ್ರವೇಶವೇ ಇರಲಿಲ್ಲ ಎಂದು ಉದ್ಧವ್ ಠಾಕ್ರೆಗೆ ಬಂಡಾಯ ಶಾಸಕರೊಬ್ಬರು ಪತ್ರ ಬರೆದು ಕಿಡಿಕಾರಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪಕ್ಷದ ಶಾಸಕರನ್ನುದ್ದೇಶಿಸಿ ಭಾವನಾತ್ಮಕವಾಗಿ ಮಾತನಾಡಿದ್ದರು. ನಮ್ಮ ಶಾಸಕರು ಬಯಸಿದರೆ ರಾಜೀನಾಮೆ ಕೊಡಲು ಸಿದ್ಧ. ಏನೇ ಇದ್ದರೂ ನನ್ನ ಎದುರಿಗೆ ಬಂದು ಹೇಳಲಿ ಕೇಳುತ್ತೇನೆ ಠಾಕ್ರೆ ಮಾತನಾಡಿದ್ದರು. ಇದನ್ನೂ ಓದಿ: ಶಾಸಕರು ಆಯ್ತು ಈಗ ಶಿವಸೇನೆ ಸಂಸದರಿಂದಲೂ ಬಂಡಾಯ
Advertisement
Advertisement
ಇದಕ್ಕೆ ಬಂಡಾಯ ಶಾಸಕ ಸಂಜಯ್ ಶಿರ್ಸಾತ್, ನಿನ್ನೆ ʻವರ್ಷಾʼದಲ್ಲಿ (ಸಿಎಂ ಅಧಿಕೃತ ನಿವಾಸ) ಜನರನ್ನು ನೋಡಿ ಸಂತೋಷಪಟ್ಟೆವು. ಎರಡೂವರೆ ವರ್ಷಗಳಿಂದ ನಮಗೆ ಮುಖ್ಯಮಂತ್ರಿ ಮನೆಗೆ ಪ್ರವೇಶ ನಿರಾಕರಿಸಲಾಗಿತ್ತು. ನಾವು ಅವರ ಗೇಟ್‌ಗಳ ಹೊರಗೆ ಗಂಟೆಗಟ್ಟಲೆ ಕಾಯುವಂತೆ ಮಾಡಲಾಗಿತ್ತು ಎಂದು ಪತ್ರದಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
Advertisement
ಏಕನಾಥ್ ಶಿಂಧೆ ಅವರ ಮನೆ ಬಾಗಿಲು ನಮಗಾಗಿ ಯಾವಾಗಲೂ ತೆರೆದಿರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಸ್ ದಾಖಲು
Advertisement
ಕಷ್ಟದ ಸಂದರ್ಭದಲ್ಲೂ ಸದಾ ತೆರೆದಿರುವ ಶಿಂಧೆಯ ಮನೆ ಹಾಗೆಯೇ ಇರುತ್ತದೆ ಎಂಬ ನಂಬಿಕೆಯೊಂದಿಗೆ ಇಂದು ನಾವಿದ್ದೇವೆ. ನಿನ್ನೆ ನೀವು ಹೇಳಿದ ಮಾತುಗಳು ನಮ್ಮನ್ನು ಭಾವುಕರನ್ನಾಗಿಸಿದೆ. ಆದರೆ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ನನ್ನ ಭಾವನೆಗಳನ್ನು ನಿಮಗೆ ತಿಳಿಸಲು ನಾನು ಈ ಭಾವನಾತ್ಮಕ ಪತ್ರವನ್ನು ಬರೆಯಬೇಕಾಯಿತು ಎಂದು ಶಿರ್ಸಾತ್ ಹೇಳಿದ್ದಾರೆ.