ರಾಮನಗರ: ರೈತರ (Farmers) ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಇದೊಂದು ದರಿದ್ರ ಸರ್ಕಾರ ಎಂದು ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (H.D.Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಚನ್ನಪಟ್ಟಣ (Channapatna) ತಾಲೂಕಿನ ಹಾರೋಕೊಪ್ಪ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಮಹಾಘಟಬಂಧನ್ ಎಂದು ವಿಜೃಂಭಣೆ ಮಾಡ್ತಿದ್ದಾರೆ. ಕಳೆದ ಎರಡು ತಿಂಗಳಿಂದ 42 ರೈತ ಕುಟುಂಬಗಳ ಆತ್ಮಹತ್ಯೆ ಆಗಿದೆ. ಈ ಸರ್ಕಾರಕ್ಕೆ ರೈತರ ಆತ್ಮಹತ್ಯೆ ಬಗ್ಗೆ ಚಿಂತನೆ ಇಲ್ಲ. ಈ ಬಜೆಟ್‌ನಲ್ಲೂ ಸಹ ಐದು ಗ್ಯಾರಂಟಿಗಳ ಹೆಸರಲ್ಲಿ ಕೃಷಿ ಇಲಾಖೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ರೈತನ ಆತ್ಮಸ್ಥೈರ್ಯ ತುಂಬುವ ಕೆಲಸ ಸರ್ಕಾರ ಮಾಡಲಿಲ್ಲ. ಬಿಜೆಪಿ (BJP) ಸರ್ಕಾರದ ಬಗ್ಗೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್‌ನವರಿಗೆ ಪ್ರಾರಂಭಿಕ ಹಂತದಲ್ಲೇ ಆರ್ಥಿಕ ಶಿಸ್ತು ಇಲ್ಲ. ರಾಜ್ಯದ ಜನತೆ ಮೇಲೆ ಸಾಲದ ಹೊರೆ ಹೇರುತ್ತಿದ್ದಾರೆ. ಐದು ಗ್ಯಾರಂಟಿಗಳ ಹೆಸರಿನಲ್ಲಿ ಲೂಟಿ ಕೆಲಸ ಪ್ರಾರಂಭ ಮಾಡಿದ್ದಾರೆ. ಇದರಿಂದ ಖಜಾನೆಯ ಹಣ ದರೋಡೆ ಆಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: NDA ಸಭೆಗೆ ಆಹ್ವಾನ ಬಂದರೆ ಹೋಗುತ್ತೇನೆ: ಕುಮಾರಸ್ವಾಮಿ
Advertisement
Advertisement
ಇಂದು ಮಹಾನ್ ನಾಯಕರನ್ನು ವಿಮಾನ ನಿಲ್ದಾಣದಿಂದ ತಾಜ್ ವೆಸ್ಟೆಂಡ್‌ವರೆಗೆ (Taj Westend) ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ. ಆ ವಿಜೃಂಭಣೆಯನ್ನು ರೈತರ ಸಮಾಧಿ ಮೇಲೆ ಮಾಡ್ತಿದ್ದಾರೆ. ರೈತರ ಸಮಾಧಿ ಮೇಲೆ ಮಹಾಘಟಬಂಧನ್ ವಿಜೃಂಭಣೆ ನಡೆಯುತ್ತಿದೆ. ಇವರಿಗೆ ನಾಚಿಕೆ ಆಗಬೇಕು. ರೈತ ಕುಟುಂಬಗಳಿಗೆ ಸಾಂತ್ವಾನ ಹೇಳುವ ಕೆಲಸ ಆಗಿಲ್ಲ. ಇವರ ಒಂದೂವರೆ ತಿಂಗಳ ಸಾಧನೆ ಕೇವಲ ವರ್ಗಾವಣೆ ದಂಧೆ. ದೇಶದ ಇತಿಹಾಸದಲ್ಲೇ ವರ್ಗಾವಣೆ ದಂಧೆಯಲ್ಲಿ ಹೆಚ್ಚು ಲೂಟಿ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಆ ಅಧಿಕಾರಿಗಳು ಲಂಚ ಕೊಟ್ಟು ಬಂದು ಜನರ ಬಳಿ ಲೂಟಿ ಮಾಡುತ್ತಾರೆ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: PTCL ಕಾಯ್ದೆ ತಿದ್ದುಪಡಿಗೆ ಬದ್ಧ; ದಲಿತರಿಗೆ ಭೂಮಿ ಪರಭಾರೆ ಆಗ್ಲೇಬೇಕು ಅನ್ನೋದ್ರಲ್ಲಿ ರಾಜಿ ಇಲ್ಲ: ಸಿದ್ದರಾಮಯ್ಯ
Advertisement
ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಇದ್ದರೂ ತಮಿಳುನಾಡು (Tamil Nadu) ನೀರಿನ ಖ್ಯಾತೆ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಟ್ರಿಬ್ಯುನಲ್ ಕೋರ್ಟ್‌ನಲ್ಲಿ ನೀರು ಹಂಚಿಕೆ ಬಗ್ಗೆ ತೀರ್ಪು ಕೊಟ್ಟಿದ್ದಾರೆ. ಅದರ ಆಧಾರದ ಮೇಲೆ ಅವರು ನೀರು ಕೇಳುತ್ತಾರೆ. ಈಗ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಬೇಕು. ಕಾಂಗ್ರೆಸ್ ಸರ್ಕಾರ ಬಂದ್ರೆ ನಾಡಿಗೆ ದರಿದ್ರ, ಬರ ಬರುತ್ತೆ ಅಂತ ಪ್ರತೀತಿ ಇದೆ. ಯಾಕೋ ಈಗಲೂ ಅದೇ ವಾತಾವರಣ ಇದೆ, ನೋಡೋಣ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಸರ್ವಾಧಿಕಾರ ವಿರೋಧಿಸೋರು ಬನ್ನಿ- ಹೆಚ್‍ಡಿಕೆ ವಿರುದ್ಧ ವೇಣುಗೋಪಾಲ್ ಕಿಡಿ
Advertisement
ಬಿಜೆಪಿ ಪಕ್ಷದ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನ್ ವಿಚಾರದ ಬಗ್ಗೆ ಮಾತನಾಡಿದ ಅವರು, ನನಗೆ ಯಾರ ಬಗ್ಗೆಯೂ ಸಾಫ್ಟ್ ಕಾರ್ನ್ ಇಲ್ಲ. ನಾಡಿನ ಜನತೆ ಕಷ್ಟದ ಬಗ್ಗೆ ಸಾಫ್ಟ್ ಕಾರ್ನ್ ಇದೆ. ಪಕ್ಷಗಳ ಬಗ್ಗೆ ಸಾಫ್ಟ್ ಕಾರ್ನ್ ಇಟ್ಟುಕೊಂಡು ಏನು ಮಾಡಲಿ ಎಂದರು. ಇದನ್ನೂ ಓದಿ: ತಾಕತ್ತಿದ್ದರೆ ಸಿದ್ದರಾಮಯ್ಯ ಒಂದು ಪಕ್ಷ ಕಟ್ಟಿ, 5 ಸ್ಥಾನ ಗೆದ್ದು ತೋರಿಸಲಿ – HDK ಬಹಿರಂಗ ಸವಾಲ್
Web Stories