– 3.16 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿರೋ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣ
ರಾಯಪುರ: ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ನಡುವಿನ 4ನೇ ಟಿ20 ಪಂದ್ಯವು ಇಲ್ಲಿನ ರಾಯಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ (haheed Veer Narayan Singh Stadium) ಆಯೋಜನೆಗೊಂಡಿದೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಇತ್ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ. ಆದ್ರೆ ಮ್ಯಾಚ್‌ಗೆ ಕೆಲವೇ ಗಂಟೆಗಳಿರುವ ಹೊತ್ತಿನಲ್ಲಿ ಹೊಸ ತಲೆನೋವು ಎದುರಾಗಿದೆ.
Advertisement
ಕ್ರೀಡಾಂಗಣದ ಕೆಲವು ಭಾಗಗಳಲ್ಲಿ ವಿದ್ಯುತ್ ಇಲ್ಲದಿರುವುದು ಕಂಡುಬಂದಿದೆ. 2009ರಿಂದ ಸ್ಟೇಡಿಯಂನ ಬಿಲ್ ಬಾಕಿ ಉಳಿಸಿಕೊಂಡಿದ್ದು, ಮೈದಾನದ ಕೆಲ ಭಾಗಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ (No Electricity). 2009ರಿಂದ 3.16 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದ ಹಿನ್ನೆಯಲೆಯಲ್ಲಿ 5 ವರ್ಷಗಳ ಹಿಂದೆಯೇ ಕರೆಂಟ್ ಕಡಿತಗೊಳಿಸಲಾಗಿದೆ. ಛತ್ತೀಸ್‌ಗಢ ರಾಜ್ಯ ಕ್ರಿಕೆಟ್ ಸಂಸ್ಥೆಯ ಕೋರಿಕೆಯ ಮೇರೆಗೆ ತಾತ್ಕಾಲಿಕ ಸಂಪರ್ಕ ಸ್ಥಾಪಿಸಲಾಗಿದೆ. ಆದ್ರೆ ಅದು ಪ್ರೇಕ್ಷಕರ ಗ್ಯಾಲರಿ ಮತ್ತು ಬಾಕ್ಸ್‌ಗಳನ್ನು ಮಾತ್ರ ಒಳಗೊಂಡಿದೆ. ಸದ್ಯ ಪಂದ್ಯ ಆರಂಭವಾಗಬೇಕಾದ್ರೆ ಫ್ಲಡ್‌ಲೈಟ್‌ಗಳನ್ನು ಜನರೇಟರ್ ಬಳಿಸಿ ಚಾಲಿತಗೊಳಿಸಬೇಕಾಗುತ್ತದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
Advertisement
Advertisement
ಈ ನಡುವೆ ಸ್ಟೇಡಿಯಂಗೆ ತಾತ್ಕಾಲಿಕವಾಗಿಯಾದರೂ ಹೆಚ್ಚುವರಿ ವಿದ್ಯುತ್ ಪೂರೈಕೆ ಮಾಡುವಂತೆ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಅರ್ಜಿ ಅಲ್ಲಿಸಿದ್ದಾರೆ. ಪ್ರಸ್ತುತ 200 KV ಸಾಮರ್ಥ್ಯವನ್ನು 1,000 KVಗೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ ಎಂಬುದಾಗಿ ರಾಯಪುರ ವೃತ್ತದ ಉಸ್ತುವಾರಿ ಅಶೋಕ್ ಖಂಡೇಲ್‌ವಾಲ್ ತಿಳಿಸಿದ್ದಾರೆ. ಆದ್ರೆ ಈವರೆಗೆ ಯಾವುದೇ ಬೆಳವಣಿಗೆ ಕಂಡುಬಂದಿಲ್ಲ.
Advertisement
2018ರಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಅಥ್ಲೀಟ್‌ಗಳು ಸ್ಟೇಡಿಯಂನಲ್ಲಿ ವಿದ್ಯುತ್ ಪೂರೈಕೆ ಇಲ್ಲ ಎಂದು ತಿಳಿದಾಗ ಕೋಲಾಹಲ ಎಬ್ಬಿಸಿದ್ದರು. ಇದನ್ನೂ ಓದಿ: ಮೂರು ಮಾದರಿಗೆ ಮೂವರು ನಾಯಕರು – ಆಫ್ರಿಕಾ ಪ್ರವಾಸಕ್ಕೆ ಟೀಂ ಇಂಡಿಯಾ ಆಟಗಾರರ ಪಟ್ಟಿ ರಿಲೀಸ್
ಭಾರತಕ್ಕೆ ಸರಣಿ ಗೆಲುವಿನ ಗುರಿ: 5 ಪಂದ್ಯದ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿರುವ ಭಾರತ, ಕೊನೆಯ ಪಂದ್ಯದವರೆಗೂ ಕಾಯದೆ ಸರಣಿ ಗೆಲ್ಲಲು ಎದುರು ನೋಡುತ್ತಿದ್ದರೆ, ಆಸೀಸ್ ಸರಣಿ ಸಮಬಲದ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.
