ಬೆಂಗಳೂರು: ಅಂಗನವಾಡಿಯಲ್ಲಿ (Anganawadi) ಮಕ್ಕಳಿಗೆ ಗರ್ಭಿಣಿಯರಿಗೆ ಕೊಡುವ ಮೊಟ್ಟೆಗೂ ಕುತ್ತು ಬಂದಿದೆ. ಈ ಹಿಂದೆ ಕಳಪೆ ಮೊಟ್ಟೆ ಸಪ್ಲೈ ಮಾಡಿ ಸುದ್ದಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈಗ ಬೆಂಗಳೂರಿನ ಅಂಗನವಾಡಿಗಳಿಗೆ ಮೊಟ್ಟೆ, ಗ್ಯಾಸ್ (Egg, Gas Bill) ಖರೀದಿ ದುಡ್ಡು ಕೊಡದೇ ಸತಾಯಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
Advertisement
ಮಕ್ಕಳ ಗರ್ಭಿಣಿಯರ ಅಪೌಷ್ಠಿಕತೆ ನೀಗಿಸೋಕೆ ಅಂಗನವಾಡಿಗಳಲ್ಲಿ ಮೊಟ್ಟೆ ಕೊಡುತ್ತಾರೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ನೇರವಾಗಿ ಸರ್ಕಾರ ಮೊಟ್ಟೆ ಸಪ್ಲೈ ಮಾಡಲ್ಲ. ಬದಲಾಗಿ ಅಂಗನವಾಡಿ ಕಾರ್ಯಕರ್ತೆಯರು ಖರೀದಿ ಮಾಡುತ್ತಾರೆ. ಸರ್ಕಾರ ಇದರ ದುಡ್ಡನ್ನು ಅಕೌಂಟ್ ಗೆ ಹಾಕುತ್ತೆ. ಆದರೆ ಈಗ ಕಳೆದ 3-4 ತಿಂಗಳಿಂದ ಮೊಟ್ಟೆ ದುಡ್ಡನ್ನು ಸರ್ಕಾರ ಕೊಡುತ್ತಿಲ್ಲ. ಅಷ್ಟೇ ಅಲ್ಲ ಗ್ಯಾಸ್ ದುಡ್ಡನ್ನು ಕೂಡ ಬಿಡುಗಡೆ ಮಾಡಿಲ್ಲ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ಪರದಾಟ ಪಡುವ ಪರಿಸ್ಥಿತಿನಿರ್ಮಾಣವಾಗಿದೆ.
Advertisement
Advertisement
ಬೆಂಗಳೂರಿನಲ್ಲಿ ಸದ್ಯ 2,800 ಕ್ಕೂ ಹೆಚ್ಚು ಅಂಗನವಾಡಿಗಳು ಇದೆ. ಕಳೆದ ಮೂರು ನಾಲ್ಕು ತಿಂಗಳಿಂದ ಮೊಟ್ಟೆ ದುಡ್ಡು ಗ್ಯಾಸ್ ಸಿಲಿಂಡರ್ ಹಣ ಕೊಡದೇ ಸರ್ಕಾರ ಸತಾಯಿಸುತ್ತಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು ತಾವೇ ತಮ್ಮ ಸಂಬಳದ ದುಡ್ಡನ್ನು ಮೊಟ್ಟೆಗಾಗಿ ಕೊಡುತ್ತಿದ್ದಾರೆ. ಇದನ್ನೂ ಓದಿ: ಸಿಎಂ ನಿವಾಸದಲ್ಲಿ ಬ್ರೇಕ್‌ಫಾಸ್ಟ್ ಮೀಟಿಂಗ್ – ಡಿಕೆಶಿ ಸೇರಿ 14 ಸಚಿವರು ಭಾಗಿ
Advertisement
ತಲಾ ಒಬ್ಬೊಬ್ಬ ಗರ್ಭಿಣಿಗೂ ತಿಂಗಳಿಗೆ 25 ಮೊಟ್ಟೆಯನ್ನು ಅಂಗನವಾಡಿಯಲ್ಲಿ ನೀಡಬೇಕು. 3-6 ವರ್ಷದ ಮಕ್ಕಳಿಗೆ ತಿಂಗಳಿಗೆ 8 ಮೊಟ್ಟೆಯನ್ನು ಕೊಡಬೇಕು. ಅಪೌಷ್ಠಿಕತೆ ಇರುವ ಮಕ್ಕಳಿಗೆ ಒಟ್ಟು 12 ಮೊಟ್ಟೆಯನ್ನು ಕೊಡಬೇಕು. ಒಂದೊಂದು ಅಂಗನವಾಡಿಯಲ್ಲಿ 20, 30 , 40 ಜನ ಮಕ್ಕಳು, ದಿನಕ್ಕೆ 10 ಜನ ಗರ್ಭಿಣಿಯರು ಆಹಾರ ಸೇವನೆ ಮಾಡುತ್ತಾರೆ. ಮೊಟ್ಟೆ ಖರ್ಚು ನಾಲ್ಕರಿಂದ ಐದು ಸಾವಿರ ಒಂದೊಂದು ಅಂಗನವಾಡಿಗಳಿಗೆ ಬರುತ್ತಿದೆ. ಸರ್ಕಾರ ಈ ದುಡ್ಡನ್ನು ಬಿಡುಗಡೆ ಮಾಡುತ್ತಿಲ್ಲ ಅನ್ನೋದು ಅಂಗನವಾಡಿ ಕಾರ್ಯಕರ್ತೆಯರ ಆರೋಪವಾಗಿದೆ.
ಮೊಟ್ಟೆ ಖರೀದಿ ಜೊತೆಗೆ ಗ್ಯಾಸ್ ಖರೀದಿಯನ್ನು ಕೂಡ ಸ್ವಂತ ದುಡ್ಡಿನಲ್ಲಿ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದುಡಿದ ಸಂಬಳವೆಲ್ಲ ಇದಕ್ಕೆ ಖರ್ಚಾಗುತ್ತಿದೆ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Web Stories