– ರಾಹುಲ್ ವಿರುದ್ಧ ಅಮಿತ್ ಶಾ ವಾಗ್ದಾಳಿ
ನವದೆಹಲಿ: ಲೋಕಸಭೆಯಲ್ಲಿ (Lok Sabha) ಸ್ಪೀಕರ್ ಓಂ ಬಿರ್ಲಾ (Om Birla) ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ (No-Confidence Motion) ವಿಪಕ್ಷಗಳಿಗೆ ಸೋಲುಂಟಾಗಿದೆ. ಇಂದು ಸುದೀರ್ಘ ಚರ್ಚೆ ಬಳಿಕ ಅವಿಶ್ವಾಸ ನಿರ್ಣಯವನ್ನು ಧ್ವನಿಮತಕ್ಕೆ ಹಾಕಲಾಗಿದ್ದು, ವಿಪಕ್ಷಗಳ ನಿರ್ಣಯಕ್ಕೆ ಸೋಲುಂಟಾಗಿದೆ. ಹೀಗಾಗಿ, ಸ್ಪೀಕರ್ ಆಗಿ ಓಂ ಬಿರ್ಲಾ ಮುಂದುವರೆಯಲಿದ್ದು, ಗುರುವಾರ ಲೋಕಸಭೆ ಕಲಾಪಕ್ಕೆ ಹಾಜರಾಗಲಿದ್ದಾರೆ.
ಇದಕ್ಕೂ ಮುನ್ನ, ರಾಹುಲ್ ಗಾಂಧಿ ಮಾತಾಡಿ, ಈ ಸದನ ಒಂದು ಪಕ್ಷವನ್ನು ಪ್ರತಿನಿಧಿಸುವುದಿಲ್ಲ. ಇಡೀ ದೇಶವನ್ನು ಪ್ರತಿನಿಧಿಸುತ್ತದೆ. ಯಾವಾಗಲೂ ನಾವು ಮಾತಾಡಲು ಪ್ರಯತ್ನಿಸಿದರೂ ನಮ್ಮನ್ನು ತಡೆಯಲಾಗುತ್ತಿದೆ ಎಂದು ಆರೋಪಿಸಿದ್ದರು. ಕಳೆದ ಬಾರಿ ನಾನು ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ. ಆಗ ಪ್ರಧಾನಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ಎಂದು ಹೇಳಿದ್ದೆ. ನಮ್ಮ ಪ್ರಧಾನಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: IPL 2026 ವೇಳಾಪಟ್ಟಿ ರಿಲೀಸ್ – ಮಾ.28 ರಿಂದ ಪಂದ್ಯ ಆರಂಭ; ಬೆಂಗಳೂರಲ್ಲಿ ಎಸ್‌ಆರ್‌ಹೆಚ್ vs ಆರ್‌ಸಿಬಿ ಫೈಟ್
ಮಧ್ಯಾಹ್ನದ ಹೊತ್ತಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತಾಡಿ, ಸಂಸತ್ತಿನಲ್ಲಿ ಆರ್ಟಿಕಲ್ 70, ಬಜೆಟ್, ರಾಷ್ಟçಪತಿಗಳ ಭಾಷಣ ಸೇರಿದಂತೆ, ಗಂಭೀರ ವಿಚಾರ ಚರ್ಚೆ ಆಗುವಾಗ ರಾಹುಲ್‌ಗಾಂಧಿ ಚರ್ಚೆಯಲ್ಲಿ ಭಾಗಿಯಾಗಲ್ಲ. ಅವರಿಗೆ ದೇಶದ ಬಗ್ಗೆ ಯಾವುದೇ ಕಾಳಜಿ ಇಲ್ಲ. ವಿದೇಶದಲ್ಲಿ ಕೂತು ದೇಶದ ಬಗ್ಗೆ ಮಾತನಾಡುತ್ತಾರೆ ಅಂತ ಆರೋಪ ಮಾಡಿದ್ರು. ಪ್ರಧಾನಿ ವಿರುದ್ಧ ಅವಿಶ್ವಾಸ ಮಂಡಿಸಿದರೂ ನಾವು ಉತ್ತರ ಕೊಡುತ್ತೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರಿಯಕರ ಫರ್ಮಾನ್ ಖಾನ್ ಜೊತೆ ಕುಂಭಮೇಳದ ವೈರಲ್ ತಾರೆ ಮೊನಾಲಿಸಾ ಮದುವೆ
ಇತ್ತ, ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿ, ಮೋದಿ ಅವರು ಅಮೆರಿಕ, ಇಸ್ರೇಲ್ ಜೊತೆ ಸೇರಿರುವುದರಿಂದ ದೇಶವು ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. ಯುಎಸ್ ಸೀಕ್ರೆಟ್ ಬಹಿರಂಗವಾದರೆ ಮೋದಿ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಕಿಡಿಕಾರಿದರು. ಈ ಮಧ್ಯೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಾಳೆ ವಿಪಕ್ಷಗಳಿಂದ ಹಕ್ಕುಚ್ಯುತಿ ಮಂಡನೆ ಆಗುವ ಸಾಧ್ಯತೆ ಇದೆ. ಇದನ್ನೂ ಓದಿ: ನೈಸ್ ಕಂಪನಿಗೆ ಟೌನ್‌ಶಿಪ್ ಮಾಡಲು ಅವಕಾಶ ಕೊಡಬಾರದು: ರಾಮೋಜಿಗೌಡ

