ಮಂಗಳೂರು: ಕಳೆದೆರಡು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಬೂದಿಮುಚ್ಚಿದ ಕೆಂಡದಂತಾಗಿತ್ತು. ಗಲಭೆ ನಿಯಂತ್ರಣಕ್ಕೆ ಸರ್ಕಾರವೇನೋ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಿದೆ. ಆದ್ರೆ ತಮ್ಮ ಮನೆ, ಕುಟುಂಬ ಎಲ್ಲವನ್ನೂ ಬಿಟ್ಟು ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಎನ್ನುವಂತಿದೆ.
ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 58 ದಿನಗಳಿಂದ ನಿಷೇಧಾಜ್ಞೆ ಹೇರಲಾಗಿದೆ. ಕೆಎಸ್‍ಆರ್‍ಪಿ ಜೊತೆಗೆ ಬಳ್ಳಾರಿ, ದಾವಣಗೆರೆ ಸೇರಿ 12 ಜಿಲ್ಲೆಗಳ ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದಾರೆ. ಕಳೆದೆರಡು ತಿಂಗಳಿಂದ ಹೆಂಡತಿ, ಮಕ್ಕಳನ್ನೂ ನೋಡದೇ ಕಾರ್ಯನಿರ್ವಹಿಸುತ್ತಿರೋ ಇವರಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಜೊತೆಗೆ ಇವರಿಗೆ ಕೊಡ್ತಿರೋದು ಕೇವಲ ಅನ್ನ, ಸಾರು ಮಾತ್ರ.
Advertisement
ಮೊದಲು 4 ತಾಲೂಕು ವ್ಯಾಪ್ತಿಯಲ್ಲಿದ್ದ ನಿಷೇಧಾಜ್ಞೆಯನ್ನು ಈಗ ಬಂಟ್ವಾಳಕ್ಕೆ ಸೀಮಿತಗೊಳಿಸಲಾಗಿದೆ. ಆದ್ರೆ ನಿಷೇಧಾಜ್ಞೆ ನಡುವೆಯೇ 2 ಕೊಲೆಗಳು ನಡೆದಿವೆ. ಈಗಲೂ ಬಂಟ್ವಾಳದ ಪರಿಸ್ಥಿತಿ ಸುಧಾರಣೆ ಆಗಿಲ್ಲ.
Advertisement
ಗಲಭೆ ಎಬ್ಬಿಸಿ ಶಾಂತಿಗಾಗಿ ಸೆಕ್ಷನ್ ಜಾರಿಮಾಡಿರುವ ಜನನಾಯಕರು ಇನ್ನಾದ್ರೂ ಈ ಬಗ್ಗೆ ಗಮಹರಿಸಬೇಕಿದೆ. ಶಾಂತಿಗಾಗಿ ಕಾಯುವ ಪೊಲೀಸರಿಗೆ ಕನಿಷ್ಠ ಸೌಲಭ್ಯವನ್ನಾದ್ರೂ ಒದಗಿಸಬೇಕಿದೆ.