‘ಬಿಗ್ ಬಾಸ್’ಗಾಗಿ ಬ್ರೇಕಪ್ ಮಾಡಿಕೊಂಡಿಲ್ಲ: ವರ್ಷಾ ಕಾವೇರಿ ಸ್ಪಷ್ಟನೆ

Public TV
4 Min Read
varsha kaveri 2

ವರ್ಷದ ಬಿಗ್ ಬಾಸ್ (Bigg Boss Kannada) ಮನೆಗೆ ಖ್ಯಾತ ಯುಟ್ಯೂಬರ್ ಹಾಗೂ ಇನ್ಸ್ಟಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ  ವರ್ಷಾ-ವರುಣ್ (Varun Aradhya) ಜೋಡಿಯಾಗಿ ಬರುತ್ತಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸುವುದಕ್ಕಾಗಿಯೇ ಈ ಜೋಡಿ ಬ್ರೇಕ್ ಅಪ್ (Break Up) ನಾಟಕವಾಡಿದೆ ಎಂದು ಆರೋಪವಿತ್ತು. ಇದಕ್ಕೆ ವರ್ಷಾ ಕಾವೇರಿ ಸ್ಪಷ್ಟನೆಯನ್ನು ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಲು ನಾಟಕವಾಡುವ ಅವಶ್ಯಕತೆ ಇಲ್ಲವೆಂದು ಅವರು ಹೇಳಿಕೊಂಡಿದ್ದಾರೆ.

varsha kaveri 1

ಏನಿದು ಬ್ರೇಕ್ ಅಪ್ ಸ್ಟೋರಿ?

ಖ್ಯಾತ ಯೂಟ್ಯೂಬರ್ಸ್, ಟಿಕ್ ಟಾಕ್ ಸ್ಟಾರ್ಸ್ ವರ್ಷಾ ಕಾವೇರಿ- ವರುಣ್ ಆರಾಧ್ಯ  ಬ್ರೇಕಪ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ವರ್ಷಾ (Varsha Kaveri) ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದರು. ಈಗ ವರುಣ್ ಆರಾಧ್ಯ ಬ್ರೇಕಪ್ ಬಗ್ಗೆ ಮೌನ ಮುರಿದ್ದಾರೆ. ಬ್ರೇಕಪ್ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ರಿಯಾಕ್ಟ್ ಮಾಡಿದ್ದಾರೆ.

