ಬೆಂಗಳೂರು: ಇಂದು ಹೈಕೋರ್ಟ್‍ಗೆ ನಮ್ಮ ಕ್ರಮಗಳ ಬಗ್ಗೆ ಎಜಿ ತಿಳಿಸಿದ್ದಾರೆ. ಹಿಜಾಬ್ ಪ್ರಕರಣದ ಹಿಂದೆ ಬೇರೆ ಶಕ್ತಿಗಳು ಕೆಲಸ ಮಾಡುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಮೂಲಕ ತನಿಖೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಕಾಲೇಜು ನಿಯಮ ಪಾಲನೆ ಮಾಡಿದ್ರೆ ಮಾತ್ರ ಕಾಲೇಜಿಗೆ ಎಂಟ್ರಿ ಇಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಎಂಟ್ರಿ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.
Advertisement
ಹಿಜಬ್ ವಿವಾದದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕೋರ್ಟ್‍ಗೆ ಎಲ್ಲರೂ ಒಂದೇ ಎಂಬ ಮನಸ್ಥಿತಿ, ಶಿಕ್ಷಣ ಇಲಾಖೆಯ ಸಮಾನತೆಯ ರೂಲ್ಸ್ ಎಲ್ಲವನ್ನೂ ನಾವು ಸ್ಪಷ್ಟಪಡಿಸುತ್ತೇವೆ. ಈ ನಿಯಮಗಳನ್ನು ಎಲ್ಲರೂ ಪಾಲನೆ ಮಾಡಿದರೆ ಮಾತ್ರ ವಿದ್ಯಾರ್ಥಿಗಳು ಕಾಲೇಜಿಗೆ ಬರಲಿ ಇಲ್ಲದೆ ಹೋದ್ರೆ ಕಾಲೇಜಿಗೆ ಎಂಟ್ರಿ ಇಲ್ಲ. ಕೋರ್ಟ್‍ಗೆ ಇವತ್ತು ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡ್ತೀವಿ. 14 ಲಕ್ಷ ಮಕ್ಕಳ ಪೈಕಿ 29 ಮಕ್ಕಳಿಂದ ವ್ಯವಸ್ಥೆ ಹಾಳಾಗಲು ನಾವು ಬಿಡುವುದಿಲ್ಲ. ಸರ್ಕಾರ ವ್ಯವಸ್ಥೆ ಹಾಳು ಮಾಡೋದಕ್ಕೆ ಅವಕಾಶ ಕೊಡುವುದಿಲ್ಲ. ಈ ವಿವಾದದ ಹಿಂದೆ ಕೆಲ ಸಂಘಟನೆಗಳು ಕೆಲಸ ಮಾಡುತ್ತೀವೆ. ಈ ಬಗ್ಗೆ ಪೊಲೀಸ್ ತನಿಖೆ ಮಾಡಿಸ್ತೀವಿ. ಸಂವಿಧಾನದ ಬಗ್ಗೆ ಮಾತಾಡೋರು ಮೊದಲು ಸಂವಿಧಾನ ಓದಲಿ. ಸರ್ಕಾರದ ನಿಯಮಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡಲೇಬೇಕು ಎಂದು ತಿಳಿ ಹೇಳಿದ್ದಾರೆ. ಇದನ್ನೂ ಓದಿ: ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬಂದ ಎಂಜಿಎಂ ವಿದ್ಯಾರ್ಥಿಗಳು!
Advertisement
Advertisement
ಸಮಾನತೆಯನ್ನು ಶಾಲೆಗಳಲ್ಲಿ ಬರುವಂತೆ ಮಾಡುವಲ್ಲಿ ಸಮವಸ್ತ್ರ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಹಾಗಾಗಿ ಸರ್ಕಾರ ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುತ್ತದೆ. ಇದೀಗ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು ಧರ್ಮದ ಕೇಂದ್ರವಾಗುವುದನ್ನು ಮತ್ತು ಅಲ್ಲಿ ನಡೆಯುವ ಅಶಾಂತಿಯನ್ನು ತಪ್ಪಿಸಲು ಸರ್ಕಾರ ಸಿದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಧರ್ಮವನ್ನು ಮನೆಗಳಲ್ಲಿ ಆಚರಿಸಿ, ಶಿಕ್ಷಣಕ್ಕೆ ತರಬೇಡಿ: ಸುರಯ್ಯ ಅಂಜುಮ್
Advertisement