ಚಿಕ್ಕಮಗಳೂರು: ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಮಲೆನಾಡಿನ ಕೆಲ ಕುಗ್ರಾಮಗಳಲ್ಲಿ ಪರಿಸ್ಥಿತಿ ಓಬಿರಾಯನ ಕಾಲದಂತೆಯೇ ಇದೆ. ಚಿಕ್ಕಮಗಳೂರಿನ ಮೂಡಿಗೆರೆಯ ಅರೆನೂರು ಗ್ರಾಮಕ್ಕೆ ಈಗಲೂ ಸೇತುವೆಯೇ ಇಲ್ಲ. ಜನ ಸಂಕದ ಮೇಲೆ ಪ್ರಾಣ ಕೈಲಿಟ್ಟು ನಡೆದುಕೊಂಡು ಹೋಗ್ತಿದ್ದಾರೆ.
Advertisement
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಗೋಡು ಗ್ರಾಮದ ಸಮೀಪದ ಅರೆನೂರು ಗ್ರಾಮಸ್ಥರ ಕಥೆ-ವ್ಯಥೆ. ಮಳೆಗಾಲದಲ್ಲಂತೂ ಇವರ ಪಾಡು ಕೇಳೋದೇ ಬೇಡ. ಮಾಗೋಡು ಗ್ರಾಮದಿಂದ ಈ ಅರೆನೂರು ಮೂಲಕ ಎರಡ್ಮೂರು ಹಳ್ಳಿಗಳಿಗೆ ಸಂಪರ್ಕವಿದೆ. ಅರೆನೂರು ಗ್ರಾಮದಲ್ಲಿ ಸುಮಾರು 35 ಮನೆಗಳಿವೆ. ಬಾಳೆಹೊನ್ನೂರು ಮಾರ್ಗದ ಮಾಗೋಡು ಹೆದ್ದಾರಿಗೆ ಕೇವಲ ಒಂದು ಕಿ.ಮೀ. ಆದರೆ ಅರೆನೂರು ಗ್ರಾಮದ ಜನ ಮಾಗೋಡಿಗೆ ಬರಬೇಕಂದ್ರೆ ಸುಮಾರು 8 ಕಿ.ಮೀ. ಸುತ್ತಿ ಬರಬೇಕು. ಈ ಹಳ್ಳಕ್ಕೆ ಸೇತುವೆ ನಿರ್ಮಾಣವಾದ್ರೆ ಒಂದೇ ಕಿ.ಮೀ. ಮಾಗೋಡು ಹೆದ್ದಾರಿಗೆ ಬರುತ್ತಾರೆ.
Advertisement
Advertisement
ಶತಮಾನಗಳಿಂದ ಒಂದು ಸೇತುವೆಗಾಗಿ ಜನನಾಯಕರು ಹಾಗೂ ಅಧಿಕಾರಿಗಳಿಗೆ ಬೇಡಿದ್ರೂ ಪ್ರಯೋಜನವಾಗಿಲ್ವಂತೆ. ಮೂಡಿಗೆರೆಯಲ್ಲಿ ವಾರ್ಷಿಕ ದಾಖಲೆ ಮಳೆ ಸುರಿಯುತ್ತೆ. ಮಕ್ಕಳು ತಿಂಗಳಗಟ್ಟಲೇ ಶಾಲೆಗೆ ಹೋಗಲ್ಲ, ಹೋದರು ಕಂಡವರ ಮನೆಯಲ್ಲಿ ರಾತ್ರಿ ಕಳೆಯಬೇಕಾದ ಸ್ಥಿತಿ ಎದುರಾಗಿದೆ. ಇದನ್ನೂ ಓದಿ: ರಸ್ತೆ ಪಕ್ಕದಲ್ಲೇ ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