ನವದೆಹಲಿ: ಬಿಜೆಪಿ (BJP) ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟ INDIA ಹೊರಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಂಸತ್‌ನಲ್ಲಿ ನಡೆಯುತ್ತಿದೆ. ಅವಿಶ್ವಾಸ ನಿರ್ಣಯವು ಮಣಿಪುರದ ವಿಚಾರವಾಗಿ ಪ್ರಧಾನಿ ಮೋದಿ (Narendra Modi) ಅನುಸರಿಸುತ್ತಿರುವ ಮೌನ ವ್ರತವನ್ನು ಮುರಿಯುವಂತೆ ಮಾಡುತ್ತೆ ಎಂದು ಕಾಂಗ್ರೆಸ್ ತಿಳಿಸಿದೆ.
ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ಮೊದಲ ಮಾತನಾಡಿದ ಕಾಂಗ್ರೆಸ್ (Congress) ಸಂಸದ ಗೌರವ್ ಗೊಗೊಯ್ (Gaurav Gogoi), ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೌನ ವ್ರತವನ್ನು ಮುರಿಯಲು INDIA ಒಕ್ಕೂಟವು ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ತಂದಿತು. ಒಂದು ಭಾರತವು ಎರಡು ಮಣಿಪುರಗಳನ್ನು (Manipur) ಸೃಷ್ಟಿಸಿದೆ. ಒಂದು ಬೆಟ್ಟಗಳಲ್ಲಿ ಮತ್ತು ಇನ್ನೊಂದು ಕಣಿವೆಯಲ್ಲಿ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ- ಸಂತ್ರಸ್ತರಿಗಾಗಿ ಅಮೆರಿಕಾದಲ್ಲಿ 8 ಲಕ್ಷ ರೂ. ಸಂಗ್ರಹಿಸಿದ 16ರ ಹುಡುಗಿ
ಮಣಿಪುರವು ನ್ಯಾಯವನ್ನು ಕೇಳುತ್ತದೆ. ಮಣಿಪುರಕ್ಕೆ ಬೆಂಕಿ ಬಿದ್ದಿದ್ದು, ಇಡೀ ಭಾರತವೇ ಹೊತ್ತಿ ಉರಿಯುತ್ತಿದೆ. ಮಣಿಪುರ ಇಬ್ಭಾಗವಾದರೆ ದೇಶವೇ ಇಬ್ಭಾಗವಾಗುತ್ತದೆ. ಪ್ರಧಾನಿ ಮೋದಿಯವರು ಸದನಕ್ಕೆ ಬಂದು ಮಣಿಪುರದ ಬಗ್ಗೆ ಮಾತನಾಡಬೇಕು. ಆದರೆ ಅವರು ಮೌನ ವ್ರತ ಪಾಲಿಸಿದರು. ಅವರು ಲೋಕಸಭೆಯಲ್ಲಿ ಅಥವಾ ರಾಜ್ಯಸಭೆಯಲ್ಲಿ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಮೌನವಾಗಿರಲು ಮೂರು ಕಾರಣಗಳಿವೆ. ರಾಜ್ಯ ಸರ್ಕಾರದ ವೈಫಲ್ಯ, ಗೃಹ ಇಲಾಖೆ ಮತ್ತು ರಾಷ್ಟ್ರೀಯ ಭದ್ರತಾ ವ್ಯವಸ್ಥೆ ವೈಫಲ್ಯ, ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿರುವುದು. ಈ ಕಾರಣಗಳಿಗಾಗಿ ಪ್ರಧಾನಿಗಳು ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಹರಿಯಾಣದಲ್ಲಿ ಕೋಮು ಸಂಘರ್ಷ: 3 ಜಿಲ್ಲೆಯ 14 ಹಳ್ಳಿಗಳಲ್ಲಿ ಮುಸ್ಲಿಮರಿಗೆ ಬಹಿಷ್ಕಾರ – ಜಿಲ್ಲಾಡಳಿತಕ್ಕೆ ಬಹಿರಂಗ ಪತ್ರ
ಗೊಗೊಯ್ ಅವರು ತಮ್ಮ ಪ್ರಸ್ತಾವನೆಯನ್ನು ಸಲ್ಲಿಸಿದರು. ಈ ಸದನವು ಮಂತ್ರಿ ಮಂಡಳಿಯಲ್ಲಿ ವಿಶ್ವಾಸವನ್ನು ಬಯಸುತ್ತದೆ ಎಂದು ಸದನದ ಮುಂದೆ ಸಲ್ಲಿಸಿದರು. ಚರ್ಚೆಯಲ್ಲಿ ಐದು ಸಚಿವರು ಮಾತನಾಡಲಿದ್ದಾರೆ. ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕಿರಣ್ ರಿಜಿಜು. ಇನ್ನು ಹತ್ತು ಬಿಜೆಪಿ ಸಂಸದರು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
Web Stories