ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರಕ್ಕೆ ಶುಕ್ರವಾರ ಅಗ್ನಿಪರೀಕ್ಷೆ ನಡೆಯಲಿದ್ದು, ತೆಲುಗುದೇಶಂ, ಕಾಂಗ್ರೆಸ್, ಎನ್‍ಸಿಪಿ ಸೇರಿದಂತೆ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಮೇಲೆ ಲೋಕಸಭೆಯಲ್ಲಿ ಶುಕ್ರವಾರ ಚರ್ಚೆ ಆರಂಭವಾಗಲಿದೆ.
ಸರ್ಕಾರದ ವಿರುದ್ಧದ ನಡೆ ವಿಫಲ ಕಸರತ್ತು ಎಂದು ಗೊತ್ತಿದ್ದರೂ, ರಾಜಕೀಯ ಲೆಕ್ಕಾಚಾರದಲ್ಲಿ ಪ್ರತಿಪಕ್ಷಗಳಿಗೆ ಇದು ಮುಖ್ಯವಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಳಿವು-ಉಳಿವಿನ ಹೋರಾಟಕ್ಕೆ ವಿಪಕ್ಷಗಳು ಇದನ್ನು ಕೊನೆಯ ಅಸ್ತ್ರವಾಗಿ ಬಳಸಿಕೊಂಡಿವೆ. ಮಿತ್ರಪಕ್ಷಗಳ ಬೆಂಬಲದ ಹೊರತಾಗಿ 273 ಸದಸ್ಯಬಲ ಹೊಂದಿರುವ ಬಿಜೆಪಿ ಸವಾಲು ಎದುರಿಸಲು ಸಿದ್ಧ ಎಂದಿದೆ.
Advertisement
Advertisement
ಇದೇ ವೇಳೆ ತಮ್ಮ ಪರ ಬೆಂಬಲ ನೀಡುವಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮನವೊಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದಾರೆ. ಇತ್ತ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು ಆಂಧ್ರದ ಟಿಡಿಪಿ ಪಕ್ಷವೇ ಹೊರತು ನಾವಲ್ಲ ಎಂದು ಹೇಳುವ ಮೂಲಕ ತಮಿಳುನಾಡು ಸಿಎಂ ಪಳನಿಸ್ವಾಮಿ, ವಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ನಮ್ಮ ಬೆಂಬಲವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆ ಆರಂಭವಾಗಲಿದೆ.
Advertisement
ಲೋಕಸಭೆಯ ಬಲಾಬಲ:
* ಲೋಕಸಭೆ ಒಟ್ಟು ಸ್ಥಾನ – 543
* ಹಾಲಿ ಲೋಕಸಭೆ ಬಲ – 536
* ಗೊತ್ತುವಳಿ ಪಾಸ್ ನಂಬರ್ – 268
Advertisement
ಸರ್ಕಾರದ ಪರ:
ಬಿಜೆಪಿ – 273
ಶಿವಸೇನೆ – 18
ಎಸ್‍ಎಡಿ – 04
ಎಲ್‍ಜಿಪಿ – 06
ಜೆಡಿಯು – 02
ಇತರೆ – 10
ಎನ್‍ಡಿಎ ಬಲ – 313
ಅವಿಶ್ವಾಸ ಗೊತ್ತುವಳಿ ಪರ:
ಕಾಂಗ್ರೆಸ್ – 48
ಟಿಎಂಸಿ – 34
ಟಿಡಿಪಿ – 16
ಸಿಪಿಎಂ – 09
ಎಸ್‍ಪಿ – 07
ಎನ್‍ಸಿಪಿ – 07
ಆರ್‍ಜೆಡಿ – 04
ಆಪ್ – 04
ಎಐಎಂಐಎಂ – 01
ಸಿಪಿಐ – 01
ಆರ್‍ಎಲ್‍ಡಿ – 01
ಒಟ್ಟು ಸ್ಥಾನ – 132
ತಟಸ್ಥ ನಿಲುವು:
ಎಐಎಡಿಎಂಕೆ – 37
ಬಿಜೆಡಿ – 20
ಟಿಆರ್ ಎಸ್ – 11
ಒಟ್ಟು – 68
We haven't brought this. It is Andhra's issue & they brought this. We in Tamil Nadu struggled for 22 days in Parliament for Cauvery Mgmt Board issue. We stalled proceedings. Who came to us? Which state came forward & helped in our cause?: TN CM E.K Palaniswami #NoConfidenceMotion pic.twitter.com/mJosY1xbIv
— ANI (@ANI) July 19, 2018
Congress issues three line whip to its MPs to be present in Lok Sabha for tomorrow's #NoConfidenceMotion pic.twitter.com/C3Uuw9lwrl
— ANI (@ANI) July 19, 2018
Shiv Sena will vote against the #NoConfidenceMotion. The party has issued a whip for its MPs, directing them to support the govt. pic.twitter.com/ltNNFX4qai
— ANI (@ANI) July 19, 2018
Aam Aadmi Party (AAP) issues whip, directs its MPs to vote in favour of #NoConfidenceMotion pic.twitter.com/8LxgCvlcOQ
— ANI (@ANI) July 19, 2018