ಬೆಂಗಳೂರು: ಪ್ರಣಾಳಿಕೆಯಲ್ಲಿ ಹೇಳಿದ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ (Congress Government) ಇಂದು ಘೋಷಣೆ ಮಾಡಿದ್ದು, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಅವರು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‍ನ ಗ್ಯಾರಂಟಿ (Congress Guarantee) ಗಳಲ್ಲಿ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರ 5 ಕೆ.ಜಿ ಕೊಡುತ್ತೆ. ಇವರು ಕೊಡೋದು ಈಗ 5 ಕೆಜಿ. ಅನ್ನ ಭಾಗ್ಯದಲ್ಲಿ 10 ಕೆ.ಜಿ ಅಂತಾ ಹೇಳ್ತಿಲ್ಲ. 10 ಕೆಜಿ ಆಹಾರ ಧಾನ್ಯ ಅಂತಾ ಸಿಎಂ ಹೇಳ್ತಾರೆ. ಈ 10 ಕೆಜಿಯಲ್ಲಿ ರಾಗಿ, ಜೋಳ ಮತ್ತು ಗೋಧಿ ಕೊಡ್ತೀರಾ..?. ಇದರ ಬಗ್ಗೆ ಸ್ಪಷ್ಟತೆ ಕೊಡ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 5 ಗ್ಯಾರಂಟಿ ಘೋಷಣೆ – ಯಾವ ಯೋಜನೆಗೆ ಎಷ್ಟು ಹಣ ಬೇಕು?
Advertisement
2,000 ರೂ. ಮನೆ ಯಜಮಾನಿಗೆ ಕೊಡೋದರಲ್ಲಿಯೂ ಮಹಾಮೋಸ ಅಡಗಿದೆ. ಆನ್ ಲೈನ್ ಅರ್ಜಿಯಲ್ಲಿ ಅರ್ಧ ತೆಗೆದು ಹಾಕ್ತಾರೆ. ನಾವು ನಿಜವಾಗಲೂ ಬಡವರಿಗೆ ಅನುಕೂಲ ಮಾಡುತ್ತೇವೆ ಅಂದರೆ ಎಂಪವರ್ ಮೆಂಟ್ ಇರಬೇಕು. ಆನ್ ಲೈನ್ ಅರ್ಜಿ ಕರೆದು ಅರ್ಧ ತೆಗೆದು ಮೋಸ ಮಾಡ್ತಾರೆ. ಬಹಳ ಸರಳವಾಗಿ ಮಾಡಬಹುದಿತ್ತು. ಪಿಡಿಓ ಗಳು ಇದ್ದಾರೆ ಅವರ ಮುಖಾಂತರ ಕೊಡಿಸಬಹುದಿತ್ತು. ಈವಾಗ ಆಗಸ್ಟ್‍ನಿಂದ ಕೊಡುತ್ತೇವೆ ಅಂತಾರೆ. ಜೂನ್, ಜುಲೈದು ಸೇರಿಸಿಕೊಡ್ತಾರಾ ಸ್ಪಷ್ಟತೆ ಇಲ್ಲ. ಜೂನ್, ಜುಲೈದು ಸೇರಿಸಿ ಕೊಟ್ಟರೆ ಪ್ರಾಮಾಣಿಕತೆ ಅಂತಾ ಹೇಳಬಹುದಿತ್ತು. ಈ ತಿಂಗಳಿಂದಲೇ ಕೊಡಬಹುದಿತ್ತು. ಆದರೆ ಎರಡು ತಿಂಗಳು ಯಾಮಾರಿಸ್ತಾ ಇದ್ದಾರೆ ಎಂದು ಹೇಳಿದರು.
