ನವದೆಹಲಿ: ವಿಪಕ್ಷಗಳಿಗೆ ಐದು ವರ್ಷ ಸಮಯ ನೀಡಿದ್ದೆ, ಆದರೆ ಅವರು ಸರಿಯಾಗಿ ತಯಾರಿ ಮಾಡಿಕೊಂಡು ಬಂದಿರಲಿಲ್ಲ. ವಿಪಕ್ಷಗಳು ಫೀಲ್ಡ್ ಸೆಟ್ ಮಾಡಿದ್ದರು. ಆದರೆ ನಮ್ಮ ಸಂಸದರು ಸಿಕ್ಸರ್, ಬೌಂಡರಿ ಸಿಡಿಸಿದರು. ಅವರು ನೋ ಬಾಲ್ ಎಸೆಯುತ್ತಲೇ ಇದ್ದರು. ನಾವು ಸೆಂಚುರಿ ಸಿಡಿಸಿದೆವು. ಇದು ವಿಪಕ್ಷಗಳ ಅವಿಶ್ವಾಸ ನಿರ್ಣಯ ಭಾಷಣಕ್ಕೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚಾಟಿ ಬೀಸಿದ ಪರಿ.
ಅವಿಶ್ವಾಸ ನಿರ್ಣಯದ (No Confidence Motion) ಮೇಲೆ ನೀವು ಹೇಗೆ ಚರ್ಚೆ ಮಾಡುತ್ತಿದ್ದೀರಿ? ನೀವು ಮತ್ತೆ ಬರಲಿದ್ದೀರಿ ಎಂದು ಮೊದಲೇ ಹೇಳಿದ್ದೆ. ಅವಿಶ್ವಾಸ ನಿರ್ಣಯದಲ್ಲಿ ಹಲವು ವಿಚಿತ್ರಗಳಿದ್ದವು. ಹಿಂದೆ ನಾನು ಎಂದೂ ಈ ರೀತಿ ಕಂಡಿರಲಿಲ್ಲ. ವಿಪಕ್ಷಗಳ ಪೈಕಿ ಅತಿದೊಡ್ಡ ಪಕ್ಷದ ನಾಯಕರ ಹೆಸರು ಭಾಷಣಕಾರರಲ್ಲಿ ಇರಲಿಲ್ಲ ಎಂದು ಕುಟುಕಿದರು.
Speaking in the Lok Sabha. https://t.co/FVFoofiMkA
— Narendra Modi (@narendramodi) August 10, 2023
ಈ ಬಾರಿ ಅಧೀರ್ ರಂಜನ್ ಚೌಧರಿ (Adhir Ranjan Chowdhury) ಅವರಿಗೆ ಏನಾಯಿತು? ಅವರಿಗೆ ಅವರ ಪಕ್ಷ ಮಾತನಾಡಲು ಅವಕಾಶ ನೀಡಲಿಲ್ಲ. ಇಂದು ಅವರಿಗೆ ಅವಕಾಶ ನೀಡಲಾಯಿತು. ಕಾಂಗ್ರೆಸ್ ಪದೇ ಪದೇ ನಾಯಕರಿಗೆ ಅವಮಾನ ಮಾಡುತ್ತಿದೆ. ನಾವು ಅಧೀರ್ ರಂಜನ್ ಚೌಧರಿ ಅವರಿಗೆ ಕರುಣೆ ವ್ಯಕ್ತಪಡಿಸುತ್ತೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ವಿಪಕ್ಷಗಳ ಕಪ್ಪು ಕಾಡಿಗೆಯಂತೆ ಕಪ್ಪು ಬಟ್ಟೆ ಧರಿಸಿ ಸನದಕ್ಕೆ ಬಂದು ಭಾರತಕ್ಕೆ ದೃಷ್ಟಿಯಾಗದಂತೆ ಮಾಡಿವೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ. ವಿಪಕ್ಷಗಳ ಬೈಗುಳವನ್ನು ನಾನು ಟಾನಿಕ್ ಮಾಡಿಕೊಂಡಿದ್ದೇನೆ. ವಿಪಕ್ಷಗಳ ನಾಯಕರಿಗೆ ಗೌಪ್ಯ ವರದಾನ ಸಿಕ್ಕಿದೆ. ಅವರು ಯಾರಿಗೆ ಕೆಟ್ಟದ್ದನ್ನು ಬಯಸುತ್ತಾರೋ ಅವರಿಗೆ ಒಳ್ಳೆದಾಗುತ್ತದೆ. ಒಂದು ಉದಾಹರಣೆ ನಾನೇ. ನನ್ನ ಬಗ್ಗೆ ಬಹಳಷ್ಟು ಹೇಳಿದರು. ಆದರೆ ನನಗೆ ಏನು ಆಗಲಿಲ್ಲ ಎಂದು ಹೇಳಿ ಕುಟುಕಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]