ಬಟ್ಟೆ ಮಾಸ್ಕ್ ಬೇಡ.. ಎನ್95, ಕೆ95 ಮಾಸ್ಕ್‌ಗಳನ್ನೇ ಬಳಸಿ – ತಜ್ಞರ ಸಲಹೆ

Public TV
1 Min Read
mask web 1

ಕೊರೊನಾ ವೈರಸ್‌ನ ಹೊಸ ರೂಪಾಂತರದ ಭೀತಿಯನ್ನು ಇಡೀ ಪ್ರಪಂಚ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರು ಮಾಸ್ಕ್‌ಗಳ ಅಪ್ಗ್ರೇಡ್ ಮಾಡಲು ಸೂಚಿಸುತ್ತಿದ್ದಾರೆ.

ಕೋವಿಡ್-19 ಪ್ರಾರಂಭವಾದಾಗ ವೈದ್ಯಕೀಯ ಸಾಧನಗಳ ಕೊರತೆಯಿತ್ತು. ಈ ಕಾರಣ ಆರೋಗ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಎನ್95 ಮಾಸ್ಕ್‌ಗಳ ಬದಲು ಬಟ್ಟೆಯ ಮಾಸ್ಕ್‌ಗಳನ್ನು ಬಳಸಲು ಪ್ರೋತ್ಸಾಹಿಸಿದ್ದರು.

ಈ ಬಟ್ಟೆಯ ಮಾಸ್ಕ್‌ಗಳನ್ನು ಜನರು ಕಡಿಮೆ ಬೆಲೆಯಲ್ಲಿ ಕೊಳ್ಳಬಹುದಿತ್ತು. ಅವುಗಳನ್ನು ಮರುಬಳಕೆಯೂ ಮಾಡಬಹುದಿತ್ತು. ಹೀಗಾಗಿ ಜನರು ಸಿಂಗಲ್ ಲೇಯರ್‌ನ ಬಟ್ಟೆಯ ಮಾಸ್ಕ್‌ಗಳನ್ನೇ ಹೆಚ್ಚಾಗಿ ಬಳಸಲು ಪ್ರಾರಂಭಿಸಿದ್ದರು. ಇದನ್ನೂ ಓದಿ: ಮಕ್ಕಳನ್ನು ಮಾಡ್ಕೊಳ್ಳಿ, 23.5 ಲಕ್ಷ ಸಾಲ ತಗೊಳ್ಳಿ ಎಂದ ಚೀನಾ ಸರ್ಕಾರ

mask

ಇದೀಗ ಪ್ರಪಂಚವನ್ನೇ ತಲ್ಲಣಗೊಳಿಸುತ್ತಿರುವ ಓಮಿಕ್ರಾನ್ ರೂಪಾಂತರದಿಂದ ಬಚಾವಾಗಲು ಆರೋಗ್ಯ ತಜ್ಞರು ಎನ್95 ಅಥವಾ ಕೆ95 ಮಾಸ್ಕ್‌ಗಳನ್ನು ಬಳಕೆ ಮಾಡಲು ಸಲಹೆ ನೀಡುತ್ತಿದ್ದಾರೆ. ಸದ್ಯ ಈ ಮಾಸ್ಕ್‌ಗಳ ಕೊರತೆ ಇಲ್ಲದಿರುವುದರಿಂದ ಜನರೂ ಅಪ್ಗ್ರೇಡ್ ಆಗುವುದು ಒಳಿತು.

ನಾವು ಅಪ್ಗ್ರೇಡ್ ಏಕೆ ಆಗಬೇಕು?
ಶಸ್ತ್ರಚಿಕಿತ್ಸೆಯಲ್ಲಿ ಬಳಕೆಯಾಗುವ ಮೂರು ಪದರದ ಮಾಸ್ಕ್‌ಗಳು ವೈರಸ್ ವಿರುದ್ಧ ಹೆಚ್ಚಿನ ರಕ್ಷಣೆ ನೀಡುತ್ತದೆ. ಬಟ್ಟೆಯ ಮಾಸ್ಕ್‌ಗಳು ಗಾಳಿಯನ್ನು ಶೇ.75 ರಷ್ಟು ಶುದ್ಧಗೊಳಿಸಿದರೆ, ಎನ್95 ಅಥವಾ ಕೆ95 ಮಾಸ್ಕ್‌ಗಳು ಗಾಳಿಯನ್ನು ಶೇ.95 ರಷ್ಟು ಶುದ್ಧಗೊಳಿಸುತ್ತದೆ. ಇದನ್ನೂ ಓದಿ: ಪರೀಕ್ಷೆಯಲ್ಲಿ ಕರೀನಾ ಕಪೂರ್‌ ಮಗನ ಬಗ್ಗೆ ಪ್ರಶ್ನೆ – ಫೋಟೋ ವೈರಲ್‌

ಹೀಗಿರುವಾಗ ಬಟ್ಟೆಯ ಮಾಸ್ಕ್‌ಗಳಿಗಿಂತಲೂ ಎನ್95 ಅಥವಾ ಕೆ95 ಮಾಸ್ಕ್‌ಗಳು ವೈರಸ್ ತಡೆಯಲು ಉತ್ತಮವಾಗಿದೆ. ಒಂದು ವೇಳೆ ಇಂತಹ ಮಾಸ್ಕ್‌ಗಳಿಕೆ ಹಣ ವ್ಯಯಿಸಲು ಇಷ್ಟಪಡದವರು ಮೂರು ಲೇಯರ್ ಹೊಂದಿರುವ ಬಟ್ಟೆಯ ಮಾಸ್ಕ್‌ಗಳನ್ನು ಬಳಸುವುದು ಉತ್ತಮ.

Share This Article
Leave a Comment

Leave a Reply

Your email address will not be published. Required fields are marked *