ಮೊದಲೆರಡು ಪಂದ್ಯ ಗೆದ್ದಿದ್ದ ಭಾರತ 3ನೇ ಟಿ20 ಪಂದ್ಯವನ್ನು ಪಂದ್ಯವನ್ನು ಮ್ಯಾಕ್ಸ್ವೆಲ್ ಅವರ ಸಾಹಸದ ಮುಂದೆ ಕೈಚೆಲ್ಲಿತ್ತು. ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಆಸೀಸ್ ವಿರುದ್ಧ ಕ್ರಮವಾಗಿ 209, 191 ಹಾಗೂ 225 ರನ್ ಬಿಟ್ಟುಕೊಟ್ಟಿತು. ಆದ್ದರಿಂದ ಟೀಂ ಇಂಡಿಯಾಕ್ಕೆ ಬ್ಯಾಟಿಂಗ್‌ನಷ್ಟೇ ಬೌಲಿಂಗ್‌ನಲ್ಲೂ ಬಲ ಬೇಕಿದೆ.
ಪ್ರಸಿದ್ ಕೃಷ್ಣ ಗಾಯದಿಂದ ಚೇತರಿಸಿ ತಂಡಕ್ಕೆ ಮರಳಿದ ಬಳಿಕ ದುಬಾರಿಯಾಗುತ್ತಿದ್ದು, ಇತರರಿಂದಲೂ ಆಸೀಸ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಶ್ರೇಯಸ್ ಅಯ್ಯರ್, ದೀಪಕ್ ಚಹಾರ್ 4ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ತಿಲಕ್ ವರ್ಮಾ ಅವರ ಜಾಗಕ್ಕೆ ಶ್ರೇಯಸ್ ಹಾಗೂ ಪ್ರಸಿದ್ಧ್ ಕೃಷ್ಣ ಬದಲಿಗೆ ದೀಪಕ್ ಚಹಾರ್ ಅವರನ್ನ ಕಣಕ್ಕಿಳಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನೂ ಓದಿ: ಇಂದು ಭಾರತ V/s ಆಸೀಸ್ 4ನೇ ಟಿ20 – ಸರಣಿ ಗೆಲುವಿನ ಮೇಲೆ ಭಾರತದ ಕಣ್ಣು
ಅಲ್ಲದೇ ಆಸೀಸ್‌ನ ಡೇಂಜರಸ್ ಬ್ಯಾಟ್ಸ್ ಗ್ಲೇನ್ ಮ್ಯಾಕ್ಸ್ವೆಲ್, ಸ್ಟೀವ್ ಸ್ಮಿತ್, ಆಡಂ ಝಂಪಾ ಸೇರಿ ಪ್ರಮುಖ ಆಟಗಾರರು ತವರಿಗೆ ಮರಳಿದ್ದು, ಯುವ ಪಡೆ ಮೇಲೆ ಸರಣಿ ಉಳಿಸಿಕೊಳ್ಳುವ ಜವಾಬ್ದಾರಿಯಿದೆ. ಇದನ್ನೂ ಓದಿ: ಔಟ್ ಮಾಡುವ ಭರದಲ್ಲಿ ಇಶಾನ್ ಕಿಶನ್ ಯಡವಟ್ಟು – ಎಂಸಿಸಿ ಕಾನೂನು 27.3.1 & 27.3.2 ಹೇಳೋದೇನು?
3 ಪಂದ್ಯಗಳ ಸಂಕ್ಷಿಪ್ತ ಸ್ಕೋರ್
ಮೊದಲ ಟಿ20: ಭಾರತ – 209/8, ಆಸ್ಟ್ರೇಲಿಯಾ – 208/3
2ನೇ ಟಿ20: ಭಾರತ – 235/4, ಆಸ್ಟ್ರೇಲಿಯಾ – 191/9
3ನೇ ಟಿ20: ಭಾರತ – 222/3, ಆಸ್ಟ್ರೇಲಿಯಾ – 225/5