– ಭೂಮಿ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಪರಿಹಾರ ಕೊಡದ ಹಿನ್ನೆಲೆ ಸೀಜ್
ತುಮಕೂರು: ಭೂಮಿ ಕಳೆದುಕೊಂಡಿದ್ದ ಸಂತ್ರಸ್ತರಿಗೆ ಪರಿಹಾರ ಕೊಡದ ಹಿನ್ನೆಲೆ ಕುಣಿಗಲ್ ರೈಲ್ವೆ ನಿಲ್ದಾಣದ (Kunigal Railway Station) ಸ್ಟೇಷನ್ ಮಾಸ್ಟರ್ ಕಚೇರಿಯನ್ನು (Station Master Office) ಜಪ್ತಿ ಮಾಡಲಾಗಿದೆ.
ನೈರುತ್ಯ ರೈಲ್ವೆ ಇಲಾಖೆ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಗಾಗಿ ನಿವೇಶನ ಹಾಗೂ ಮನೆ ಸ್ವಾಧೀನ ಮಾಡಿಕೊಂಡಿತ್ತು. ಮಲ್ಲಾಘಟ್ಟದ ಮೂಡಲಗಿರಿ ಹಾಗೂ ಲಕ್ಕಯ್ಯ ಎಂಬವರು ಮನೆ ಹಾಗೂ ನಿವೇಶನ ಕಳೆದುಕೊಂಡಿದ್ದರು. 2020ರಲ್ಲಿ ಇಬ್ಬರೂ ಸಂತ್ರಸ್ತರಿಗೆ 20 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಮಾಡಿತ್ತು. ಇದನ್ನೂ ಓದಿ: ಚುರುಕುಗೊಂಡ ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಅಳವಡಿಕೆ – 19ನೇ ಗೇಟ್ ಎಲಿಮೆಂಟ್ ತೆರವು, ಕೂಡಿಸುವ ಕಾರ್ಯ ಶುರು
ನ್ಯಾಯಾಲಯದ ಆದೇಶದ ಬಳಿಕವೂ ರೈಲ್ವೆ ಇಲಾಖೆ ಸಂತ್ರಸ್ತರಿಗೆ ಪರಿಹಾರ ನೀಡದೇ ನಿರ್ಲಕ್ಷ್ಯ ತೋರಿತ್ತು. ಈ ಹಿನ್ನೆಲೆಯಲ್ಲಿ ಕುಣಿಗಲ್ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಲಯದ ಸಿಬ್ಬಂದಿ ಕುಣಿಗಲ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕಚೇರಿಯನ್ನು ಜಪ್ತಿ ಮಾಡಲಾಗಿದೆ. ಸದ್ಯ ಸಂತ್ರಸ್ತರು ಕಚೇರಿಯ ಪೀಠೋಪಕರಣಗಳನ್ನು ಕೊಂಡೊಯ್ದಿದ್ದಾರೆ. ಇದನ್ನೂ ಓದಿ: ಕಾರವಾರ| ಡಬಲ್ ಬ್ಯಾರಲ್ ಗನ್‌ನಿಂದ ಶೂಟ್ ಮಾಡಿಕೊಂಡು ಔಷಧಿ ವಿತರಕ ಆತ್ಮಹತ್ಯೆ

