ನವದೆಹಲಿ: ದೇಶದ ಒಟ್ಟು 23 ವಿಮಾ ಸಂಸ್ಥೆಗಳಲ್ಲಿ ವಾರಸುದಾರರಿಲ್ಲದೆ ಬರೋಬ್ಬರಿ 15, 167 ಕೋಟಿ ರೂ. ಕೊಳೆಯುತ್ತಾ ಬಿದ್ದಿದೆ ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎ) ವರದಿ ನೀಡಿದೆ.
ಐಆರ್ ಡಿಎ ವರದಿಯ ಪ್ರಕಾರ, ವಿಮೆ ಮಾಡಿದ ಬಳಿಕ ಅದನ್ನು ಮರೆತು ಬಿಟ್ಟಿದ್ದರಿಂದ ಮತ್ತು ವಾರಸುದಾರರಿಗೆ ವಿಮೆಯ ಮಾಹಿತಿಯಿಲ್ಲದೇ ಇರುವುದರಿಂದ 15,167 ಕೋಟಿ ರೂಪಾಯಿ ವಾರಸುದಾರರಿಲ್ಲದ ಹಣ ಜಮೆಯಾಗಿದೆ ಎಂದು ತಿಳಿಸಿದೆ.
Advertisement
2018ರ ಮಾರ್ಚ್ 31ರವರೆಗೂ 15,166 ಕೋಟಿ ರೂ. ಬಾಕಿ ಉಳಿದಿದ್ದು ಈ ಪೈಕಿ ಎಲ್‍ಐಸಿ 10,509 ಕೋಟಿ ರೂ. ಉಳಿದ 22 ಖಾಸಗಿ ಸಂಸ್ಥೆಗಳು 4,657.47 ಕೋಟಿ ರೂ. ಜಮೆ ಆಗಿದೆ ಎಂದು ವರದಿ ನೀಡಿದೆ.
Advertisement
ಖಾಸಗಿ ವಿಮಾಸಂಸ್ಥೆಗಳಾದ ಐಸಿಐಸಿಐ ಪ್ರೋಡೆನ್ಷಿಯಲ್ ಲೈಫ್ ಇನ್ಸೂರೆನ್ಸ್ ಕಂಪೆನಿ 807.4 ಕೋಟಿ ರೂ. ರಿಲಯಲ್ಸ್ ನಿಪ್ಪಾನ್ ಲೈಫ್ ಇನ್ಸೂರೆನ್ಸ್ ಕಂಪೆನಿ 696.12 ಕೋಟಿ ರೂ., ಎಸ್‍ಬಿಐ ಲೈಫ್ ಇನ್ಸೂರೆನ್ಸ್ ನಿಗಮ 678.59 ಕೋಟಿ ರೂ. ಹಾಗೂ ಹೆಚ್‍ಡಿಎಫ್‍ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಸೂರೆನ್ಸ್ ಕಂಪೆನಿ 659.3 ಕೋಟಿ ರೂ. ಮೊತ್ತ ಜಮೆಯಾಗಿದೆ ಎಂದು ಐಆರ್ ಡಿಐ ತಿಳಿಸಿದೆ.
Advertisement
ಈ ಸಂಬಂಧ ಜಮೆಯಾದ ಹಣವನ್ನು ಶೀಘ್ರವೇ ವಿಮಾ ಪಾಲಿಸಿದಾರರನ್ನು ಖುದ್ದು ಪತ್ತೆಹಚ್ಚಿ, ಮರು ಪಾವತಿಸುವಂತೆ ದೇಶದ 23 ವಿಮಾ ಸಂಸ್ಥೆಗಳಿಗೆ ಐಆರ್‍ಡಿಎ ಆದೇಶ ನೀಡಿದೆ.