varsha kaveri 3

ಎಲ್ಲರಿಗೂ ನಮಸ್ಕಾರ ನೀವು ವರ್ಷಾ ಕಾವೇರಿ- ನನಗೆ ತೋರಿಸಿದ ಸಪೋರ್ಟ್‌ಗೆ ತುಂಬಾ ವಂದನೆಗಳು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಲಹೆ ಮತ್ತು ದೃಷ್ಟಿಕೋನವಿದೆ. ಹೀಗಾಗಿ ನಮ್ಮ ನಿರ್ಧಾರವನ್ನು ನೀವು ಒಪ್ಪಿಕೊಂಡು ನಮಗೆ ಸಪೋರ್ಟ್ ಮಾಡಬೇಕು. ವರ್ಷಾ- ನಾನು ಪರಸ್ಪರ ತೀರ್ಮಾನ ಮಾಡಿಕೊಂಡು ದೂರ ಆಗಿರುವುದಕ್ಕೆ ನಮ್ಮ ಸ್ನೇಹಿತರು ಅಥವಾ ನಮ್ಮ ಕುಟುಂಬದವರು ಕಾರಣವಲ್ಲ. ಅವರನ್ನು ಈ ವಿಚಾರದಲ್ಲಿ ಎಳೆಯಬೇಡಿ. ಒಳ್ಳೆಯ ರೀತಿಯಲ್ಲಿ ಸಂಬಂಧ ಶುರು ಮಾಡಿ, ಒಳ್ಳೆಯ ರೀತಿಯಲ್ಲಿ ಅಂತ್ಯವಾಡುತ್ತಿದ್ದೀವಿ. ವರ್ಷಾ ಕಾವೇರಿ ಮುಂದಿನ ಕೆಲಸಗಳಿಗೆ ಒಳ್ಳೆಯದಾಗಲಿ ಎಂದು ಹೇಳಲು ಇಷ್ಟ ಪಡುತ್ತೀನಿ. ಇಲ್ಲಿಯತನಕ ನೀವು ನೀಡಿದ ಪ್ರೋತ್ಸಾಹ ಮತ್ತು ಬೆಂಬಲ ಇನ್ನು ಮುಂದೆನೂ ಸದಾ ಇರಲಿ ಎಂದು ವರುಣ್ ಬರೆದುಕೊಂಡಿದ್ದರು. ಈ ಬೆನ್ನಲ್ಲೇ ನೆಟ್ಟಿಗರು ವರುಣ್‌ಗೆ ಕ್ಲಾಸ್‌ ತೆಗೆದುಕೊಂಡಿದ್ದರು. ವರ್ಷಾ ಗಿಫ್ಟ್‌ ಮಾಡಿದ ಬೈಕ್‌ನಲ್ಲಿ, ಡುಡ್ಡಿನಲ್ಲಿ ಶೋಕಿ ಮಾಡ್ತಿದ್ದೀರಾ. ಅದನ್ನು ಅವರಿಗೆ ವಾಪಾಸ್‌ ಕೊಡಿ. ಪ್ರೀತಿಗೆ ಮೋಸ ಮಾಡಿ ಇನ್ನೊಬ್ಬರ ಹಿಂದೆ ಹೋಗಿದ್ದೀರಾ ಥೂ ಎಂದೆಲ್ಲಾ ಕಾಮೆಂಟ್‌ ಮಾಡಿದ್ದರು.

varsha kaveri

ವರುಣ್ ಬ್ರೇಕಪ್ ಬಗ್ಗೆ ಸಹೋದರಿ ಚೈತ್ರಾ ಆರಾಧ್ಯಗೂ ಪ್ರಶ್ನೆ ಮಾಡಿದ್ದರು. ಹಾಗಾಗಿ ಅವರು ಕೂಡ ಸ್ಪಷ್ಟನೆ ನೀಡಿದ್ದರು. ಇಲ್ಲಿ ಯಾರೂ ಯಾರಿಗೂ ಸಪೋರ್ಟ್ ಮಾಡುತ್ತಿಲ್ಲ. ಅವರಾಗಿಯೇ ನಿರ್ಧಾರ ತೆಗೆದುಕೊಂಡಿರುವುದು. ಈ ವಿಚಾರದಲ್ಲಿ ನಮ್ಮನ್ನು ದೂರಬೇಡಿ. ನಮ್ಮನ್ನು ಕೇಳಿ ಹೇಳಿ ಅವರಿಬ್ಬರು ಸಂಬಂಧ ಶುರು ಮಾಡಿಲ್ಲ. ಅವರಿಬ್ಬರೇ ಸೃಷ್ಟಿಸಿಕೊಂಡಿರುವ ಪ್ರಪಂಚ ಮಾಡಿಕೊಂಡಿರುವ ದಾರಿ. ಅವರಿಬ್ಬರೂ ದೂರಾಗುತ್ತಿರುವು ಸರಿಯಲ್ಲ ಅದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಆದರೆ ಭವಿಷ್ಯದಲ್ಲಿ ಅವರೇ ಒಟ್ಟಿಗಿದ್ದು ಪರಸ್ಪರ ಖುಷಿ ಮತ್ತು ನೋವು ಹಂಚಿಕೊಳ್ಳಬೇಕು. ಅವರಿಬ್ಬರ ಮೇಲೆ ಯಾರೂ ದ್ವೇಷ ಸಾಧಿಸಬೇಡಿ. ಪ್ರತಿಯೊಬ್ಬರಿಗೂ ಪರ್ಸನಲ್ ಸಮಸ್ಯೆ ಇರುತ್ತದೆ. ಪರ್ಸನಲ್ ಜೀವನ ಇರುತ್ತದೆ. ನಮಗೂ ಜೀವನ ಇದೆ. ಅದರ ಮೇಲೆ ಗಮನ ಕೊಟ್ಟು ಮುಂದೆ ಸಾಗೋಣ. ಈ ಸಮಯದಲ್ಲಿ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಿರುವ ಪ್ರತಿಯೊಬ್ಬರಿಗೂ ವಂದನೆಗಳು ಎಂದು ಚೈತ್ರಾ ಬರೆದುಕೊಂಡಿದ್ದರು.

 

ಎಲ್ಲರಿಗೂ ನಮಸ್ಕಾರ, ತುಂಬಾ ದಿನದಿಂದ ನೀವೆಲ್ಲ ನನಗೆ ಕೇಳಿದ್ದಂತಹ ಸಾಮಾನ್ಯ ಪ್ರಶ್ನೆ ಏನೆಂದರೆ ನಿನಗೂ, ವರುಣ್‌ಗೂ ಏನಾಯಿತೆಂದು. ಆ ವಿಷಯದ ಬಗ್ಗೆ ನಾನು ಇವತ್ತು ಮಾತನಾಡಲು ಮುಂದೆ ಬಂದಿದ್ದೇನೆ. ನಿಮಗೆಲ್ಲ ಗೊತ್ತಿರುವ ವಿಷಯ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನ ಬಿಟ್ಟು, ಬೇರೆ ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟವಿಲ್ಲ. ಏಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ- ವರುಣ್ ಮಧ್ಯೆ ಮನಸ್ತಾಪಗಳು ಆಗಿತ್ತು. ನಾನು ಎಷ್ಟೇ ಹೇಳಿದರೂ ಸಹ ಅವನು ಆ ಹುಡುಗಿಯನ್ನು ಬಿಡೋದಿಕ್ಕೆ ತಯಾರಿರಲಿಲ್ಲ. ಆದ್ದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ ಎಂದು ತಿಳಿಸಿದ್ದ.

varsha kaveri 2

ನಾನು ಆ ಹುಡುಗಿಯ ಜೊತೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಹೇಳಿದಾಗ ನನ್ನ ಮನಸ್ಸಿಗೆ ತುಂಬ ನೋವಾಯ್ತು. ಆದ್ದರಿಂದ ನಾನು ಕಳೆದ ಎರಡು ತಿಂಗಳಿಂದ ನನ್ನ, ವರುಣ್ ವಿಡಿಯೋಗಳನ್ನು ಅಪ್‌ಲೋಡ್ ಮಾಡ್ತಿಲ್ಲ. ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳದಿದ್ರೆ ನನಗೆ ನಾನೇ ಮೋಸ ಮಾಡಿಕೊಳ್ತೀನಿ ಅಂತ ಮನಸ್ಸಿಗೆ ಅನಿಸಿದೆ. ಆದ್ದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡ್ತಿದ್ದೀನಿ. ಇನ್ನು ಮುಂದೆ ನನ್ನ ವರುಣ್ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರೋದಿಲ್ಲ. ಅವನು ಆ ಹುಡುಗಿ ಜೊತೆ ಖುಷಿಯಾಗಿರಲಿ.

 

ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ, ನಾನು ಅವರಿಗಾಗಿ ಜೀವನವನ್ನು ನಡೆಸಬೇಕು, ಆದ್ದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ, ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಿರಿ ಎಂದು ನಾನು ಭಾವಿಸಿರುವೆ. ಇದು ಯಾವುದೇ ಫ್ರ್ಯಾಂಕ್ ಅಲ್ಲ, ಕಳೆದ 2 ತಿಂಗಳುಗಳಿಂದ ನಾನು ಇದನ್ನೂ ಫೇಸ್ ಮಾಡುತ್ತಿದ್ದೇನೆ ಎಂದು ನಟಿ ಸ್ಪಷ್ಟನೆ ನೀಡಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article