Advertisement
Advertisement
ಬಸ್ ಪಾಸ್ (Bus Ticket Free) ಬಗ್ಗೆ ಹೇಳಿದ್ದಾರೆ. ರಾಜ್ಯದ ಒಳಗಡೆನೇ ಅಂದಿದ್ದಾರೆ. ಎರಡನೆಯದು ಯಾವ್ಯಾವ ಬಸ್ ಅಂತಾ ಹೇಳದೇ ಕೆಂಪು ಬಸ್ ಅಂತಾ ಹೇಳಿದ್ದಾರೆ ಬರೀ ಯಾಮಾರಿಸಿದ್ದಾರೆ. ನೇರವಾಗಿ ಕೆಂಪು ಬಸ್ ಅಂತಾ ಹೇಳಬೇಕಿತ್ತು. ಇದರಲ್ಲೂ ಗೊಂದಲ ಸೃಷ್ಟಿಸಿದ್ದಾರೆ. ಯುವ ನಿಧಿ ಯೋಜನೆಯಲ್ಲಿ 22 ಮತ್ತು 23 ಕಳೆದ ವರ್ಷ ಪಾಸ್ ಆದವರಿಗೆ, ನಿರುದ್ಯೋಗಿಗಳಿಗೆ ಡಿಗ್ರಿ ಪಡೆದವರಿಗೆ ಕೊಡುತ್ತೇವೆ ಅಂದಿದ್ದಾರೆ. ನಾನು ಹೇಳೋದು ಡಿಗ್ರಿ ಆದ ಮೇಲೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗ್ತಾರೆ. ಮೂರು ವರ್ಷದಿಂದ ನಿರುದ್ಯೋಗದಲ್ಲಿ ಇರೋರಿಗೆ ಕೊಡ ಬೇಕಿತ್ತು. ಸಮರ್ಪಕವಾಗಿ ಪುನರ್ ಚಿಂತನೆ ಮಾಡಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು. ಇದನ್ನೂ ಓದಿ: 200 ಯೂನಿಟ್ ಅಂತ ಹೇಳಿ ಕಾಂಗ್ರೆಸ್‍ನವರು ಯಾಮಾರಿಸಿದ್ದಾರೆ: ಬೊಮ್ಮಾಯಿ
Advertisement
ವೆಚ್ಚ ಎಲ್ಲಿಂದ ತರುತ್ತೀರಾ, ಆದಾಯ ಹೇಗೆ, ಯಾವುದಾದರೂ ಯೋಜನೆ ನಿಲ್ಲಿಸುತ್ತೀರಾ..?, ತೆರಿಗೆ ಹೆಚ್ಚಿಸುತ್ತೀರಾ, ನೀರಾವರಿ ನಿಲ್ಲಿಸ್ತೀರಾ?. ಎಸ್ ಸಿಎಸ್ ಟಿ ಹಾಸ್ಟೆಲ್ ಗಳನ್ನು ನಿಲ್ಲಿಸ್ತೀರಾ..?, ಯಾವ ಯೋಜನೆ ಸ್ಟಾಪ್ ಮಾಡಿ ವೆಚ್ಚ ಭರಿಸ್ತೀರಾ..?, ವೆಚ್ಚ ಹೇಗೆ ಅಂತಾನೇ ಹೇಳಿಲ್ಲ. ಕೇಂದ್ರದ ಯೋಜನೆಗಳನ್ನ ನಿಲ್ಲಿಸ್ತೀರಾ ಜನತೆಗೆ ಕೇಳೋ ಅಧಿಕಾರ ಇದೆ. ಜನರ ಧ್ವನಿಯಾಗಿ ನಾವು ಕೇಳ್ತಾ ಇದ್ದೇವೆ. ನನ್ನ ತೆರಿಗೆ ಹಣ ಎಲ್ಲಿ ಹೋಗ್ತಾ ಇದೆ. ನನ್ನ ದುಡ್ಡಿನಿಂದ ರಾಜ್ಯಕ್ಕೆ ಒಳ್ಳೆದಾಗುತ್ತಾ ಇದೆಯಾ..? ಎಲ್ಲಾ ಪ್ರಶ್ನೆ ಮಾಡಬೇಕಾಗುತ್ತೆ ಎಂದು ಹೇಳಿದರು.
