ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 17 ಸ್ಪರ್ಧಿಗಳಿದ್ದ ಈ ಮನೆಯಲ್ಲಿ ಒಬ್ಬೊಬ್ಬರೇ ಎಲಿಮಿನೇಟ್ ಆಗಿ 9 ಸ್ಪರ್ಧಿಗಳು ಉಳಿದಿದ್ದಾರೆ. ಹಾಗಾಗಿ ಆಟ ಮತ್ತಷ್ಟು ರೋಚಕವಾಗಿ ಮೂಡಿ ಬರುತ್ತಿದೆ. ಹಾಗಾದ್ರೆ ಈ ವಾರ ಮನೆಯಿಂದ ಹೊರ ಹೋಗುವ ಆ ಸ್ಪರ್ಧಿ ಯಾರು? ಎಂಬ ಪ್ರೇಕ್ಷಕರ ಕಾತರಕ್ಕೆ ‘ಬಿಗ್ ಬಾಸ್’ ಟ್ವಿಸ್ಟ್ ಕೊಟ್ಟಿದ್ದಾರೆ.
Advertisement
ಕಳೆದ ವಾರಾಂತ್ಯ ಐಶ್ವರ್ಯಾ ಶಿಂಧೋಗಿ (Aishwarya) ಮನೆಯಿಂದ ಹೊರಬಂದಿದ್ದಾರೆ. ಆದರೆ ಈ ವಾರದಲ್ಲಿ ಎಲಿಮಿನೇಷನ್ ಟ್ವಿಸ್ಟ್ ಏನೆಂದರೆ, ಯಾವ ಸ್ಪರ್ಧಿಯೂ ಮನೆಯಿಂದ ಹೊರಗೆ ಹೋಗುತ್ತಿಲ್ಲ. ಈ ವಾರ ಫ್ಯಾಮಿಲಿ ರೌಂಡ್ ಇದ್ದ ಕಾರಣ ವೋಟಿಂಗ್ ಲೈನ್ ತೆರೆದಿಲ್ಲ. ಹಾಗಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಯೋದಿಲ್ಲ.
Advertisement
Advertisement
ಹಾಗಾಗಿ 9 ಸ್ಪರ್ಧಿಗಳು ಈ ವಾರ ಸೇಫ್ ಆಗಿದ್ದು, ಮುಂದಿನ ವಾರ ಯಾರ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬುದು ಕಾದುನೋಡಬೇಕಿದೆ.
Advertisement
ಇದೀಗ ಚೈತ್ರಾ ಕುಂದಾಪುರ, ರಜತ್, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಗೌತಮಿ, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ ಬಿಗ್ ಬಾಸ್ ಆಟದ ರೇಸ್‌ನಲ್ಲಿದ್ದಾರೆ. ಯಾರಿಗೆ `ಬಿಗ್ ಬಾಸ್’ ಗೆಲುವಿನ ಪಟ್ಟ ಸಿಗಲಿದೆ ಕಾದುನೋಡಬೇಕಿದೆ.