ಮೈಸೂರು: ರಾಜಕಾರಣಿಗಳು ರಿಯಲ್ ಎಸ್ಟೇಟ್ ಕಳ್ಳ ದಂಧೆ ಮಾಡ್ತಾ ಇದ್ದಾರೆ. ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಬಿಟ್ರೆ ಏನಿಲ್ಲ ಅಂತ ಸಂಸದ ಪ್ರತಾಪ್ ಸಿಂಹ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂಸದರು, ರಾಜಕಾರಣಿಗಳ ರಿಯಲ್ ಎಸ್ಟೇಟ್ ದಂಧೆಯಿಂದ ಮೈಸೂರು ಅಭಿವೃದ್ಧಿಯಾಗುತ್ತಿಲ್ಲ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ರಾಜಕಾರಣಿಗಳೆ ಸದಸ್ಯರು, ಅವರೇ ಡೆವೆಲಪ್ಪರ್ಸ್ ಆಗಿದ್ದಾರೆ. ಹೀಗಾದರೆ ಮೈಸೂರು ಅಭಿವೃದ್ಧಿ ಹೇಗೆ ಸಾಧ್ಯ ಹೇಳಿ ಎಂದು ಪ್ರಶ್ನಿಸಿದ್ದಾರೆ.
Advertisement
ಪ್ರತಿಯೊಬ್ಬರೂ ಮೈಸೂರು ಮುಖಾಂತರವಾಗಿ ಬಂದು ಹೋಗುತ್ತಿದ್ದಾರೆ. ಪ್ರವಾಸಿಗರು ಮೈಸೂರಿಗೆ ಬೆಳಗ್ಗೆ ಬಂದು ಸಂಜೆ ಹೋಗುತ್ತಾರೆ. ಮೈಸೂರು ಪ್ರವಾಸೋದ್ಯಮ ಜಂಕ್ಷನ್ ಆಗಿದೆ. ಬಂಡೀಪುರ, ನಾಗರಹೊಳೆ, ಊಟಿ ಮೈಸೂರು ಮುಖಾಂತರವೇ ಹೋಗಬೇಕು. ಆದರೆ ಮೈಸೂರಿನಲ್ಲಿ ಯಾರು ಉಳಿಯುತ್ತಿಲ್ಲ. ಈ ರೀತಿ ಇರುವಾಗ ಇಂಡಸ್ಟ್ರಿಗಳು ಬರುವುದಾದರು ಹೇಗೆ? ಮೈಸೂರು ಅಭಿವೃದ್ಧಿ ಆಗುವುದು ಹೇಗೆ ಸಾಧ್ಯ ಹೇಳಿ ಎಂದು ಕೇಳಿದ್ದಾರೆ. ಈ ಮೂಲಕ ಮೈಸೂರಿನಲ್ಲಿ ರಾಜಕಾರಣಿಗಳ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿರುವುದನ್ನು ಸಂಸದರು ಬಯಲು ಮಾಡಿದ್ದಾರೆ.
Advertisement
Advertisement
ಬೆಂಗಳೂರಿನಿಂದ ಮೈಸೂರಿಗೆ ಒಂದು ದಿನಕ್ಕೆ ಸರಿಸುಮಾರು 36 ಸಾವಿರ ವಾಹನಗಳು ಬರುತ್ತವೆ. ಇದರಿಂದ ಆ ರಸ್ತೆ ಮೇಲೆ ಫ್ರೆಶರ್ ಎಷ್ಟಿದೆ? ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಾದ್ರೆ 4 ಗಂಟೆ ಬೇಕಾದ್ರೆ ಯಾವ ಕಾರ್ಖಾನೆ ಇಲ್ಲಿ ಬರಲು ಸಾಧ್ಯವಿದೆ ಹೇಳಿ ಎಂದು ಪ್ರಶ್ನಿಸಿದ್ರು. ವಿಮಾನ ನಿಲ್ದಾಣವಿದೆ. ಆದ್ರೆ ವಿಮಾನವೇ ಬರಲ್ಲ ಅಂತಂದ್ರೆ ಇಲ್ಲಿಗೆ ಯಾರು ಬರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಕಳ್ಳ ರಿಯಲ್ ಎಸ್ಟೇಟ್ ದಂಧೆಗಾಗಿ ಇಲ್ಲಿ ರಾಜಕಾರಣಿಗಳು ಬರುತ್ತಾರೆ. ಇದನ್ನು ಬಿಟ್ಟರೆ ಮೈಸೂರಿನಲ್ಲಿ ಬೇರೆ ಏನೂ ಇಲ್ಲ ಪ್ರತಾಪ್ ಸಿಂಹ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv