ಬೆಂಗಳೂರು: ನಗರದಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಯಾವುದೇ ಗೊಂದಲ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟಪಡಿಸಿದ್ದಾರೆ.
Advertisement
ನಗರದಲ್ಲಿ ಎಲ್ಲರೂ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲನೆ ಮಾಡುತ್ತಿದ್ದಾರೆ. ಈ ಸಂಬಂಧ ಸರ್ಕಾರ ಹೊಸದಾಗಿ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಮೇಲೆ ನಿರ್ಮಾಣವಾದ ಯಾವುದೇ ಮಸೀದಿಯನ್ನೂ ಬಿಡುವುದಿಲ್ಲ, ಎಲ್ಲವನ್ನೂ ಕೆಡವುತ್ತೇವೆ: ಬಿಜೆಪಿ ನಾಯಕ
Advertisement
2002ರಲ್ಲಿ ಸುಪ್ರೀಂ ಕೋರ್ಟ್ ಜಾರಿ ಮಾಡಿರುವ ಆದೇಶ ಪಾಲನೆ ಮಾಡಬೇಕು. ರಾತ್ರಿ ಹತ್ತು ಗಂಟೆಯಿಂದ ಮುಂಜಾನೆ 6 ಗಂಟೆಯ ತನಕ ನಗರದಲ್ಲಿ ಯಾವುದೇ ಲೌಡ್ ಸ್ಪೀಕರ್‌ಗಳನ್ನು ಬಳಕೆ ಮಾಡಬಾರದು. ವಿಶೇಷ ಸಮಯದಲ್ಲಿ ಅನುಮತಿ ಹೊರತುಪಡಿಸಿ ಯಾವುದೇ ಲೌಡ್‌ಸ್ಪೀಕರ್ ಬಳಕೆ ನಿಷೇಧ ಮಾಡಲಾಗಿದೆ ಎಂದು ಹೇಳಿದ್ದಾರೆ.
Advertisement
ಲೌಡ್‌ಸ್ಪೀಕರ್ ಬಗ್ಗೆ ಸರ್ಕಾರ ಸಭೆ ಮಾಡಿ ಒಂದು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಂತೆ ಅನಧಿಕೃತವಾಗಿರುವ ಮೈಕ್‌ಗಳಿಗೆ 15 ದಿನ ಸರ್ಕಾರ ಗಡುವು ನೀಡಿದೆ. 15 ದಿನಗಳ ಒಳಗಾಗಿ ಅರ್ಜಿ ಹಾಕಿ ಅಧಿಕೃತ ಮಾಡಿಕೊಳ್ಳಬೇಕು. 15 ದಿನದ ನಂತರ ಅನಧಿಕೃತ ಮೈಕ್‌ಗಳನ್ನು ತೆರವು ಮಾಡುವ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮಸೀದಿ ಮೇಲೆ ಕೇಸರಿಧ್ವಜ ಕಟ್ಟಿ ಕಿಡಿಗೇಡಿಗಳ ವಿಕೃತಿ – ಸ್ಥಳದಲ್ಲೇ ಬೀಡುಬಿಟ್ಟ ಪೊಲೀಸರು