ಡೈರಿ ಉತ್ಪನ್ನಗಳಿಲ್ಲ, ಆದ್ರೆ ಏನಾದ್ರೂ ತಣ್ಣನೆಯ ಸಿಹಿಯನ್ನು ಮನೆಯಲ್ಲೇ ಮಾಡ್ಬೇಕು ಎನಿಸಿದರೆ ನಾವಿಂದು ಹೇಳಿಕೊಡುತ್ತಿರೋ ಸುಲಭದ ರೆಸಿಪಿಯನ್ನು ನೀವು ಕೂಡಾ ಟ್ರೈ ಮಾಡಬಹುದು. ಗ್ರೇಪ್ ಐಸ್ ಇದನ್ನು ಗ್ರೇಪ್ ಸೊರ್‌ಬೆಟ್ ಎಂತಲೂ ಕರೆಯುತ್ತಾರೆ. ಸೊರ್‌ಬೆಟ್ ಎಂದರೆ ಹಣ್ಣಿನ ರಸ ಅಥವಾ ಹಣ್ಣಿನ ಪ್ಯೂರಿಯನ್ನು ಫ್ರಿಜ್‌ನಲ್ಲಿಟ್ಟು ಘನೀಕರಿಸಿ ಮಾಡೋ ಸಿಂಪಲ್ ಡೆಸರ್ಟ್. ಐಸ್‌ಕ್ರೀಮ್ ರೀತಿ ಎನಿಸಿದರೂ ಇದಕ್ಕೆ ಡೈರಿ ಪದಾರ್ಥ ಬೇಕಿಲ್ಲ. ಕೇವಲ 3 ಪದಾರ್ಥಗಳನ್ನು ಬಳಸಿ ಸಿಂಪಲ್ ಆಗಿ ಗ್ರೇಪ್ ಐಸ್ ಹೇಗೆ ಮಾಡೋದು ಎಂಬುದನ್ನು ನೋಡೋಣ.
ಬೇಕಾಗುವ ಪದಾರ್ಥಗಳು:
ಹಸಿರು ದ್ರಾಕ್ಷಿ – 3 ಕಪ್
ಸಕ್ಕರೆ ಅಥವಾ ಜೇನುತುಪ್ಪ – 2 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್ ಇದನ್ನೂ ಓದಿ: ಸಿಂಪಲ್ & ಟೇಸ್ಟಿ ಬ್ಲೂಬೆರಿ ಕಾಫಿ ಕೇಕ್
ಮಾಡುವ ವಿಧಾನ:
* ಮೊದಲಿಗೆ ದ್ರಾಕ್ಷಿಯನ್ನು ಕಾಂಡದಿಂದ ಬೇರ್ಪಡಿಸಿ, ಒಂದು ಟ್ರೇಯಲ್ಲಿರಿಸಿ.
* ಅದನ್ನು ಫ್ರೀಜರ್‌ನಲ್ಲಿ ಇಡಿ. ದ್ರಾಕ್ಷಿಗಳು ಹೆಪ್ಪುಗಟ್ಟುವವರೆಗೆ ಕನಿಷ್ಠ 4 ಗಂಟೆ ಬಿಡಿ.
* ಬಳಿಕ ಫ್ರೀಜರ್‌ನಿಂದ ತಗೆದು ಹಣ್ಣುಗಳನ್ನು ತಕ್ಷಣ ಬ್ಲೆಂಡರ್‌ಗೆ ಹಾಕಿ. ಅದಕ್ಕೆ ನಿಂಬೆ ರಸ ಹಾಗೂ ಜೇನುತುಪ್ಪ ಸೇರಿಸಿ, ಪ್ಯೂರಿ ರೀತಿ ಬ್ಲೆಂಡ್ ಮಾಡಿ.
* ನಯವಾದ ಪ್ಯೂರಿಯನ್ನು ತಕ್ಷಣವೇ ಸ್ಕೂಪ್‌ನಲ್ಲಿ ತೆಗೆದು ಬೌಲ್‌ಗಳಲ್ಲಿ ಬಡಿಸಿಕೊಳ್ಳಿ.
* ಇದನ್ನು ತಕ್ಷಣವೇ ಸವಿಯಬಹುದು. ಪ್ಯೂರಿ ಬೇಗನೆ ಕರಗುತ್ತಿದ್ದರೆ ಅದನ್ನು ಮತ್ತೆ 1-2 ಗಂಟೆ ಫ್ರೀಜರ್‌ನಲ್ಲಿ ಇಟ್ಟು ಬಳಿಕ ಸವಿಯಿರಿ. ಇದನ್ನೂ ಓದಿ: ಸಂಜೆ ಸ್ನಾಕ್ಸ್‌ಗೆ ಮಾಡಿ ಸುಲಭವಾದ ನಾಚೋಸ್
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]