– ಕೊರಳಿಗೆ ಹಾರ ಬೀಳುವ ಮುಂಚೆಯೇ ಜಿಗಿದು ಜಿಗಿದು ಸೇಬು ಕಿತ್ಕೊಂಡ ಕಾರ್ಯಕರ್ತರು
ಬೆಂಗಳೂರು: ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಸಪ್ತಗಿರಿ ಅವರು ನಾಮಿನೇಷನ್ ಸಲ್ಲಿಸುವಾಗ ಪತ್ನಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ.
ನಾನು ನಾಮಿನೇಷನ್ ಸಲ್ಲಿಕೆಗೆ ಬಂದಿದ್ದೆ. ನನ್ನ ಜೊತೆ ಪಿ.ಸಿ ಮೋಹನ್, ತಂದೆ ರಾಮಚಂದ್ರೇಗೌಡ ಸೇರಿದಂತೆ ಇಬ್ಬರು ಬೆಂಬಲಿಗರು ಕೇಂದ್ರದೊಳಗೆ ಬಂದಿದ್ದರು. ಆದರೆ ನನ್ನ ಪತ್ನಿ ಕೊಂಚ ತಡವಾಗಿ ಬಂದು ಒಳಹೋಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸರು ಗೇಟ್‍ನಲ್ಲೆ ತಡೆದಿದ್ದಾರೆ. ನಾನವರ ಪತ್ನಿ ಕಣ್ರೀ ಅಂತಾ ದುಂಬಾಲು ಬಿದ್ದರೂ `ರೂಲ್ಸ್ ಈಸ್ ರೂಲ್ಸ್’ ಅಂತಾ ಹೊರಕಳಿಸಿದ್ದಾರೆ ಎಂದು ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಹೇಳಿದ್ದಾರೆ.
Advertisement
Advertisement
ವಿಜಯನಗರದಲ್ಲಿ ಎಂ.ಕೃಷ್ಣಪ್ಪ ನಾಮಪತ್ರ ಸಲ್ಲಿಕೆ ವೇಳೆ ಬೆಂಬಲಿಗರು, ಕೃಷ್ಣಪ್ಪರಿಗೂ ಹಾಗೂ ಮಗ ಪ್ರಿಯಾಕೃಷ್ಣಗೂ ಸೇಬಿನ ಹಾರ ಹಾಕಿದ್ದರು. ಆದರೆ ಸೇಬಿನ ಹಾರ ಅವರ ಕೊರಳಿಗೆ ಬೀಳುವ ಮುಂಚೆ ಕಾರ್ಯಕರ್ತರು ಆಪಲ್ ಕಿತ್ತುಕೊಳ್ಳುವುದಕ್ಕೆ ಸೆಣಸಾಡಿದ್ದಾರೆ. ಅಷ್ಟೇ ಅಲ್ಲದೆ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಕೊರಳಿಗೆ ಎಗರಿ ಎಗರಿ ಸೇಬು ಕಿತ್ತುಕೊಂಡಿದ್ದಾರೆ.
Advertisement
Advertisement
ಚಾಮರಾಜಪೇಟೆಯ ಅಲ್ತಾಫ್ ಖಾನ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಬೆಂಬಲಿಗರು ಕೇಂದ್ರದೊಳಗೆ ನುಗ್ಗಲು ಪೊಲೀಸರ ಜೊತೆ ಜಟಾಪಟಿ ನಡೆಸಿದ್ದಾರೆ. ಹೆಬ್ಬಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ನಾಮಪತ್ರ ಸಲ್ಲಿಕೆಯಲ್ಲಿ ಮಹಿಳಾಮಣಿಗಳು ಗ್ರೌಂಡ್‍ನಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.