ಬೆಂಗಳೂರು: ಚನ್ನಪಟ್ಟಣ (Channapatna) ಸೇರಿ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ (By Election) ಕಾಂಗ್ರೆಸ್ (Congress) ಗೆಲ್ಲಲಿದೆ ಎಂದು ಸಚಿವ ಮಹದೇವಪ್ಪ (HC Mahadevappa) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲಾ ಚುನಾವಣೆಗಳು ಪ್ರತಿಷ್ಠೆಯೇ. ಎಲ್ಲಾ ರಾಜಕೀಯ ಪಕ್ಷಗಳು ಗೆಲ್ಲಬೇಕು ಎಂದು ಕೆಲಸ ಮಾಡುತ್ತೇವೆ. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಜನರ ಒಲವು ಕಾಂಗ್ರೆಸ್ ಪರವಾಗಿ ಇದೆ. ಉಪಚುನಾವಣೆ ಮುಂದಿನ ರಾಜಕೀಯಕ್ಕೆ ದಿಕ್ಸೂಚಿ ಆಗೋಕೆ ಹೇಗೆ ಸಾಧ್ಯ? ಉಪ ಚುನಾವಣೆ ದಿಕ್ಸೂಚಿ ಆಗಲ್ಲ. ವಿಪಕ್ಷಗಳು ಸರ್ಕಾರದ ಮೇಲೆ ಮಾಡೋದು ಆರೋಪ ಅಷ್ಟೇ. ಅವು ಸತ್ಯ ಅಲ್ಲ. 3 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು. ಇದನ್ನೂ ಓದಿ: ‘ಮಂಥ್ಲಿ ಮನಿ’ ಹೆಸರಿನಲ್ಲಿ ಮದ್ಯದಂಗಡಿಗಳಿಂದ ತಿಂಗಳಿಗೆ 15 ಕೋಟಿ ಲಂಚ – ಅಬಕಾರಿ ಇಲಾಖೆ ವಿರುದ್ಧ ಗಂಭೀರ ಆರೋಪ
Advertisement
Advertisement
ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಚನ್ನಪಟ್ಟಣದಲ್ಲಿ ವಾತಾವರಣ ಚೆನ್ನಾಗಿದೆ. ಯೋಗೇಶ್ವರ್ 3 ಬಾರಿ ಎಂಎಲ್‌ಎ ಆಗಿದ್ದರು. ಒಳ್ಳೆಯ ಕೆಲಸ ಮಾಡಿದ್ದಾರೆ. ನಾನು ಆರೋಗ್ಯ ಸಚಿವ ಆಗಿದ್ದಾಗ ಕಣ್ವಾ ಜಲಾಶಯದಿಂದ ನೂರು ಕೆರೆ ತುಂಬಿಸಿ ಜಾತ್ರೆ ರೀತಿ ಕಾರ್ಯಕ್ರಮ ಮಾಡಿದ್ದರು. ಅದಕ್ಕೆ ನಾನು ಹೋಗಿದ್ದೆ. 2013-18 ಸರ್ಕಾರ ಇದ್ದಾಗ ಚನ್ನಪಟ್ಟಣಕ್ಕೆ ನೂರಾರು ಕೋಟಿ ಮಂಜೂರು ಮಾಡಿದ್ದೆವು. ಅಲ್ಲೆಲ್ಲಾ ಕೆರೆ ಒಣಗಿ ಹೋಗಿತ್ತು. ಅದು ಹಸಿರಾಗಿ ಬದಲಾವಣೆ ಆಗೋಕೆ ಸಿದ್ದರಾಮಯ್ಯ ಕಾಲದಲ್ಲಿ ಕಣ್ವಾ ಜಲಾಶಯದ ಮೂಲಕ ಕೆರೆ ತುಂಬಿಸೋ ಯೋಜನೆ ಮಾಡಿದ್ದರು. ಯೋಗೇಶ್ವರ್ ಉತ್ತಮವಾಗಿ ಕೆಲಸ ಮಾಡಿದ್ದರು. ಹೀಗಾಗಿ ಜನರಿಗೆ ಯೋಗೇಶ್ವರ್ ಪರ ಒಲವಿದೆ ಎಂದು ತಿಳಿಸಿದರು. ಇದನ್ನೂ ಓದಿ: Canada| ಹಿಂದೂಗಳ ಮೇಲೆ ಖಲಿಸ್ತಾನಿ ಪ್ರತ್ಯೇಕವಾದಿಗಳಿಂದ ಹಲ್ಲೆ ಖಂಡಿಸಿ ಪ್ರತಿಭಟನೆ
Advertisement
ಚನ್ನಪಟ್ಟಣ ಜೆಡಿಎಸ್‌ನ ಭದ್ರಕೋಟೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವ ಕ್ಷೇತ್ರವೂ ಯಾರ ಭದ್ರಕೋಟೆಯಲ್ಲ. ನನ್ನ ಕ್ಷೇತ್ರವೂ ಸೇರಿ ಯಾವುದೂ ಯಾರಿಗೂ ಭದ್ರಕೋಟೆ ಅಲ್ಲ. ಜನ ಆಯಾ ಸಂದರ್ಭದಲ್ಲಿ ಆಯಾ ಸಮಯದಲ್ಲಿ ಆಯಾ ವಿಷಯದ ಮೇಲೆ ತೀರ್ಮಾನ ಮಾಡುತ್ತಾರೆ. ಅದು ಜನರ ಭದ್ರಕೋಟೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಮುಡಾ ಕೇಸ್ ಸಿದ್ದರಾಮಯ್ಯ ವಿರುದ್ಧ ನಡೆಯುತ್ತಿರೋ ಷಡ್ಯಂತ್ರ: ಮಹದೇವಪ್ಪ
Advertisement
ಮೊಮ್ಮಗ ಪರ ದೇವೇಗೌಡ ಪ್ರಚಾರದ ಬಗ್ಗೆ ಮಾತನಾಡಿ, ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ನನಗೆ ದೇವೇಗೌಡರ ಆರೋಗ್ಯ ಮುಖ್ಯ. ಅವರ ಆರೋಗ್ಯ ಚೆನ್ನಾಗಿ ಇರಲಿ. ಅವರು ಪ್ರಚಾರ ಮಾಡೋ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ದಾಟುವಾಗ ಬೆನ್ಜ್ ಕಾರು ಡಿಕ್ಕಿಯಾಗಿ ಟೆಕ್ಕಿ ಸಾವು