50 ಸಾವಿರಕ್ಕಿಂತ ಹೆಚ್ಚು ಬೇಕು ಅಂತಾ ಮೊದಲೇ ಹೇಳಿದ್ದಾರೆ. ವೆಚ್ಚ ಹೇಗೆ, ಆದಾಯ ಹೇಗೆ ಅಂತಾ ಹೇಳಬೇಕು ಅದನ್ನ ಹೇಳಿಲ್ಲ. ಕರ್ನಾಟಕಕ್ಕೆ ಆರ್ಥಿಕ ಹಿನ್ನಡೆ ಆಗುತ್ತೆ. ಸರಿಯಾಗಿ ಆದಾಯ ತರದೇ ಇದ್ದರೆ ರಾಜ್ಯ ಆರ್ಥಿಕ ಸಂಕಷ್ಟದಲ್ಲಿ ಸಿಲುಕಲಿದೆ. ಯಾವ ರೀತಿ ನಿಭಾಯಿಸ್ತಾರೆ ಎಂಬುದು ನೋಡಬೇಕಾಗಿದೆ. ಕೋವಿಡ್ ನಂತಹ ದೊಡ್ಡ ಕಾಲವನ್ನ ಎದುರಿಸಿಕೊಂಡು ಆರ್ಥಿಕ ಪ್ರಗತಿಯನ್ನ ನಿಭಾಯಿಸಿಕೊಂಡು ಬಂದಿದ್ದೇವೆ. ನಾವು 2 ವರ್ಷ ಲೋನ್ ತೆಗೆದುಕೊಳ್ಳದೇ ಆರ್ಥಿಕ ಪ್ರಗತಿ ಸಾಧಿಸಿದ್ದೇವೆ ಎಂದರು.
ಆರ್ಥಿಕ ಸ್ಥಿತಿ ಹದಗೆಡಿಸಿಕೊಂಡು ಉಚಿತ ಕೊಡೋದು ಸರಿಯಲ್ಲ. ಆರ್ಥಿಕ ಪರಿಸ್ಥಿತಿ ಹದಗೆಡಿಸಿಕೊಂಡು ಉಚಿತ ಕೊಡೋದಕ್ಕೆ ನನ್ನ ತಕರಾರು ಇದೆ. ಯಾವ್ಯಾವ ಯೋಜನೆಗಳನ್ನ ಸ್ಟಾಪ್ ಮಾಡುತ್ತಾರೆ. ಕಿಸಾನ್ ಸಮ್ಮಾನ್, ನೀರಾವರಿ ಯೋಜನೆ ಸ್ಟಾಪ್ ಮಾಡುತ್ತೇವೆ ಅಂತಿದ್ದಾರೆ. ಟೈಂ ಪಾಸ್ ಮಾಡಿ ಟೈಂ ಅಂಡ್ ಮನಿ ಮ್ಯಾನೇಜ್ಮೆಂಟ್ ಮಾಡ್ತಾ ಇದ್ದಾರೆ, ಇದು ಸ್ಥಿರತೆ ಇರಲ್ಲ. ಲೋಕಸಭಾ ಚುನಾವಣೆ ಅಷ್ಟೋತ್ತಿಗೆ ಏನಾಗುತ್ತೋ ಏನೋ ಗೊತ್ತಿಲ್ಲ. ಲೋಕಸಭಾ ಚುನಾವಣೆ ವರೆಗೂ ಯೋಜನೆ ಇರುತ್ತಾ ಆಮೇಲೆ ಸ್ಟಾಪ್ ಆಗುತ್ತಾ ಇಲ್ವ ಅಂತಾ ನೋಡೋಣ. ಅವರಿಗೆ ಇರುತ್ತೆ ಇವರಿಗೆ ಇರಲ್ಲ ಅಂತಾ ಹೇಳ್ತಾ ಇದ್ದಾರೆ. ಎಲ್ಲಿಯವರೆಗೂ ತೆಗೆದುಕೊಂಡು ಹೋಗ್ತಾರೆ ಅಂತಾ ನೋಡೋಣ ಎಮದು ಬೊಮ್ಮಾಯಿ ತಿಳಿಸಿದರು.