ಲಕ್ನೋ: ವಿಶ್ವಪ್ರಸಿದ್ಧ ಪ್ರವಾಸಿ ತಾಣ, ಪ್ರೇಮಿಗಳ ಸ್ವರ್ಗ ತಾಜ್‌ಮಹಲ್‌ಗೆ (Taj Mahal) ಭೇಟಿ ನೀಡಬಯಸುವ ಪ್ರವಾಸಿಗರಿಗೂ (Tourists) ಕೋವಿಡ್ ಪರೀಕ್ಷೆ (Covid Test) ಕಡ್ಡಾಯಗೊಳಿಸಲಾಗಿದೆ ಎಂದು ಆಗ್ರಾದ (Agra) ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
Advertisement
ದೇಶದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ಹೈವೋಲ್ಟೇಜ್ ಸಭೆ ನಡೆಸಲಾಯಿತು. ಸಭೆಯ ಬಳಿಕ ಆರೋಗ್ಯಾಧಿಕಾರಿಗಳು ನಿರ್ಣಯ ಪ್ರಕಟಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷ.. ಹಳೇ ವೈರಸ್; ಚೀನಾದಲ್ಲಿ ಮತ್ತೆ ಕೊರೊನಾ ಆರ್ಭಟ – ಭಾರತದ ಕಥೆ ಏನು?
Advertisement
Advertisement
ಆಗ್ರಾದ ತಾಜ್‌ಮಹಲ್ ವೀಕ್ಷಿಸಲು ದೇಶ, ವಿದೇಶ ಪ್ರವಾಸಿಗರು ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಹಾಗಾಗಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭೇಟಿಗೂ ಮುನ್ನ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಪರೀಕ್ಷೆ ಹೆಚ್ಚಿಸಿ.. ಎಲ್ಲರೂ ಮಾಸ್ಕ್ ಧರಿಸಿ – ಮೋದಿ ಸಲಹೆ
Advertisement
ಅಲ್ಲದೇ ಸೋಂಕು ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಈಗಾಗಲೇ ಪರೀಕ್ಷೆಗಳನ್ನು ಪ್ರಾರಂಭಿಸಿದೆ. ಹೈ ಅಲರ್ಟ್ ಘೋಷಣೆ ಮಾಡಿರುವುದರಿಂದ ಎಲ್ಲ ಸಂದರ್ಶಕರಿಗೂ ಕೋವಿಡ್ ಟೆಸ್ಟಿಂಗ್ ಕಡ್ಡಾಯಗೊಳಿಸಲಾಗಿದೆ ಎಂದು ಆಗ್ರಾ ಜಿಲ್ಲಾ ಆರೋಗ್ಯಾಧಿಕಾರಿ ಅನಿಲ್ ಸತ್ಸಂಗಿ ತಿಳಿದಿದ್ದಾರೆ.